ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ವಿರುದ್ದ ಅವಹೇಳನಕಾರಿ ಟ್ವೀಟ್ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಐಟಿ ಸೆಲ್ ಸದಸ್ಯನನ್ನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್‌ನ ಸೈಬರ್ ಸೆಲ್ ಗುರುವಾರದಂದು ಬಂಧಿಸಿದೆ.
ಆರೋಪಿಯನ್ನು ಜಿತೇನ್ ಗಜಾರಿಯಾ ಎಂದು ಗುರುತಿಸಲಾಗಿದೆ. ಆರೋಪಿಯು ಜನವರಿ 4 ರಂದು “ಮರಾಠಿ ರಾಬ್ರಿ ದೇವಿ” ಎಂಬ ಶೀರ್ಷಿಕೆಯೊಂದಿಗೆ ರಶ್ಮಿ ಅವರ ಫೋಟೋವನ್ನು ಟ್ವಿಟರ್‌ಗೆ ಪೋಸ್ಟ್ ಮಾಡಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದ ಬಿಜೆಪಿ ಶಾಸಕಿ
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಪತಿ ಲಾಲು ಪ್ರಸಾದ್ ರಾಜೀನಾಮೆ ನೀಡುವಂತಾದಾಗ ಬಿಹಾರದಲ್ಲಿ ರಾಬ್ರಿ ದೇವಿ ಅವರು ಅಧಿಕಾರ ವಹಿಸಿಕೊಂಡಂತೆ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಆರೋಗ್ಯ ಸಮಸ್ಯೆಯಾದಾಗ ಅವರ ಪತ್ನಿ ಅವರ ಸ್ಥಾನವನ್ನು ವಹಿಸಿಕೊಳ್ಳುತ್ತಾರೆ ಎಂಬ ಶೀರ್ಷಿಕೆ ಅದಕ್ಕೆ ನೀಡಲಾಗಿತ್ತು.
ಜಿತೇನ್ ಗಜಾರಿಯಾ ಅವರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವರದಿಯಲ್ಲಿ ಹೇಳಿದೆ.
“ಸೈಬರ್ ಪೊಲೀಸರು ಕಾರಣ ಅಥವಾ ದೂರುದಾರ ಯಾರು ಎಂದು ನಮೂದಿಸದೆ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಪತ್ರವನ್ನು ನೀಡಿದ್ದರು. ಅವರ ಸೂಚನೆಗಳ ಪ್ರಕಾರ ನನ್ನ ಕಕ್ಷಿದಾರನು ಅವರ ಮುಂದೆ ಹಾಜರಾಗಿದ್ದರೆ. ಈಗ ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ” ಎಂದು ಜಿತೇನ್ ಗಜಾರಿಯಾ ಅವರ ವಕೀಲ, ಬಿಜೆಪಿ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ:‘ನಮ್ಮದು ಕೊರೊನಾ ವಿರೋಧಿ ಸರ್ಕಾರವೇ ಹೊರತು, ಹಿಂದೂ ವಿರೋಧಿಯಲ್ಲ’ – BJP ಗೆ ತಿರುಗೇಟು ನೀಡಿದ ಉದ್ದವ್ ಠಾಕ್ರೆ


