Homeಕರ್ನಾಟಕ‘ಧೀರ ಭಗತ್ ರಾಯ್‌’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್

‘ಧೀರ ಭಗತ್ ರಾಯ್‌’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್

- Advertisement -
- Advertisement -

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ನಡೆಯುವ ಜಾತೀಯತೆ ಮತ್ತು ರಾಜಕೀಯದ ಸುತ್ತ ನಡೆಯುವ ಘಟನೆಗಳನ್ನು ‘ಧೀರ ಭಗತ್ ರಾಯ್‌’ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ ಕನ್ನಡ ಚಿತ್ರರಂಗದ ಹೊಸ ನಿರ್ದೇಶಕ ಕರ್ಣನ್ ಎ.ಎಸ್.

ಚಿತ್ರರಂಗದಲ್ಲಿ ಎಂಟು ವರ್ಷದ ಅನುಭವವಿರುವ ನೆಲಮಂಗಲದ ಕರ್ಣನ್, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಪಾ. ರಂಚಿತ್ ಅವರೇ ನನಗೆ ಇಂತಹ ಸಿನಿಮಾ ಮಾಡಲು ಸ್ಪೂರ್ತಿ. ಎನ್ನುವ ಕಲೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಜನರಿಗೆ ಮನಮುಟ್ಟುವಂತೆ ತೋರಿಸಬಹುದು ಎನ್ನುತ್ತಾರೆ.

ಚಿತ್ರದ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕರ್ಣನ್, “ನರಗುಂದ ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ sc ಮೀಸಲಾತಿ ಕ್ಷೇತ್ರದಲ್ಲಿ ನಡೆಯುವ ಜಾತಿ, ರಾಜಕೀಯದ ಸುತ್ತ ನಡೆಯುವ ಕತೆಯಿದು. 1975, 85, 97, 2004 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಒಂದು ಗ್ಯಾಂಗ್ ಸ್ಟಾರ್‌, ಪೊಲಿಟಿಕಲ್ ಸಿನಿಮಾವನ್ನು ನಾನ್ ಲೀನಿಯರ್‌ ಆಗಿ ಪರಿಚಯಿಸುತ್ತಿದ್ದೇವೆ. ತುಂಬಾ ರಿಸರ್ಚ್ ಮಾಡಿ, ಪ್ಲ್ಯಾನ್ ಮಾಡಿ ಚಿತ್ರದ ತಯಾರಿ ಮಾಡಿದ್ದೇವೆ” ಎಂದಿದ್ದಾರೆ.

“ಒಂದು ಮೀಸಲು ಕ್ಷೇತ್ರದಲ್ಲಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ. ನಾವು ಆಯ್ಕೆ ಮಾಡಿ ಕಳುಹಿಸುವವರು ನಮಗಾಗಿ ಕೆಲಸ ಮಾಡುತ್ತಾರೆಯೇ…? ಗೆದ್ದ ಶಾಸಕನನ್ನು ಕಂಟ್ರೋಲ್ ಮಾಡುವ ಕೈಗಳು ಯಾವುವು…? ಮೀಸಲು ಕ್ಷೇತ್ರದಲ್ಲಿ ಹೇಗೆ ತಮಗೆ ಬೇಕಾದವರನ್ನು ಗೆಲ್ಲಿಸಿಕೊಳ್ಳುತ್ತಾರೆ. ಆ ಕ್ಷೇತ್ರದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸುಧಾರಣೆಗಳಗಿವೆಯೇ ಎಂಬುದು ಮುಖ್ಯ. ನಾನು ಕೂಡ ಒಬ್ಬ ಮೀಸಲು ಕ್ಷೇತ್ರದಲ್ಲಿ ಬೆಳೆದವನಾದ್ದರಿಂದ, ಅಲ್ಲಿನ ಸಮಸ್ಯೆಗಳ ಜೊತೆಯಲ್ಲಿಯೇ ಬದುಕು ಸಾಗಿಸುತ್ತಿರುವ ಕಾರಣ ಇದರ ಕುರಿತು ಏಕೆ ಸಿನಿಮಾ ಮಾಡಬಾರದು ಎಂಬ ಆಯೋಚನೆ ಬಂತು. 2 ವರ್ಷ ಒಂದು ಕಥೆಯ ಮೇಲೆ ಕೆಲಸ ಮಾಡಿ ಸಿನಿಮಾ ನಿರ್ದೇಶಿಸಿದ್ದೇನೆ” ಎನ್ನುತ್ತಾರೆ ಕರ್ಣನ್.

ಇದನ್ನೂ ಓದಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ

ಮುಂದುವರಿದು, ಸಿನಿಮಾಗೆ ‘ಧೀರ ಭಗತ್ ರಾಯ್‌’ ಎಂಬ ಹೆಸರು ಇಡಲು ಮುಖ್ಯ ಕಾರಣವಿದೆ ಎಂದಿದ್ದಾರೆ. ಚಿತ್ರದಲ್ಲಿ ಈ ಹೇಸರು ಹೇಗೆ ರಾಜಕೀಯ ಅಜೆಂಡಾವಾಗಿ ಕೆಲಸ ಮಾಡುತ್ತದೆ ಎಂದುದನ್ನು ಚಿತ್ರ ನೋಡಿ ಎನ್ನುತ್ತಾರೆ ನಿರ್ದೇಶಕ.

’ಕಥಾ ನಾಯಕ ಭಗತ್ ಎಂಬುವವ ಒಬ್ಬ ವಕೀಲ. ಆತ ತನ್ನ ಜನರಿಗಾಗಿ ಹೇಗೆ ಗ್ಯಾಂಗ್‌ಸ್ಟರ್‌ ಆಗಿ ಬಳಿಕ ರಾಜಕೀಯ ನಾಯಕನಾಗುತ್ತಾನೆ ಎಂಬುದು ಕಥೆ. ರಾಜಕೀಯ ಶಕ್ತಿ ಇದ್ದರೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ಜಾತಿಮುಕ್ತ ಸಮಾಜ ನಿರ್ಮಾಣಕ್ಕೆ ನಾವು ಆಳುವ ವರ್ಗದಲ್ಲಿರಬೇಕು. ಅಧಿಕಾರದಿಂದ ವಂಚಿತರಿಗೆ ರಾಜಕೀಯ ಶಕ್ತಿ ದೊರಕಬೇಕು’ ಎಂದಿದ್ದಾರೆ.

ಕಾಲ್ಪನಿಕ ಚಿತ್ರದಲ್ಲಿ ತಮ್ಮ ಅನುಭವಗಳನ್ನು ಸೇರಸಿ ಕಥೆ ಬರೆದಿದ್ದಾರೆ ನಿರ್ದೇಶಕ. ಕಮರ್ಷಿಲ್‌ ಆಗಿ ಈ ಚಿತ್ರವನ್ನು ತಯಾರು ಮಾಡಿದ್ದೇವೆ. ಮಾಸ್ ಪ್ರೇಕ್ಷಕರಿಗೆ ಯಾವುದೇ ಬೇಸರವಾಗುವುದಿಲ್ಲ. ಚಿತ್ರದಲ್ಲಿ ನಾಲ್ಕು ಸಾಹಸ ದೃಶ್ಯಗಳಿದ್ದು, ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರ ನಿರ್ದೇಶನವಿದೆ ಎಂದು ಭರವಸೆ ನೀಡಿದ್ದಾರೆ.

ರಂಗಭೂಮಿ ಕಲಾವಿದ ರಾಕೇಶ್ ದಳವಾಯಿ, ನಟ ಶರತ್ ಲೋಹಿತಾಶ್ವ, ನಟಿ ಸುಚರಿತ, ಚೈತ್ರಾ ಕೊಟ್ಟೂರು ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಲೂಸಿಯಾ, ಯೂಟರ್ನ್ ಖ್ಯಾತಿಯ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಜ.15 ಕ್ಕೆ ಟ್ರೈಲರ್‌ ಬಿಡುಗಡೆಯಾಗಲಿದ್ದು, ನಂತರ ತೆಲುಗು, ತಮಿಳು ಭಾಷೆಗೂ ಚಿತ್ರ ತರುವ ಯೋಜನೆಯಿದೆ. ಮಾರ್ಚ್‌ಗೆ ಸಿನಿಮಾ ಚಿತ್ರಮಂದಿರಗಳಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ವಿದಾಯ 2021: ಕಳೆದ ವರ್ಷ ನಮ್ಮನ್ನಗಲಿದ ಚಿತ್ರರಂಗದ ತಾರೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

0
ಇವಿಎಂ ಮತ್ತು ವಿವಿಪ್ಯಾಟ್‌ಗಳ ಎಲ್ಲಾ (ಶೇ.100) ಮತಗಳನ್ನು ತಾಳೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ...