Homeಕರ್ನಾಟಕಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

ಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

- Advertisement -
- Advertisement -

| ನೀಲಗಾರ |

ಕಳೆದ ವಾರ ‘ಆಗಿಯೇಬಿಟ್ಟಿತಾ ಜೆಡಿಎಸ್-ಬಿಜೆಪಿ ಮೈತ್ರಿ?’ ಎಂಬ ವರದಿ ನಮ್ಮಲ್ಲಿ ಪ್ರಕಟವಾಗಿತ್ತು. ಮೇಲ್ನೋಟಕ್ಕೆ ಕುಮಾರಸ್ವಾಮಿಯವರ ಸಿದ್ಧಾಂತಹೀನ ದುಡುಕಿನ ಹೇಳಿಕೆಯಂತೆ ಕಂಡಿದ್ದ ಬೆಂಬಲದ ಹೇಳಿಕೆಯ ಹಿಂದೆ ಸ್ಪಷ್ಟ ಲೆಕ್ಕಾಚಾರವಿತ್ತು. ಸಿದ್ಧಾಂತಕ್ಕೂ ಅವರಿಗೂ ಸಂಬಂಧ ಹೇಗೂ ಇರಲಿಲ್ಲ. ಆದರೆ ಜೆಡಿಎಸ್‌ನ ಅಸ್ತಿತ್ವವೇ ಅಲುಗಾಡುತ್ತಿದೆ ಎಂಬುದನ್ನು ವಿವರಿಸುವ ನಾಲ್ಕು ಅಂಶಗಳನ್ನು ಆ ವರದಿಯಲ್ಲಿ ಬರೆಯಲಾಗಿತ್ತು.

ಇದೀಗ ದೇವೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ, ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಅಭಯವನ್ನು ನೀಡಿದ್ದಾರೆ. ಬಹಳ ನಾಜೂಕಿನಿಂದ ಅದಕ್ಕೆ ಬೇಕಾದ ಸಮರ್ಥನೆಯನ್ನೂ ಕೊಡುವ ಪ್ರಯತ್ನ ಮಾಡಿದ್ದಾರೆ. ‘ಸಿದ್ದರಾಮಯ್ಯ ಅಹಿಂದ ನಾಯಕ. ನಾನು ಯಾವ ಹಿಂದ ನಾಯಕನೋ ಗೊತ್ತಿಲ್ಲ. ಅವರು ಬೇಕಾದರೆ ಇನ್ನೊಂದು ಚುನಾವಣೆ ಬರಲಿ ಎಂತಲೂ ಹೇಳಬಹುದು. ನಾನು ಅಷ್ಟು ಶಕ್ತನಲ್ಲ. ಹಾಗಾಗಿ ಚುನಾವಣೆ ಬರುವುದು ಬೇಡ’ ಎಂದಿದ್ದಾರೆ. ದೇವೇಗೌಡರು ಖುದ್ದಾಗಿ ಫೋನ್ ಮಾಡಿ ಯಡಿಯೂರಪ್ಪನವರ ಹತ್ತಿರ ಮಾತಾಡಿದ್ದಾರೆ ಎಂತಲೂ ಹೇಳಲಾಗುತ್ತಿದೆ.

ಕಳೆದ ವಾರವೇ ಹೇಳಿದ್ದಂತೆ ಹಲವು ಶಾಸಕರು ಬಿಜೆಪಿಯ ಕಡೆಗೆ ಒಲವು ತೋರಿಸಿರುವುದು ಸ್ಪಷ್ಟವಿತ್ತು ಮತ್ತು ಬಿಜೆಪಿಯು ಘಾತುಕತನದಿಂದ ಇನ್ನಷ್ಟು ಜನರನ್ನು ಸೆಳೆದುಕೊಳ್ಳುವುದೂ ಕಷ್ಟವಿರಲಿಲ್ಲ. ಈ ವಾರದ ಬೆಳವಣಿಗೆ ಎಂದರೆ ಜೆಡಿಎಸ್‌ನ ವಿಧಾನಪರಿಷತ್ತಿನ ಸದಸ್ಯರು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಸೇರಿದಂತೆ ಹಲವರು ಸಭೆಯೊಂದನ್ನು ನಡೆಸಿದರು ಮತ್ತು ರೆಸಾರ್ಟ್ವೊಂದಕ್ಕೆ ಜೊತೆಗೂಡಿ ಹೋಗುವ ಕುರಿತೂ ಚರ್ಚಿಸಿದರು. ಶಾಸಕರ ಅಸಮಾಧಾನ ತಣಿಸಲು ದೇವೇಗೌಡರು ಸಭೆ ಕರೆದರೆ, ಕುಮಾರಸ್ವಾಮಿ ಲಂಡನ್ ವಿಮಾನ ಹತ್ತಿದ್ದರು. ಇಂತಹ ಹಲವು ಸಂದರ್ಭಗಳಲ್ಲಿ ತಂದೆ, ಮಗ ಏನೋ ಭಿನ್ನ ನಿಲುವು ತಳೆದಂತೆ ಮಾಡುವುದು, ಸಭೆಯಲ್ಲಿ ತನ್ನ ಅಸಹಾಯಕತೆಯನ್ನು ತಂದೆ ಮಗನ ಮೇಲೆ ಅಥವಾ ಮಗ ತಂದೆಯ ಮೇಲೆ ಹಾಕುವುದು ಇವೆಲ್ಲವೂ ಸಂದಿಗ್ಧವನ್ನು ಮ್ಯಾನೇಜ್ ಮಾಡುವ ಗೌಡರ ಕುಟುಂಬದ ವಿಧಾನಗಳಲ್ಲಿ ಒಂದು. ಆದರೆ, ಅಂತಿಮವಾಗಿ ಇಬ್ಬರೂ ಒಂದೇ ನಿಲುವಿಗೆ ಬಂದಿರುತ್ತಾರೆ. ಇದರಲ್ಲಿ ನಿಜಕ್ಕೂ ದೊಡ್ಡಗೌಡರು ಮತ್ತು ಎಚ್‌ಡಿಕೆ ನಡುವಿನ ಅಭಿಪ್ರಾಯಬೇಧವೂ ಕೆಲಸ ಮಾಡದಿರುವುದಿಲ್ಲ. ಆದರೆ ಅದನ್ನೇ ಭಿನ್ನಮತ ನಿಭಾಯಿಸುವ ಅಸ್ತ್ರವಾಗಿ ಬಳಸುವ ಚಾಕಚಕ್ಯತೆ ಅವರಿಗೆ ಸಿದ್ಧಿಸಿದೆ.

ಈಗಲೂ ಅದೇ ಆಗಿದೆ. ಎಚ್‌ಡಿಕೆ ಹೇಳಿದ್ದನ್ನೇ ಗೌಡರೂ ಹೇಳಿದ್ದಾರೆ. ಕಾರಣಗಳನ್ನು ಅವರ ರೀತಿಯಲ್ಲಿ ಅವರೂ, ಇವರ ರೀತಿಯಲ್ಲಿ ಇವರೂ ಹೇಳಿದ್ದಾರಷ್ಟೇ. ‘ಸಿದ್ದರಾಮಯ್ಯರಿಂದಲೇ ಮೈತ್ರಿ ಸರ್ಕಾರ ಬಿದ್ದಿತು ಎಂದು ನನಗೆ ಈಗ ಮನವರಿಕೆಯಾಗಿದೆ’ ಎಂದು ದೊಡ್ಡ ಗೌಡರು ಇಂದು ಹೇಳಿದ್ದಾರೆ. ಅಂದರೆ ಇಡೀ ಕಾಂಗ್ರೆಸ್ ಪಕ್ಷಕ್ಕಿಂತ ಸಿದ್ದರಾಮಯ್ಯರನ್ನು ಗುರಿ ಮಾಡುವುದು, ಬಿಜೆಪಿಯ ಜೊತೆಗೆ ಕೈ ಜೋಡಿಸುವುದು ಮತ್ತು ಆ ಮೂಲಕ ಅಹಿಂದ ವರ್ಸಸ್ ಮೇಲ್ಜಾತಿ ಧ್ರುವೀಕರಣಕ್ಕೆ ಬೇಕಾದ ಕಥನ ಸಿದ್ಧ ಮಾಡುತ್ತಾ ಹೋಗುವುದು ಇದರ ಹಿಂದಿನ ಲೆಕ್ಕಾಚಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಅನ್ನು ಕೈ ಹಿಡಿದಿದ್ದು ಇದೇ ಆಗಿತ್ತು. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಇದಕ್ಕೆ ಒಂದಷ್ಟು ಧಕ್ಕೆ ಬಂದಿತ್ತು. ಈಗ ಮತ್ತೆ ಧ್ರುವೀಕರಣಕ್ಕೆ ಪ್ರಯತ್ನಿಸಿ ತಮ್ಮ ನೆಲೆ ಉಳಿಸಿಕೊಳ್ಳುವ ಯತ್ನ ಮಾಡುತ್ತಿರುವುದನ್ನು ಗೌಡರು ಇಂದು ಲೆಕ್ಕಾಚಾರ ಹಾಕಿ ಆಡಿದ ಮಾತುಗಳಲ್ಲಿ ನೋಡಬಹುದು.

ಅತ್ತ ಶರದ್‌ಪವಾರ್ ಜೊತೆಗೂ ಆಪ್ತರಾಗಿರುವ ದೇವೇಗೌಡರು ಹರಿಯಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಅತಂತ್ರ ಪರಿಸ್ಥಿತಿ ಉಂಟಾದ ನಂತರ ಬಿಜೆಪಿಯ ಜೊತೆಗೆ ಕೈ ಜೋಡಿಸಲಾರರು ಎಂಬ ಮಾತು ಜೆಡಿಎಸ್ ವಲಯಗಳಲ್ಲಿತ್ತು. ಆದರೆ ಕರ್ನಾಟಕದ ಮಟ್ಟಿಗೆ ಜೆಡಿಎಸ್ ಪರಿಸ್ಥಿತಿ ಕಷ್ಟವಿತ್ತು. ಈಗಲೇ ಚುನಾವಣೆ ನಡೆದರೆ ಬಹಳವೇ ಕಷ್ಟವಿದೆ ಎಂಬ ದೇವೇಗೌಡರ ಮಾತು ಸುಳ್ಳಲ್ಲ. ರಾಜ್ಯಗಳ ಮಟ್ಟಿಗೆ ಏನೇ ವ್ಯತ್ಯಾಸ ಉಂಟಾದರೂ, ಕೇಂದ್ರದಲ್ಲಿ ಮೋದಿ-ಶಾರನ್ನು ಅಲುಗಾಡಿಸುವ ಶಕ್ತಿ ಸದ್ಯಕ್ಕಂತೂ ಕಾಣುತ್ತಿಲ್ಲ. ಹೀಗಾಗಿ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎನ್ನುವಷ್ಟು ದೂರಾಲೋಚನೆ ಪಳಗಿದ ರಾಜಕಾರಣಿಗಳಿಗೆ ಇರುವುದಿಲ್ಲವೇ?

ಹೀಗಾಗಿ ಈ ಸಾರಿ ಗೌಡರು ಯಾವ ಹಿಂಜರಿಕೆಯನ್ನೂ ತೋರಿಲ್ಲ. ಹಿಂದಿನ ಸಾರಿ ಜೆಡಿಎಸ್ ಬಿಜೆಪಿ ಮೈತ್ರಿಯಾದಾಗಲಾದರೂ ‘ಕೋಮುವಾದ, ಜಾತ್ಯಾತೀತತೆ’ ಇತ್ಯಾದಿ ಮಾತುಗಳು ಅವರ ಬಾಯಿಂದ ಬಂದಿದ್ದವು. ಆದರೆ ಈ ಸಾರಿ ಕೇವಲ ಸಿದ್ದರಾಮಯ್ಯರಿಗೆ ವಿರೋಧ ಮಾತ್ರವಲ್ಲದೇ ಯಡಿಯೂರಪ್ಪನವರ ಸರ್ಕಾರಕ್ಕೆ ಅಭಯವನ್ನೂ ನೀಡುವ ಸ್ಪಷ್ಟತೆಯನ್ನೂ ಅವರು ನೀಡಿಬಿಟ್ಟಿದ್ದಾರೆ. ಅದರ ಜೊತೆ ಜೊತೆಗೇ ಮುಂದಿನ ಯೋಜನೆಯನ್ನೂ ಪ್ರಕಟಿಸಿದ್ದಾರೆ. ಅದು – ಪಕ್ಷವನ್ನು ಕಟ್ಟುವುದು. ಸೈದ್ಧಾಂತಿಕ ಅವಕಾಶವಾದಿತನದ ಬಗ್ಗೆ ಏನೇ ಟೀಕೆ ಇದ್ದರೂ ಮೆಚ್ಚಿಕೊಳ್ಳಬೇಕಾದ್ದು ಗೌಡರ ಈ ಗುಣವನ್ನು.

ಏನು ತಿಪ್ಪರಲಾಗ ಹಾಕಿದರೂ ಯಡಿಯೂರಪ್ಪನವರ ಸರ್ಕಾರವು ಪೂರ್ಣಾವಧಿ ಬಾಳಲಾರದು ಎಂಬುದು ಖಚಿತ. ಹಾಗಾಗಿ ಒಂದಷ್ಟು ಕಾಲ ಸರ್ಕಾರವನ್ನು ಉಳಿಸಿ, ಅಷ್ಟು ಅವಧಿಯನ್ನು ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಂಡರೆ ಒಳ್ಳೆಯದು ಎಂಬ ಮುಂದಾಲೋಚನೆ ಅವರದ್ದು. ಹೇಗೂ ಮುಂದೆಯೂ ಎರಡರಲ್ಲೊಂದು ಪಕ್ಷಕ್ಕೆ ತಮ್ಮ ಜೊತೆಗೆ ಮೈತ್ರಿ ಮಾಡಿಕೊಳ್ಳಲೇಬೇಕಾದಷ್ಟು ಅನಿವಾರ್ಯತೆಯಿರುವ ಅತಂತ್ರತೆ ಉಂಟಾಗುವಷ್ಟು ಪಕ್ಷ ಬೆಳೆಸುವುದಷ್ಟೇ ಸಾಧ್ಯ. ಆ ಮಧ್ಯೆ ಮಾಡಬೇಕಿರುವುದು ಸಿದ್ದರಾಮಯ್ಯರನ್ನು ಹಣಿಯುವುದಷ್ಟೇ.

ಬಹುಶಃ ಸಿದ್ದರಾಮಯ್ಯನವರ ಬೆಳವಣಿಗೆ ಇರುವುದೂ ಯಡಿಯೂರಪ್ಪ, ದೇವೇಗೌಡ ರಾಜಕಾರಣವನ್ನು ವಿರೋಧಿಸುವುದರಲ್ಲೇ ಇರಬಹುದು. ಹಾಗಾಗಿ ಕರ್ನಾಟಕದ ರಾಜಕಾರಣವು ಮತ್ತೆ 2018ರ ಹೊತ್ತಿಗೇ ಬಂದು ನಿಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...