ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ನಾಝಿಯಾ ಇಲಾಹಿ ಸೋಮವಾರ (ಫೆಬ್ರವರಿ 24) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಮಹಾಕುಂಭ ಮೇಳಕ್ಕೆ ತೆರಳುವಾಗ ಮುಸ್ಲಿಮರು ನಮ್ಮ ಕಾರನ್ನು ಹಿಂಬಾಲಿಸಿ ಅಪಘಾತವೆಸಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸಿ ಆಕೆಯ ಸುಳ್ಳಾರೋಪವನ್ನು ಬಯಲು ಮಾಡಿದ್ದಾರೆ.
ನಾಝಿಯಾ ಇಲಾಹಿ ಹೇಳಿದ್ದೇನು?
“ದೆಹಲಿಯಲ್ಲಿ ಸಭೆಯೊಂದರಲ್ಲಿ ಪಾಲ್ಗೊಂಡು, ಬಳಿಕ ಗಂಗಾ ಸ್ನಾನ ಮಾಡಲು ನಾವು ಮಹಾಕುಂಭ ಮೇಳಕ್ಕೆ ಹೊರಟಿದ್ದೆವು. ಇಟಾನಗರ ತಲುಪುತ್ತಿದ್ದಂತೆ ಕೆಲ ಮುಸ್ಲಿಂ ವ್ಯಕ್ತಿಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ನಂತರ ಅವರು ನಮ್ಮ ಕಾರಿಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದಾರೆ. ನನ್ನೊಂದಿಗೆ ಯೂಟ್ಯೂಬರ್ ಪ್ರಿಯಾ ಚತುರ್ವೇದಿ ಮತ್ತು ಇನ್ನೊಬ್ಬರು ಹುಡುಗಿ ಇದ್ದರು. ಘಟನೆಯಲ್ಲಿ ಪ್ರಿಯಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ನಾಝಿಯಾ ಇಲಾಹಿ ವಿಡಿಯೋ ಮುಖಾಂತರ ಆರೋಪಿಸಿದ್ದರು.
On the way to kumbh I have been targeted by peaceful community 🙏
Help me @myogioffice pic.twitter.com/ZP1cBKWBCZ— Nazia Elahi Khan (सनातनी) (@ElahiNazia1) February 24, 2025
“ಅಪಘಾತದಲ್ಲಿ ನನ್ನ ಕೈಗೆ ಗಾಯಗಳಾಗಿವೆ. ನಾನು ಸಾರ್ವಜನಿಕರ ಸಹಾಯಕ್ಕಾಗಿ ಮಾಡಿದೆ. ನನ್ನನ್ನೇ ಗುರಿಯಾಗಿಸಿ ಅಪಘಾತವೆಸಗಲಾಗಿದೆ. ಆದರೆ, ಪ್ರಿಯಾ ಮಧ್ಯದಲ್ಲಿ ಸಿಲುಕಿಕೊಂಡರು” ಎಂದು ಹೇಳಿದ್ದರು.
This is the condition of car by peaceful community!@myogioffice pic.twitter.com/iZscU0Od1x
— Nazia Elahi Khan (सनातनी) (@ElahiNazia1) February 24, 2025
ಪೊಲೀಸರ ತನಿಖೆಯಿಂದ ಸತ್ಯ ಬಯಲು
ಘಟನೆ ಕುರಿತು ತನಿಖೆ ನಡೆಸಿದ ಕಾನ್ಪುರ ಪೊಲೀಸರು, ಕಾರು ಚಾಲಕ ನಿದ್ರೆಗೆ ಜಾರಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು, ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಬೇಡಿ ಎಂದು ಮನವಿ ಮಾಡಿದ್ದಾರೆ.
“ಇಂದು (ಫೆಬ್ರವರಿ 24,2025) ಬೆಳಿಗ್ಗೆ 7ಗಂಟೆಯ ಸುಮಾರಿಗೆ ಅಕ್ಬರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದೇಶ್ವರ ಕೋಲ್ಡ್ ಸ್ಟೋರೇಜ್ ಬಳಿಯ ಹೆದ್ದಾರಿಯಲ್ಲಿ, ಅಕ್ಬರ್‌ಪುರದಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಬಿಳಿ ಎರ್ಟಿಗಾ ಟ್ಯಾಕ್ಸಿ ಕಾರು (ನೋಂದಣಿ ಸಂಖ್ಯೆ UP 79AT 5232) ಅಪಘಾತಕ್ಕೀಡಾಗಿತ್ತು”.
“ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಕಾರು ಚಾಲನೆ ಮಾಡುವಾಗ ನಿದ್ರಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಚಾಲಕ ಹೇಳಿಕೆ ನೀಡಿದ್ದಾರೆ”.
— Kanpur Dehat Police (@kanpurdehatpol) February 24, 2025
“ಮುಂದಿನ ಕಾನೂನು ಕ್ರಮಗಳಿಗಾಗಿ ಲಿಖಿತ ದೂರು ದಾಖಲಿಸಲು ಕೇಳಿದಾಗ, ಚಾಲಕ ಯಾವುದೇ ದೂರು ನೀಡಲು ನಿರಾಕರಿಸಿದ್ದಾರೆ. ಅವರು ಯಾವುದೇ ಲಿಖಿತ ಅರ್ಜಿಯನ್ನು ಕೂಡ ಸಲ್ಲಿಸಿಲ್ಲ. ಸ್ಥಳೀಯ ಪೊಲೀಸರು ಅಪಘಾತಕ್ಕೀಡಾದ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವಾಹನದ ವ್ಯವಸ್ಥೆ ಮಾಡಿ ಎಲ್ಲರೂ ತಮ್ಮ ಗಮ್ಯಸ್ಥಾನಗಳನ್ನು ಸುರಕ್ಷಿತವಾಗಿ ತಲುಪುವಂತೆ ನೋಡಿಕೊಂಡಿದ್ದಾರೆ”.
ಇದು ಪೊಲೀಸರ ತ್ವರಿತ ಕಾರ್ಯಾಚರಣೆಗೆ ಹಿಡಿದ ಕೈಗನ್ನಡಿ. ಇದಕ್ಕಾಗಿ ಸ್ಥಳೀಯ ಪೊಲೀಸರನ್ನು ಶ್ಲಾಘಿಸುತ್ತೇವೆ. ಅಕ್ಬರ್‌ಪುರ ಪೊಲೀಸ್ ಠಾಣೆಯ ಮಹಿಳಾ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಈ ಬಗ್ಗೆ ಮತ್ತಷ್ಟು ತನಿಖೆ ಮಾಡಲಾಗುವುದು” ಎಂದಿದ್ದಾರೆ.
A video of BJP Minority leader Nazia Elahi is viral on Social media where she claims she and her friends were followed by Muslims on her way to kumbh and were attacked.
Soon after the video went viral, police put out a statement that the driver fell asleep while driving causing… pic.twitter.com/j2eB1NPWlD— Mohammed Zubair (@zoo_bear) February 24, 2025
“ಈ ಘಟನೆಯ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಾರಿತಪ್ಪಿಸುವ ಅಥವಾ ಸುಳ್ಳು ಮಾಹಿತಿಯನ್ನು ಹರಡದಂತೆ ನಾವು ವಿನಂತಿಸುತ್ತೇವೆ” ಎಂದು ಹೇಳಿದ್ದಾರೆ.
ತ್ರಿಭಾಷಾ ಹೇರಿಕೆ ವಿರೋಧಿಸಿ ಬಿಜೆಪಿ ತೊರೆದ ತಮಿಳು ನಟಿ ರಂಜನಾ ನಾಚಿಯಾರ್


