Homeಮುಖಪುಟಹೆದ್ದಾರಿಯ ಮಧ್ಯೆಯೆ ಲೈಂಗಿಕ ಕ್ರಿಯೆ ನಡೆಸಿದ ಬಿಜೆಪಿ ನಾಯಕನ ಬಂಧನ

ಹೆದ್ದಾರಿಯ ಮಧ್ಯೆಯೆ ಲೈಂಗಿಕ ಕ್ರಿಯೆ ನಡೆಸಿದ ಬಿಜೆಪಿ ನಾಯಕನ ಬಂಧನ

- Advertisement -
- Advertisement -

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮಧ್ಯೆ ಮಹಿಳೆಯೊಬ್ಬರ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ಮಧ್ಯಪ್ರದೇಶದ ಬಿಜೆಪಿ ನಾಯಕ ಮನೋಹರ್ ಲಾಲ್ ಧಕಾಡ್ ಅವರನ್ನು ಭಾನುವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅವರ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾನ್ಪುರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಹೆದ್ದಾರಿಯ ಮಧ್ಯೆಯೆ ಲೈಂಗಿಕ

ಮನೋಹರ್ ಲಾಲ್ ಧಕಾಡ್ ಮಧ್ಯಪ್ರದೇಶದ ಮಂದ್ಸೌ‌ರ್ ಬಿಜೆಪಿಯಲ್ಲಿ ಸಕ್ರಿಯನಾಗಿದ್ದು, ಬಿಜೆಪಿಯ ರಾಷ್ಟ್ರೀಯ ಯುವಮೋರ್ಚಾ ಘಟಕದಲ್ಲೂ ಜವಾಬ್ದಾರಿ ಹೊಂದಿದ್ದರು ಎನ್ನಲಾಗಿದೆ. ಅದಾಗ್ಯೂ, ವಿಡಿಯೋ ವೈರಲ್ ಆಗುತ್ತಿದ್ದಂತೆ ಮನೋಹರ್ ಪ್ರಾಥಮಿಕ ಸದಸ್ಯನೂ ಆಗಿರಲಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಮೊಬೈಲ್ ಸಂಖ್ಯೆಗೆ ‘ಮಿಸ್ಡ್ ಕಾಲ್’ ನೀಡುವ ಮೂಲಕ ಯಾರು ಬೇಕಾದರೂ ಬಿಜೆಪಿ ಸದ್ಯಸರಾಗಬಹುದು ಎಂದು ಬಿಜೆಪಿ ವಕ್ತಾರ ಮತ್ತು ಮಂದಸೌರ್‌ನ ಮಾಜಿ ಶಾಸಕ ಯಶ್‌ಪಾಲ್ ಸಿಂಗ್ ಸಿಸೋಡಿಯಾ ಹೇಳಿದ್ದಾರೆ. ಅದಾಗ್ಯೂ, ಆರೋಪಿ ಮನೋಹರ್ ಲಾಲ್ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಹಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಘಟನೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದ ಭಾನ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಮತ್ತು ತನಿಖಾಧಿಕಾರಿ ಆರ್.ಸಿ. ಡಾಂಗಿ, “ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 296, 285 ಮತ್ತು 3(5)ರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಈ ವಿಡಿಯೋ ವೈರಲ್ ಮಾಡಿದವರು ಯಾರು ಮತ್ತು ಅದರ ಹಿಂದಿನ ಉದ್ದೇಶವೇನು ಎಂದು ತಿಳಿಯಬೇಕಾಗಿರುವುದರಿಂದ ತನಿಖೆ ಮುಂದುವರೆದಿದೆ” ಎಂದು ಹೇಳಿದ್ದಾರೆ.

“ಇಂತಹ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಸಹ, ಅದನ್ನು ಹೊಂದಿರುವವರು ಪೊಲೀಸರಿಗೆ ಹಸ್ತಾಂತರಿಸಬೇಕು. ಹಾಗಾಗಿ ಇತರ ವ್ಯಕ್ತಿಗಳು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆಯೇ ಎಂದು ನಾವು ಖಚಿತಪಡಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.

ವಿಡಿಯೊದಲ್ಲಿದ್ದ ಮಹಿಳೆಯನ್ನು ಇನ್ನೂ ಬಂಧಿಸಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ. “ಅವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದನ್ನು ನಿರ್ಧರಿಸುವ ಮೊದಲು ನಾವು ಸಂಪೂರ್ಣ ತನಿಖೆ ನಡೆಸಬೇಕಾಗಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಬಂಧಿತ ಮನೋಹರ್‌ಲಾಲ್ ಧಾಕಡ್‌ ಅವರು ವಿವಾಹಿತರಾಗಿದ್ದು, ಅವರ ಪತ್ನಿ ಜಿಲ್ಲಾ ಪಂಚಾಯತ್ ಸದಸ್ಯರು ಕೂಡ ಆಗಿದ್ದಾರೆ ಎಂದು ತಿಳಿದುಬಂದಿದೆ.

ಮನೋಹರ್‌ಲಾಲ್ ಧಾಕಡ್‌ ಅವರ ಈ ಕಾಮಕೃತ್ಯದ ವಿಡಿಯೋ ವೈರಲಾಗುತ್ತಿದ್ದಂತೆಯೇ ಬಿಜೆಪಿ ವಿರುದ್ಧ ಮುಗಿಬಿದ್ದಿರುವ ಮಧ್ಯಪ್ರದೇಶದ ಕಾಂಗ್ರೆಸ್, “ಮಂದ್ಸೌ‌ರ್ ಬಿಜೆಪಿ ನಾಯಕ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯ ಪತಿಯಾಗಿರುವ ಮನೋಹರ್‌ಲಾಲ್ ಧಾಕಡ್‌ ಅವರು ಎಕ್ಸ್‌ಪ್ರೆಸ್‌ ವೇಯಲ್ಲಿ ಅಶ್ಲೀಲ ಕೃತ್ಯದ ಅತ್ಯಂತ ಆಕ್ಷೇಪಾರ್ಹ ವೀಡಿಯೊ ವೈರಲ್ ಆಗಿ ನಾಲ್ಕು ದಿನಗಳಾಗಿವೆ. ಆದರೂ ಬಿಜೆಪಿಯ ಅವರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ” ಎಂದು ಹೇಳಿದೆ.

“ಬಿಜೆಪಿಯ ಜಿಲ್ಲಾಧ್ಯಕ್ಷರು ವಿಡಿಯೋದ ಸತ್ಯಾಸತ್ಯತೆಯವನ್ನು ಪರಿಶೀಲಿಸುವುದಾಗಿ ಹೇಳುತ್ತಿದ್ದಾರೆ. ಬಿಜೆಪಿ ನಾಯಕರ ಚಾರಿತ್ರ್ಯ ಪಾತಾಳಕ್ಕೆ ತಲುಪಿದೆ ಎಂಬುದು ಇಂತಹ ಕೃತ್ಯಗಳಿಂದ ತಿಳಿಯಬಹುದು. ಇದು ಇಡೀ ಸಮಾಜಕ್ಕೆ ಅವಮಾನಕರ ಘಟನೆ. ಅಧಿಕಾರದ ದುರಾಸೆಯಲ್ಲಿ ಪಕ್ಷವು ನೈತಿಕತೆಯನ್ನು ಚರಂಡಿಗೆ ಎಸೆದಿದೆ” ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಹೆದ್ದಾರಿಯ ಮಧ್ಯೆಯೆ ಲೈಂಗಿಕ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಉತ್ತರಪ್ರದೇಶ: ದನ ಮೇಯಿಸುವ ವಿವಾದ; ದಲಿತ ಕುಟುಂಬದ ಮೇಲೆ ದೊಣ್ಣೆ, ಕಬ್ಬಿಣದ ರಾಡ್ ಗಳಿಂದ ಕ್ರೂರವಾಗಿ ಹಲ್ಲೆ

ಉತ್ತರಪ್ರದೇಶ: ದನ ಮೇಯಿಸುವ ವಿವಾದ; ದಲಿತ ಕುಟುಂಬದ ಮೇಲೆ ದೊಣ್ಣೆ, ಕಬ್ಬಿಣದ ರಾಡ್ ಗಳಿಂದ ಕ್ರೂರವಾಗಿ ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -