- Advertisement -
- Advertisement -
ಕೊಲೆಯತ್ನ ಆರೋಪದ ಮೇಲೆ ಕಲಬುರಗಿಯ ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅನ್ನು ಅಫಜಲಪುರ ತಾಲೂಕಿನ ಶಿರವಾಳ ಸಮೀಪ ಗುರುವಾರ (ನವೆಂಬರ್ 20) ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.
ನಾಟಿ ಔಷಧಿ ನೀಡುತ್ತಿದ್ದ ರಶೀದ್ ಮುತ್ಯಾ ಎಂಬಾತನನ್ನು ಬಂಧಿಸುವಂತೆ ಆಗ್ರಹಿಸಿ ಮಣಿಕಂಠ ರಾಠೋಡ್ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ರಾತ್ರಿ ರಶೀದ್ ಬೆಂಬಲಿಗರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಹಲವು ಜನರೊಂದಿಗೆ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ.
ಪ್ರತಿಭಟನೆಯ ಬಳಿಕ ರಶೀದ್ ಮುತ್ಯಾ ಗ್ರಾಮದಿಂದ ಕಾರಿನ ಮೂಲಕ ಬೇರೆ ಕಡೆಗೆ ಹೋಗುತ್ತಿದ್ದ ವೇಳೆ ಕಾರಿಗೆ ಕಲ್ಲು ಹೊಡೆಯಲಾಗಿದೆ. ರಶೀದ್ ಮುತ್ಯಾನ ಕಾರು ಚಾಲಕನಿಗೆ ಕಲ್ಲೇಟು ಬಿದ್ದು ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ಗಾಯಾಳು ಕಾರು ಚಾಲಕ ನೀಡಿದ ದೂರಿನನ್ವಯ ಕೊಲೆ ಯತ್ನ ಆರೋಪದಲ್ಲಿ ಮಣಿಕಂಠ ರಾಠೋಡ್ ಅನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.


