ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ರಮೇಶ್ ಬಿಧುರಿ ಅವರ ನಿವಾಸ ಮುಂದೆ ಸೋಮವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅವರ ಮನೆಯ ಗೇಟ್‌ಗೆ ‘ಮಹಿಳಾ ವಿರೋಧಿ’ ಎಂದು ಬರೆದಿದ್ದಾರೆ. ಬಿಜೆಪಿ ನಾಯಕ ರಮೇಶ್ ಬಿಧುರಿ
ದೆಹಲಿ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್ ಲಾಕ್ರಾ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾಕಾರರು ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದ್ದು, ಮಧ್ಯ ದೆಹಲಿಯಲ್ಲಿರುವ ಬಿಧುರಿ ಅವರ ಮನೆಯ ಹೊರಗೆ ನಾಮಫಲಕಕ್ಕೆ ಕಪ್ಪು ಬಣ್ಣವನ್ನು ಎರಚಿದ್ದು, ಅವರು ಮನೆಯ ಮುಖ್ಯ ಗೇಟ್ ಮೇಲೆ ಕಪ್ಪು ಬಣ್ಣದಿಂದ “ಮಹಿಳಾ ವಿರೋಧಿ” ಎಂದು ಬರೆದಿದ್ದಾರೆ. ಬಿಜೆಪಿ ನಾಯಕ ರಮೇಶ್ ಬಿಧುರಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಿಯಾಂಕಾ ಗಾಂಧಿ ಬಗ್ಗೆ ಬಿಜೆಪಿ ನಾಯಕನ ಈ ಹೇಳಿಕೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಲಾಕ್ರಾ ಹೇಳಿದ್ದಾರೆ. ಬಿಧುರಿ ಈ ಹಿಂದೆ ಕೂಡಾ ಅವಹೇಳನಕಾರಿ ಭಾಷೆ ಬಳಸಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಬಗ್ಗೆ ಬಿಧುರಿ ನೀಡಿರುವ ಹೇಳಿಕೆ ಅತ್ಯಂತ ನಾಚಿಕೆಗೇಡಿನದ್ದು, ಈ ಅಗ್ಗದ ಹೇಳಿಕೆಗೆ ಅವರು ಕ್ಷಮೆ ಯಾಚಿಸಬೇಕು. ಅವರು ಕ್ಷಮೆ ಕೇಳುವವರೆಗೂ ಯುವ ಕಾಂಗ್ರೆಸ್ ಈ ರೀತಿ ಪ್ರತಿಭಟನೆ ನಡೆಸಲಿದೆ ಎಂದು ಲಾಕ್ರಾ ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದರೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತ ರಸ್ತೆಗಳನ್ನು ಕ್ಷೇತ್ರದಲ್ಲಿ ನಿರ್ಮಿಸುವುದಾಗಿ ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ರಮೇಶ್ ಬಿಧುರಿ ಅವರು ಹೇಳಿದ್ದರು.
ಇದನ್ನೂಓದಿ: ಕೇರಳ ನರ್ಸ್ ಮರಣದಂಡನೆಗೆ ಅಧ್ಯಕ್ಷರ ಅನುಮತಿಯಿಲ್ಲ; ಯೆಮೆನ್ ರಾಯಭಾರ ಕಚೇರಿ ಸ್ಪಷ್ಟನೆ
ಕೇರಳ ನರ್ಸ್ ಮರಣದಂಡನೆಗೆ ಅಧ್ಯಕ್ಷರ ಅನುಮತಿಯಿಲ್ಲ; ಯೆಮೆನ್ ರಾಯಭಾರ ಕಚೇರಿ ಸ್ಪಷ್ಟನೆ


