“ಸಂಘ ಪರಿವಾರದವರು ‘ವಚನ ದರ್ಶನ’ ಪುಸ್ತಕದ ಮೂಲಕ ನಮ್ಮ ವಚನಗಳನ್ನು ತಿದ್ದಲು ಹೊರಟಿದ್ದಾರೆ. ವಚನಗಳು ನಮ್ಮ (ಲಿಂಗಾಯತ) ಅಸ್ಮಿತೆ. ನಮ್ಮ ಅಸ್ಮಿತೆ ಜೊತೆ ಆಟ ಬೇಡ” ಎಂದು ಸಚಿವ ಎಂ.ಬಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ (ನ.8) ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,”ಬಿಜೆಪಿಯ ಬಿ.ಎಲ್. ಸಂತೋಷ್ ಅವರೇ, ನಿಮ್ಮ ಅಸ್ಮಿತೆಯಾದ ವೇದ, ಉಪನಿಷತ್ ಎಲ್ಲವನ್ನೂ ನಾವು ಗೌರವಿಸುತ್ತೇವೆ. ಅವುಗಳ ಕುರಿತು ನೀವು ಪ್ರಚಾರ ಮಾಡಿ. ನಮ್ಮ ಬಸವಾದಿ ಶರಣರ ವಚನಗಳು ನಮ್ಮ ಅಸ್ಮಿತೆಯಾಗಿದ್ದು, ಅವು ನಮಗೆ ತಾಯಿಯಿದ್ದಂತೆ. ಅದನ್ನು ತಿದ್ದಿಸುವುದು, ಅದರಲ್ಲಿ ಹಸ್ತಕ್ಷೇಪ ಮಾಡುವಂತಹ ಕೆಟ್ಟ ಕೆಲಸಕ್ಕೆ ನೀವು ಕೈ ಹಾಕಿದರೆ ಅದನ್ನು ನಾವು ಸಹಿಸುವುದಿಲ್ಲ!” ಎಂದಿದ್ದಾರೆ.
ಬಿಜೆಪಿಯ ಬಿ.ಎಲ್. ಸಂತೋಷ್ ಅವರೇ, ನಿಮ್ಮ ಅಸ್ಮಿತೆಯಾದ ವೇದ, ಉಪನಿಷತ್ ಎಲ್ಲವನ್ನೂ ನಾವು ಗೌರವಿಸುತ್ತೇವೆ. ಅವುಗಳ ಕುರಿತು ನೀವು ಪ್ರಚಾರ ಮಾಡಿ. ನಮ್ಮ ಬಸವಾದಿ ಶರಣರ ವಚನಗಳು ನಮ್ಮ ಅಸ್ಮಿತೆಯಾಗಿದ್ದು, ಅವು ನಮಗೆ ತಾಯಿಯಿದ್ದಂತೆ. ಅದನ್ನು ತಿದ್ದಿಸುವುದು, ಅದರಲ್ಲಿ ಹಸ್ತಕ್ಷೇಪ ಮಾಡುವಂತಹ ಕೆಟ್ಟ ಕೆಲಸಕ್ಕೆ ನೀವು ಕೈ ಹಾಕಿದರೆ ಅದನ್ನು… pic.twitter.com/sxs02BVO0i
— M B Patil (@MBPatil) November 9, 2024
ಬಿಜೆಪಿ ಮತ್ತು ಬಿ.ಎಲ್ ಸಂತೋಷ್ ನಮ್ಮ ಕೆಲವು ಸ್ವಾಮಿಗಳನ್ನು ಬುಟ್ಟಿಗೆ ಹಾಕಿಕೊಂಡು ಇಂತ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದಾರೆ. ಬಿ.ಎಲ್ ಸಂತೋಷ್ ನಿಮ್ಮ ಅಸ್ಮಿತೆ ನಿಮಗೆ ಮುಖ್ಯ. ನಮ್ಮ ಅಸ್ಮಿತೆ ನಮಗೂ ಮುಖ್ಯ. ವೇದ, ಭಗವದ್ಗೀತೆ ನಿಮ್ಮ ಅಸ್ಮಿತೆ. ಅದನ್ನು ಹೇಗೆ ಬೇಕಾದರೂ ಪ್ರಚಾರ ಮಾಡಿ. ಆದರೆ, ನಮ್ಮ ಅಸ್ಮಿತೆಗೆ ಕೈ ಹಾಕಿದರೆ ಅದು ನಿಮಗೆ ತಿರುಗು ಬಾಣ ಅಗಲಿದೆ ಎಂದು ಕಿಡಿಕಾಡಿದ್ದಾರೆ.
ನಮ್ಮ ಅಸ್ಮಿತೆಯ ಬಗ್ಗೆ ತಪ್ಪಾಗಿ ಪ್ರಚಾರ ಮಾಡಿದರೆ, ನಿಮ್ಮ ಮನುವಾದ, ಮನುಸ್ಮೃತಿಗಳ ಬಗ್ಗೆ ನಾವೂ ಪುಸ್ತಕ ಪ್ರಿಂಟ್ ಮಾಡಿ ಜನರ ಮುಂದೆ ಇಡಬೇಕಾಗುತ್ತದೆ. ನಿಮ್ಮದು ಸುಳ್ಳಿನ ಅಸ್ಮಿತೆಯಾದರೆ, ನಮ್ಮದು ಸತ್ಯ ಎಂದಿದ್ದಾರೆ. ವಚನ ದರ್ಶನದ ಪುಸ್ತಕದ ಬಗ್ಗೆ ಚುನಾವಣೆ ಮುಗಿದ ಬಳಿಕ ನಾನೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತನಾಡುತ್ತೇನೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆಯುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಐಐಎಂನಲ್ಲಿ ಜಾತಿ ತಾರತಮ್ಯ ಆರೋಪ : ನ.20ರಂದು ಪ್ರತಿಭಟನೆ



Well said. The BJP and sanga pariwar should not allowed to touch
Vachans of greatest sharans.
Vachana o Basaveshwarar are there since centuries and everybody is is following these.It is above any political verses and every one should respect and follow it