ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು (ಜುಲೈ 1) ಸಂಸತ್‌ನಲ್ಲಿ ಮಾಡಿದ ಭಾಷಣ ದೇಶದ ಗಮನ ಸೆಳೆದಿದೆ.
ಮಣಿಪುರ ಹಿಂಸಾಚಾರ, ರೈತರ ಹೋರಾಟದ ದಮನ, ನೀಟ್ ಹಗರಣ, ಚುನಾವಣಾ ಪ್ರಚಾರದ ವೇಳೆ ದ್ವೇಷ ಭಾಷಣ ಹೀಗೆ ಎಲ್ಲಾ ವಿಷಯಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾಷಣದಲ್ಲಿ ರಾಹುಲ್ ಗಾಂಧಿ “ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಯಾವುದೇ ರೀತಿಯಲ್ಲೂ ಹಿಂದೂ ಅಲ್ಲ” ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿ ಹೇಳಿದ್ದರು. ಈ ಹೇಳಿಕೆಯ ತುಣುಕನ್ನು ತಪ್ಪಾಗಿ ಹಂಚಿಕೊಳ್ಳಲಾಗ್ತಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಹುಲ್ ಗಾಂಧಿಯ ಹೇಳಿಕೆಯ ಅರ್ಧ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ತನ್ನನ್ನು ತಾನು ಹಿಂದೂ ಎಂದು ಕರೆದುಕೊಳ್ಳುವ ಪ್ರತಿಯೊಬ್ಬರನ್ನು ‘ಹಿಂಸಾತ್ಮಕ’ ಎಂದು ಕರೆಯುವ ಮೂಲಕ ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ಹಿಂದೂಗಳ ಮೇಲಿರುವ ದ್ವೇಷ ಮತ್ತು ತಿರಸ್ಕಾರ ಭಾವನೆಯನ್ನು ತೋರಿಸಿದ್ದಾರೆ. ಇದು ಅವರ ಇಂಡಿಯಾ ಒಕ್ಕೂಟದ ಪಾಲುದಾರರ ಹಿಂದೂ ದ್ವೇಷವನ್ನೂ ತೋರಿಸಿದೆ. “ಮೊಹಬ್ಬತ್ ಕಿ ದುಕಾನ್” ಎಂದು ಹೇಳಿಕೊಳ್ಳುವವರ ಬೂಟಾಟಿಕೆ ಬಹಿರಂಗವಾಗಿದೆ” ಎಂದು ಬರೆದುಕೊಂಡಿದ್ದಾರೆ.
Sheer audacity of LoP @RahulGandhi to call everyone who calls himself Hindu as “hinsak”/violent shows @INCIndia’s hatred and contempt towards Hindus. Also consistent with Hindu hate of his INDI Alliance partners. Hypocrisy in claiming “Mohabbat ki Dukaan” exposed. pic.twitter.com/8ZAXMrRsY8
— Nirmala Sitharaman (@nsitharaman) July 1, 2024
ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಾಲಿ ಆರೋಗ್ಯ ಸಚಿವರ ಜೆಪಿ ನಡ್ಡಾ “ರಾಹುಲ್ ಗಾಂಧಿ ಅವರು ಹಿಂದೂಗಳನ್ನು ಹಿಂಸಾತ್ಮಕ ಎಂದಿದ್ದಕ್ಕಾಗಿ ತಕ್ಷಣವೇ ಎಲ್ಲಾ ಹಿಂದೂಗಳ ಕ್ಷಮೆಯಾಚಿಸಬೇಕು. ಹಿಂದೂಗಳು ಭಯೋತ್ಪಾದಕರು ಎಂದು ವಿದೇಶಿ ರಾಜತಾಂತ್ರಿಕರಿಗೆ ಹೇಳುತ್ತಿದ್ದವರು ಇವರೇ. ಹಿಂದೂಗಳ ಮೇಲಿನ ಈ ಆಂತರಿಕ ದ್ವೇಷ ನಿಲ್ಲಬೇಕು” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
Rahul Gandhi Ji must immediately APOLOGISE to all Hindus for terming them as violent. This is the same person who was telling foreign diplomats that Hindus are terrorists. This intrinsic hate towards Hindus must stop. pic.twitter.com/gA4vDJuIHA
— Jagat Prakash Nadda (@JPNadda) July 1, 2024
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ರಾಹುಲ್ ಗಾಂಧಿ ಹೇಳಿಕೆಯ ಅರ್ಧ ವಿಡಿಯೋವನ್ನು ಹಂಚಿಕೊಂಡು ‘ರಾಹುಲ್ ಗಾಂಧಿ ಎಲ್ಲಾ ಹಿಂದೂಗಳನ್ನು ಹಿಂಸಾತ್ಮಕ ಎಂದಿದ್ದಾರೆ ಎಂಬಂತೆ’ ಬಿಂಬಿಸಿದ್ದಾರೆ.
जो लोग अपने आप को हिंदू कहते हैं… pic.twitter.com/7FND0vINhi
— Amit Malviya (@amitmalviya) July 1, 2024
ಅಸಲಿಗೆ ರಾಹುಲ್ ಗಾಂಧಿ ಎಲ್ಲಾ ಹಿಂದೂಗಳನ್ನು ಹಿಂಸಾತ್ಮಕ, ದ್ವೇಷ ಕಾರುವವರು ಎಂದು ಕರೆದಿಲ್ಲ. “ಹಿಂದೂ ಎಂದು ಹೇಳಿಕೊಂಡು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ದ್ವೇಷ, ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
The Sheer audacity of Finance Minister @nsitharaman to mislead the nation by sharing clipped video. https://t.co/arcrbOT5bg pic.twitter.com/hMQ1RO6x0q
— Mohammed Zubair (@zoo_bear) July 1, 2024
ರಾಹುಲ್ ಗಾಂಧಿಯ ಹೇಳಿಕೆಗೆ ಪ್ರಧಾನಿ ಮೋದಿ ಆಕ್ಷೇಪ ವ್ಯಕ್ತಪಡಿಸಿದಾಗ, ರಾಹುಲ್ ಗಾಂಧಿ ಪ್ರತಿಕ್ರಿಯೆ ಕೊಟ್ಟಿದ್ದು, “ನಿಮಗೆ… ಬಿಜೆಪಿಯವರಿಗೆ ನಾನು ಹೇಳಿದ್ದು. ಹಿಂದೂ ಅಂದ್ರೆ ನರೇಂದ್ರ ಮೋದಿಯಲ್ಲ. ಹಿಂದು ಅಂದ್ರೆ ಆರ್‌ಎಸ್‌ಎಸ್ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಪೂರ್ಣ ವಿಡಿಯೋದಲ್ಲಿ ಅದನ್ನು ಗಮನಿಸಬಹುದು.
ಇದನ್ನೂ ಓದಿ : ‘ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ..’; ಸದನದಲ್ಲಿ ಕಿಚ್ಚುಹಚ್ಚಿದ ರಾಹುಲ್ ಭಾಷಣ


