‘ಮಾಸ್ಕ್ ಹಾಕಿದ್ದರೂ ಸಹ ಪೊಲೀಸರು ಬಲವಂತವಾಗಿ ದಂಡ ಕಟ್ಟಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಬರೆದಿರುವ ಪತ್ರದಲ್ಲಿ, “ನನಗೆ ಕಾರಿನ ಟಿಂಟ್ ಗ್ಲಾಸ್ ಇಳಿಸಿ ದಂಡ ವಿಧಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಡಿಸಂಬರ್ 24 ರಂದು ಬಾಡಿಗೆ ಕಾರಿನಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಡೆಯಿಂದ ಶಾಸಕರ ಭವನದ ಕಡೆ ತೆರಳುತ್ತಿದ್ದಾಗ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಮುಂಭಾಗ ಸಂಚಾರಿ ವ್ಯತ್ಯಯದಿಂದ ಕಾರು ನಿಲುಗಡೆಗೊಂಡಿರುವ ಸಂದರ್ಭದಲ್ಲಿ, ಕಾರಿನ ಟಿಂಟ್ ಗ್ಲಾಸ್ ಇಳಿಸುವಂತೆ ಬಲವಂತವಾಗಿ ಒತ್ತಡ ಹೇರಿ, ಕಾರಿನೊಳಗೆ ಇದ್ದ ನನಗೆ, ಮಾಸ್ಕ್ ಹಾಕಿದ್ದರೂ 250 ರೂ.ಗಳನ್ನು ದಂಡ ವಿಧಿಸಿದ್ದಾರೆ. ಈ ಘಟನೆ ಮಧ್ಯಾಹ್ನ 12.30 ರ ಸುಮಾರಿಗೆ ನಡೆದಿರುತ್ತದೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ತಡೆಯಲು ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ಗಳನ್ನು ಧರಿಸಬಾರದೇ? ಪೋಸ್ಟ್ ಕಾರ್ಡ್ ಹರಡಿದ ಮೂರು ಮಹಾಸುಳ್ಳುಗಳು.
“ಮುಜುಗರಕ್ಕೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಅವರಿಗೆ ಮರು ಮಾತನಾಡದೆ ದಂಡ ಕಟ್ಟಿರುತ್ತೇನೆ. ವಿನಾಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ” ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಸ್ಕ್ ಹಾಕದ ಕಾರಣಕ್ಕೆ ಕೋರ್ಟ್‌ಗೆ ಹೋಗಿ ದಂಡ ಕಟ್ಟಿದ್ದರು.
ಇದನ್ನೂ ಓದಿ: ’ಮೋದಿಯವರಂತೆ ಆಗಬೇಡಿ, ಮಾಸ್ಕ್ ಧರಿಸಿ’: ಮೋದಿ ವಿಡಿಯೋ ಟ್ರೋಲ್ ಮಾಡಿದ ಆಪ್


