ಪ್ರವಾದಿ ಮುಹಮ್ಮದ್ ಅವರ ವಿರುದ್ಧದ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಬಿಜೆಪಿ ಸಂಸದೆ, ಮಾಲೆಗಾಂವ್ ಸ್ಫೋಟದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ಭಾರತ, ಇದು ಹಿಂದೂಗಳಿಗೆ ಸೇರಿದ್ದು, ಸನಾತನ ಧರ್ಮ ಇಲ್ಲಿ ಉಳಿಯುತ್ತದೆ. ಅದನ್ನು ಜೀವಂತವಾಗಿಡುವುದು ನಮ್ಮ ಜವಾಬ್ದಾರಿ. ನಾವು ಅದನ್ನು ಮಾಡುತ್ತೇವೆ” ಎಂದಿದ್ದಾರೆ.
ನೂಪುರ್ ಶರ್ಮಾ ಅವರು ಕೊಲೆ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಯಾವುದೇ ನಂಬಿಕೆ ಇಲ್ಲದವರು ಇದೇ ಕೃತ್ಯ ಎಸಗುತ್ತಾರೆ. ಕಮಲೇಶ್ ತಿವಾರಿ ಏನೋ ಹೇಳಿ ಕೊಲೆಯಾದರು. ಬೇರೆಯವರು [ನೂಪುರ್ ಶರ್ಮಾ] ಏನೋ ಹೇಳಿದರು, ಅವರಿಗೆ ಕೊಲೆ ಬೆದರಿಕೆ ಕೂಡ ಬಂದಿದೆ. ಅವರು ನಮ್ಮ ದೇವರು, ದೇವತೆಗಳನ್ನು ವಿರೂಪಗೊಳಿಸುತ್ತಾರೆ. ಅದರ ಬಗ್ಗೆ ಚಲನಚಿತ್ರಗಳನ್ನೂ ಮಾಡುತ್ತಾರೆ. ಹಲವು ವರ್ಷಗಳಿಂದಲೂ ಇದನ್ನು ಮಾಡುತ್ತಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ” ಎಂದಿದ್ದಾರೆ.
#WATCH These non-believers have always done so. They have a communist history…Like Kamlesh Tiwari said something he was killed, someone else (Nupur Sharma)said something& they received threat.India belongs to Hindus & Sanatana Dharma will stay here:BJP's Sadhvi Pragya in Bhopal pic.twitter.com/GPqg9DWKwo
— ANI (@ANI) June 10, 2022
ಹಿಂದುತ್ವ ನಾಯಕ ಕಮಲೇಶ್ ತಿವಾರಿ, ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ ನೀಡಿ ಶಿಕ್ಷೆಗೊಳಗಾಗಿದ್ದರು. ಅಕ್ಟೋಬರ್ 18, 2019ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ತಮ್ಮ ಮನೆಯ ಹೊರಗೆ ಕಮಲೇಶ್ ತಿವಾರಿ ಕೊಲೆಯಾಗಿದ್ದರು.
ತಿವಾರಿ ಅವರು ಹಿಂದೂ ಮಹಾಸಭಾದ “ಸ್ವಯಂ ಘೋಷಿತ” ಕಾರ್ಯಾಧ್ಯಕ್ಷರಾಗಿದ್ದರು. ಅಲ್ಲದೆ ಹಿಂದೂ ಮಹಾಸಭಾದ ಟಿಕೆಟ್‌ನಲ್ಲಿ 2012ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು ಎಂದು ವರದಿಗಳು ಹೇಳುತ್ತವೆ.
ತಿವಾರಿಯವರ ಹತ್ಯೆಗೆ ಸಂಬಂಧಿಸಿದ ನಿರೂಪಣೆಯನ್ನು ಇಲ್ಲಿ ಗಮನಿಸಬೇಕು. ಪೊಲೀಸರು ಮುಸ್ಲಿಂ ಧರ್ಮಗುರುಗಳ ಮೇಲೆ ಆರೋಪ ಹೊರಿಸಿದ್ದರು. ಆದರೆ ತಿವಾರಿ ಕುಟುಂಬವು ಹತ್ಯೆಯ ವಿಚಾರದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಮತ್ತು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರವನ್ನು ದೂಷಿಸಿದ ನಂತರ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತು. ಥಾಥೇರಿ ನಿವಾಸಿಯಾಗಿರುವ ಸ್ಥಳೀಯ ಬಿಜೆಪಿ ಮುಖಂಡ ಶಿವಕುಮಾರ್ ಗುಪ್ತಾ ಅವರು ‘ದೇವಸ್ಥಾನ ವಿವಾದ’ದ ಹಿನ್ನೆಲೆಯಲ್ಲಿ ತಿವಾರಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ತಿವಾರಿ ಅವರ ತಾಯಿ ಮತ್ತು ಸೋದರಳಿಯ ಹೇಳಿಕೊಂಡಿದ್ದರು.
ನೂಪುರ್ ಶರ್ಮಾ ಅವರಲ್ಲದೆ, ಮತ್ತೊಬ್ಬ ಬಿಜೆಪಿ ನಾಯಕ ನವೀನ್ ಜಿಂದಾಲ್ ಕೂಡ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದು ಭಾರತದಲ್ಲಿ ಮಾತ್ರವಲ್ಲದೆ ಗಲ್ಫ್ ರಾಷ್ಟ್ರಗಳಲ್ಲಿಯೂ ಪ್ರತಿಭಟನೆಗೆ ಕಾರಣವಾಯಿತು. ನಂತರ ಬಿಜೆಪಿ ಕ್ರಮ ಜರುಗಿಸಿತು. ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತು. ಜಿಂದಾಲ್ ಅವರನ್ನು ಹೊರಹಾಕಿತು.
ಇದನ್ನೂ ಓದಿರಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ
ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗಳಿಗಾಗಿ ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನವದೆಹಲಿಯ ಜಾಮಾ ಮಸೀದಿಯ ಹೊರಗೆ, ಉತ್ತರ ಪ್ರದೇಶದ ಸಹರಾನ್‌ಪುರ, ಕೋಲ್ಕತ್ತಾದ ಪಾರ್ಕ್ ಸರ್ಕಸ್ ಪ್ರದೇಶದಲ್ಲಿ ಮತ್ತು ಭಾರತದ ಇತರ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ.
ಪ್ರಜ್ಞಾ ಸಿಂಗ್ ಠಾಕೂರ್ ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ನವೆಂಬರ್ 2019ರಲ್ಲಿ, ಠಾಕೂರ್ ಅವರು ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ‘ದೇಶಭಕ್ತ’ (ದೇಶಭಕ್ತ) ಎಂದು ಕರೆದಿದ್ದರು. ಇದು ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಮೇ 2019ರಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಜ್ಞಾ ಅವರು, “ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ. ಆತ ದೇಶಭಕ್ತನಾಗಿಯೇ ಉಳಿಯುತ್ತಾನೆ. ಆತನನ್ನು ಭಯೋತ್ಪಾದಕ ಎಂದು ಕರೆಯುವ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಂಥವರಿಗೆ ಈ ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು” ಎಂದು ಹೇಳಿಕೆ ನೀಡಿದ್ದರು.



Without much knowledge that lady issuing unwanted statements.