Homeಮುಖಪುಟಔಷಧಿ ಪ್ಯಾಕೇಜ್‌ನಲ್ಲಿ ‘ಭಾಜಪ’ ಹೆಸರು: ಪಕ್ಷದ ಪ್ರಚಾರಕ್ಕೆ ಜನರ ಹಣ ದುರ್ಬಳಕೆ?

ಔಷಧಿ ಪ್ಯಾಕೇಜ್‌ನಲ್ಲಿ ‘ಭಾಜಪ’ ಹೆಸರು: ಪಕ್ಷದ ಪ್ರಚಾರಕ್ಕೆ ಜನರ ಹಣ ದುರ್ಬಳಕೆ?

- Advertisement -
- Advertisement -

ಬಿಜೆಪಿ ಎಂದರೆ ‘ಭಾರತೀಯ ಜನತಾ ಪಕ್ಷ’. ಹಾಗೆಯೇ ‘ಭಾರತೀಯ ಜನೌಷಧಿ ಪರಿಯೋಜನ’ ಎಂದೂ ಹೌದು. ಇದು ನರೇಂದ್ರ ಮೋದಿ ಸರ್ಕಾರಕ್ಕೆ ಸಹಕಾರಿಯಾಗಿದೆ.

ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಗಳನ್ನು ಒದಗಿಸುವ ಯೋಜನೆ- ‘ಭಾರತೀಯ ಜನೌಷಧಿ ಪರಿಯೋಜನಾ’. ಇದನ್ನು 2008ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಜನ್ ಔಷಧಿ ಯೋಜನೆಯಾಗಿ ಪ್ರಾರಂಭಿಸಿತು. 2015ರಲ್ಲಿ ಮೋದಿ ಸರ್ಕಾರವು ‘ಪ್ರಧಾನ ಮಂತ್ರಿ ಜನೌಷಧಿ ಯೋಜನೆ’ ಎಂದು ಮರು ಪ್ಯಾಕೇಜ್ ಮಾಡಿತು. ‘ಬಿಜೆಪಿ’ ಎಂಬ ಸಂಕ್ಷೇಪಿತ ರೂಪವನ್ನು ತೋರಿಸಲು ನವೆಂಬರ್ 2016ರಲ್ಲಿ ಇದನ್ನು ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ’ ಎಂದು ಮರುನಾಮಕರಣ ಮಾಡಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಭಾಜಪ’ ಎಂಬುದು ಸ್ಪಷ್ಟವಾಗಿ ಗೋಚರಿಸದಿದ್ದರೂ ಔಷಧಿಗಳ ಪ್ಯಾಕೇಜಿಂಗ್ ನೋಡಿದರೆ ಅದರ ಕಲ್ಪನೆಗೆ ಅವಕಾಶ ನೀಡುತ್ತದೆ. ಪ್ರತಿಯೊಂದು ಪದದ ಮೊದಲ ಅಕ್ಷರವನ್ನು- (‘ಭಾ’, ‘ಜ’, ‘ಪ’) – ವಿಶಿಷ್ಟವಾದ ಕೇಸರಿ ಬಣ್ಣದಿಂದ ಮುದ್ರಿಸಲಾಗಿದೆ. ಉಳಿದ ಅಕ್ಷರಗಳು ಹಸಿರು ಮತ್ತು ನೀಲಿ ಬಣ್ಣದಲ್ಲಿದೆ. ಕೇಸರಿ ಬಣ್ಣವು ಸಹಜವಾಗಿ, ಬಿಜೆಪಿಯನ್ನು ಪ್ರತಿನಿಧಿಸುತ್ತದೆ.

ಔಷಧಗಳನ್ನು ಪ್ರಧಾನ್ ಮಂತ್ರಿ ಜನೌಷಧಿ ಕೇಂದ್ರ ಎಂಬ ಔಷಧಾಲಯಗಳ ಮೂಲಕ ಮಾರಾಟ ಮಾಡಲಾಗುತ್ತದೆ. 2016ರಲ್ಲಿ ಮರುಬ್ರಾಂಡ್ ಮಾಡಲಾದ ಸಮಯದಲ್ಲಿ ಪ್ರಧಾನ್ ಮಂತ್ರಿ ಹೆಸರನ್ನು ಸೇರಿಸಲಾಯಿತು. ಇಂದು ದೇಶದಲ್ಲಿ ಸುಮಾರು 8,700 ಔಷಧಿ ಅಂಗಡಿಗಳಿವೆ. ಸಾಮಾನ್ಯವಾಗಿ ಬಳಸುವ 1,600 ಜೆನೆರಿಕ್‌ಗಳು, 240 ಶಸ್ತ್ರಚಿಕಿತ್ಸಾ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತಿದೆ. ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕೇಂದ್ರೀಯ ಸಂಸ್ಥೆಯಾದ ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾದ ಪ್ರಕಾರ ದಾಸ್ತಾನು ನಿರಂತರವಾಗಿ ಹೆಚ್ಚಾಗುತ್ತಿದೆ.

‘ಬಿಜೆಪಿ’ ಯೋಜನೆಯು ಕಳೆದ ಹಣಕಾಸು ವರ್ಷದಲ್ಲಿ ಕೇವಲ 4,760 ಕೋಟಿ ರೂ.ಗಳಲ್ಲಿ ಹೆಚ್ಚಿನ ರೋಗಿಗಳನ್ನು ಉಳಿಸಿದೆ ಎಂದು ಅಂದಾಜಿಸಲಾಗಿದೆ. ಏಕೆಂದರೆ ಜೆನೆರಿಕ್ ಔಷಧಗಳು ಬ್ರಾಂಡ್ ಔಷಧಿಗಳಿಗಿಂತ 50-90 ಪ್ರತಿಶತ ಅಗ್ಗವಾಗಿವೆ ಎಂದು ಬ್ಯೂರೋದ ಸಿಇಒ ರವಿ ದಾಧಿಚ್ ಹೇಳಿದ್ದಾರೆ. ಉದಾಹರಣೆಗೆ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ‘ಅಮ್ಲೋಡಿಪೈನ್’ 10-ಟ್ಯಾಬ್ಲೆಟ್ ಸ್ಟ್ರಿಪ್, ಈ ಯೋಜನೆಯಡಿಯಲ್ಲಿ ರೂ. 5.50 ಸಿಗುತ್ತದೆ. ಮಾರುಕಟ್ಟೆಯಲ್ಲಿ ಈ ಸ್ಟ್ರಿಪ್‌ಗೆ 28 ರೂ.ಗಳನ್ನು ನೀಡಬೇಕಾಗುತ್ತದೆ.

ಮುಂದಿನ ವರ್ಷದ ವೇಳೆಗೆ 10,000 ಜನೌಷಧಿ ಕೇಂದ್ರಗಳನ್ನು ಹೊಂದುವುದು ಸರ್ಕಾರದ ಯೋಜನೆಯಾಗಿದೆ ಎಂದು ದಧಿಚ್ ‘ನ್ಯೂಸ್‌ಲಾಂಡ್ರಿ’ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ಯೋಜನೆಯ “ಬಿಜೆಪಿ” ಬ್ರ್ಯಾಂಡಿಂಗ್‌ಗೆ ಸಂಬಂಧಿಸಿದಂತೆ, ದಧಿಚ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದಾಗ್ಯೂ ಮರುಬ್ರಾಂಡಿಂಗ್‌ನಲ್ಲಿ ಭಾಗಿಯಾದ ‘ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ’ದ ಉನ್ನತ ಅಧಿಕಾರಿಯೊಬ್ಬರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. “ರಾಜಕೀಯ ಪ್ರತಿನಿಧಿಗಳು” ಹೀಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ. ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿಲ್ಲ.

ಆದಾಗ್ಯೂ, ಈ ರೀತಿಯ ಬ್ರಾಂಡಿಂಗ್‌ ನಿಷೇಧಿಸಲಾಗಿಲ್ಲ. ತಾಂತ್ರಿಕವಾಗಿ ನೋಡಿದರೆ ರಾಜಕೀಯ ಜಾಹೀರಾತಿನ ವ್ಯಾಪ್ತಿಯೊಳಗೆ ಇದು ಬರುವುದಿಲ್ಲ. ಸರ್ಕಾರಿ ಜಾಹೀರಾತಿನಲ್ಲಿನ ವಿಷಯಗಳನ್ನು ನಿಯಂತ್ರಿಸಲೆಂದೇ ಸಮಿತಿಯೂ ಇದೆ.

“ತೆರಿಗೆದಾರರ ಹಣದಿಂದ ಪಾವತಿಸಿದ ಜಾಹೀರಾತುಗಳು ಸರ್ಕಾರಿ ಜವಾಬ್ದಾರಿಗಳಿಗೆ ಮಾತ್ರ ಸಂಬಂಧಿಸಿವೆ, ವಸ್ತುನಿಷ್ಠ ವಿಷಯವನ್ನು ಒಳಗೊಂಡಿರುತ್ತವೆ, ರಾಜಕೀಯ ಹಿತಾಸಕ್ತಿಗಳನ್ನು ಉತ್ತೇಜಿಸುವುದಿಲ್ಲ” ಎಂದು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ 2016ರಲ್ಲಿ ಸಮಿತಿ ರಚನೆಯಾಗಿದೆ.

ಸಮಿತಿಯು ಈ ಪಕ್ಷಪಾತಗಳನ್ನು ತಡೆದಿಲ್ಲ ಎಂದು ಆರೋಪಗಳು ಬಂದಿವೆ. “ಬಿಜೆಪಿಯ ಜಾಹೀರಾತುಗಳಿಗೆ ಸಮಿತಿ ಕಣ್ಣು ಮುಚ್ಚಿದೆ” ಎಂದು ಎಎಪಿ ದೂರಿದೆ.

ಡಿಸೆಂಬರ್ 2021ರವರೆಗೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್, ಆರೋಪಗಳನ್ನು ನಿರಾಕರಿಸಿದ್ದಾರೆ. “ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಲವು ಬಿಜೆಪಿ ಸರ್ಕಾರಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ” ಎಂದಿದ್ದಾರೆ.

ಮೋದಿ ಸರ್ಕಾರವು ತನ್ನ ನಾಯಕರು ಮತ್ತು ಪಕ್ಷವನ್ನು ಪ್ರಚಾರ ಮಾಡಲು ಸಾರ್ವಜನಿಕ ಯೋಜನೆಗಳನ್ನು ಬಳಸಿದ ದಾಖಲೆಯನ್ನು ಹೊಂದಿದೆ. ದೀನದಯಾಳ್ ಉಪಾಧ್ಯಾಯರಂತಹ ಸಂಘ ಪರಿವಾರದ ನಾಯಕರ ಹೆಸರನ್ನು ಯೋಜನೆಗಳಿಗೆ ಮರುನಾಮಕರಣ ಮಾಡಿದ್ದಿದೆ.

ಇದನ್ನೂ ಓದಿರಿ: ಸರಿಯಾದ ನಿರ್ಧಾರಕ್ಕೆ ಬಂದಿಲ್ಲವೆಂದರೆ ಬೃಹತ್ ಪ್ರತಿಭಟನೆ: ಪಠ್ಯಪುಸ್ತಕ ಹಗರಣದ ವಿರುದ್ಧ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಲಿಂಗಾಯತ ಸ್ವಾಮೀಜಿಗಳು

ಹೀಗೆ ಯೋಜನೆಗಳ ದುರ್ಬಳಕೆ ಮಾಡಿಕೊಂಡಿದ್ದು ಬಿಜೆಪಿಯಷ್ಟೇ ಅಲ್ಲ. ಮಾಯಾವತಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ತಮ್ಮ ಮತ್ತು ಬಹುಜನ ಸಮಾಜ ಪಕ್ಷದ ಆನೆಯ ಚಿಹ್ನೆಯ ಪ್ರತಿಮೆಗಳನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್ ಅವರು “ಸಮಾಜವಾದಿ” ಹೆಸರಿನಲ್ಲಿ ಯೋಜನೆಗಳನ್ನು ಪ್ರಾರಂಭಿಸಿದ್ದರು. ಹಾಲಿ ಮುಖ್ಯಮಂತ್ರಿ ಬಿಜೆಪಿಯ ಆದಿತ್ಯನಾಥ್ ಅವರು ಸಾರ್ವಜನಿಕ ಬಸ್‌ಗಳು, ಶೌಚಾಲಯಗಳು ಮತ್ತು ಶಾಲಾ ಬ್ಯಾಗ್‌ಗಳಿಗೆ ಕೇಸರಿ ಬಣ್ಣ ಬಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ತನ್ನ ತೃಣಮೂಲ ಕಾಂಗ್ರೆಸ್ ಪಕ್ಷದ ನೀಲಿ ಮತ್ತು ಬಿಳಿ ಬಣ್ಣಗಳನ್ನು ಫ್ಲೈಓವರ್‌ಗಳಿಗೆ ಬಳಿಸಿದೆ. ರಾಜ್ಯದ ಶಾಲೆಗಳಲ್ಲಿ ನೀಲಿ ಮತ್ತು ಬಿಳಿ ಸಮವಸ್ತ್ರವನ್ನು ಪರಿಚಯಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಸರ್ಕಾರವು ಟಿವಿ ಜಾಹೀರಾತುಗಳಲ್ಲಿ ಸಾರ್ವಜನಿಕ ಹಣವನ್ನು ಬಳಸುತ್ತಿದೆ ಎಂದು 2016ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆರೋಪಿಸಿದ್ದರು.

(ಮೂಲ: ನ್ಯೂಸ್‌ಲಾಂಡ್ರಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...