‘ಅಸಾದುದ್ದೀನ್ ಓವೈಸಿಗೆ ಹಾಕುವ ಪ್ರತಿ ಮತವು, ಭಾರತದ ವಿರುದ್ಧ ಹಾಕುವ ಮತ’ ಎಂಬ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಹೇಳಿಕೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ. ಸಂವಿಧಾನದ ಪ್ರಕಾರ ಇವಿಎಂ ಸ್ಲಿಪ್ ಮೂಲಕ ಒಂದು ಪಕ್ಷಕ್ಕೆ ಹಾಕುವ ಮತ ಭಾರತದ ವಿರುದ್ಧ ಹೇಗಾಗುತ್ತದೆ ವಿವರಿಸಿ ಎಂದು ತಾಕೀತು ಮಾಡಿದ್ದಾರೆ.
ಎಐಎಂಐಎಂ ಪಕ್ಷ ಅಥವಾ ಇನ್ಯಾವುದೇ ಪಕ್ಷ ದೇಶದ್ರೋಹಿ ಎಂದು ಸಾಬೀತಾಗಿದೆಯೇ? ಹಾಗಿದ್ದರೆ ಅದನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಗೃಹ ಸಚಿವ ಅಮಿತ್ ಶಾರವರು ಬ್ಯಾನ್ ಮಾಡಬೇಕಲ್ಲವೇ? ಸಮಸ್ಯೆಯೆಂದರೆ ಬಿಜೆಪಿ ಎಂದೂ ಸಂವಿಧಾನವನ್ನು ನಂಬುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
. @Tejasvi_Surya explain how voting for a party recognized by @ECISVEEP as per Constitution, becomes a vote against India?
If MIM or any other party is an anti national party, why don’t you get it banned by HM @AmitShah? Can you?
Problem is, BJP never believed in the Constitution https://t.co/V8wwkfpBuD— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 24, 2020
ಬಾಬಾಸಾಹೇಬ್ ಅಂಬೇಡ್ಕರ್‌ರವರು ಬರೆದ ‘ರಿಡಲ್ಸ್ ಇನ್ ಹಿಂದೂಯಿಸಂ’ ಎಂಬ ಪುಸ್ತಕವನ್ನು ಶೀಘ್ರದಲ್ಲೇ ಕಳಿಸುತ್ತೇನೆ. ಅದನ್ನು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆ ಹ್ಯಾಂಡಲ್ ಮಾಡುವವರಿಗೆ ಓದಲು ತಿಳಿಸಿ. ನಾನು ಓದಬೇಕೆಂದು ಶಿಫಾರಸ್ಸು ಮಾಡುತ್ತೇನೆ. ನೀವು ಚುನಾವಣೆ ಗೆಲ್ಲಬೇಕೆಂದರೆ ವಿಭಜನಕಾರಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಮಾನ್ಯ ನರೇಂದ್ರ ಮೋದಿಯವರು ಈ 6 ವರ್ಷದಲ್ಲಿ ಮಾಡಿದ ಸಾಧನೆಗಳ ಆಧಾರಲ್ಲಿ ಮತ ಕೇಳಬಹುದಲ್ಲವೇ? ನೀವು ಅಭಿವೃದ್ದಿ ಆಧಾರದಲ್ಲಿ ಚುನಾವಣೆ ಗೆಲ್ಲಲ್ಲು ಸಾಧ್ಯವಿಲ್ಲವೇ? ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ “ಓವೈಸಿಯ ಇಸ್ಲಾಮಿಕ್ ಪ್ರಭುತ್ವದ ಸಿದ್ಧಾಂತವನ್ನು ಪವಿತ್ರ ಪುಸ್ತಕ ಸಂವಿಧಾನದ ಮೇಲೆ ಇಡುವುದು ಭಾರತ ವಿರೋಧಿ ಕ್ರಮ. ನಮ್ಮ ಸಂವಿಧಾನಕ್ಕೆ ಇಸ್ಲಾಂ ಧರ್ಮವು ಎಷ್ಟು ಮತಾಂಧವಾಗಿದೆ ಎಂಬುದರ ಕುರಿತು ಬಾಬಾಸಾಹೇಬರು ಬರೆದಿರುವುದನ್ನು ಓದಬೇಕೆಂದು ನಾನು ಸೂಚಿಸುತ್ತೇನೆ” ಎಂದಿದ್ದಾರೆ.
Sorry for late response Sri @PriyankKharge. Just finished my football game.
Let me explain.
Owaisi’s ideology of Islamic theocracy, of placing Holy Book over Constitution is anti-India.
I suggest you read Babasaheb on how fanatic Islamism is antithetical to our Constitution. https://t.co/ezvsbANkH9
— Tejasvi Surya (@Tejasvi_Surya) November 24, 2020
ವಾಸ್ತವವಾಗಿ ನೀವು ‘ಪಾಕಿಸ್ತಾನ ಅಥವಾ ಭಾರತದ ವಿಭಜನೆ’ ಕುರಿತು ಉಲ್ಲೇಖಿಸಿದ ಅದೇ ಪುಸ್ತಕದಲ್ಲಿ ಬಾಬಾಸಾಹೇಬರು ಎಲ್ಲಾ ರೀತಿಯ ಮತಾಂಧತೆಯನ್ನು ವಿರೋಧಿಸಿದ್ದಾರೆ. ಅಲ್ಲದೆ ಹಿಂದುತ್ವದ ಬಗ್ಗೆ ಎಚ್ಚರಿಕೆಗಳು ಪುಸ್ತಕದಲ್ಲಿವೆ ಗಮನಿಸಿ ಎಂದು ಪ್ರಿಯಾಂಕ್ ಖರ್ಗೆ ಮರು ಟ್ವೀಟ್ ಮಾಡಿದ್ದಾರೆ.
ಈ ಸಂವಾದಕ್ಕೆ ಹಲವು ನೆಟ್ಟಿಗರು ಜೊತೆಗೂಡಿದ್ದಾರೆ. ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ವಿನಯ್ ಶ್ರೀನಿವಾಸನ್ ಟ್ವೀಟ್ ಮಾಡಿ “ತೇಜಸ್ವಿ ಸೂರ್ಯರವರೆ ನೀವು ಏಕೆ ಅಂಬೇಡ್ಕರ್‌ರವರ ‘ಜಾತಿವಿನಾಶ’ ಪುಸ್ತಕವನ್ನು ಉಲ್ಲೇಖಿಸುವುದಿಲ್ಲ? ನಿಮಗಾಗಿ ಕೆಲವು ಆಯ್ದ ಭಾಗಗಳು ಇಲ್ಲಿವೆ. ‘ಹಿಂದೂ’ ಎಂಬ ಪದವನ್ನು ಸಹ ಮಹಮ್ಮದೀಯರು ನೀಡುತ್ತಾರೆ, ಏಕೆಂದರೆ ಹಿಂದೂ ಸಮಾಜವೆಂಬುದೇ ಇರಲಿಲ್ಲ. ಅದು ಕೇವಲ ಜಾತಿಗಳ ಕೊಂಪೆಯಾಗಿತ್ತು” ಎಂದಿದ್ದಾರೆ.
Mr @Tejasvi_Surya why don't you quote from Babasaheb's annihilation of caste ?
Here are some excerpts for you. Even the word 'Hindu' is given by Mohammedans he says as there was nothing like Hindu society. Just a collection of castes. pic.twitter.com/E1zhAogJo6
— vinaysreenivasa ವಿನಯ (@vinaysreeni) November 24, 2020
ತೇಜಸ್ವಿ ಅರ್ಹತೆಗಳನ್ನು ಹೊಂದಿರಬಹುದು. ಆದರೆ ಅವರಿಗೆ ಶಿಕ್ಷಣದ ಕೊರತೆ ಇದೆ. ಕೆಟ್ಟದಾಗಿ, ಅವನಿಗೆ ಮಾನವೀಯತೆಯ ಕೊರತೆಯಿದೆ. ಈ ಮನುಷ್ಯನಿಗೆ ದಲಿತರ ನೋವು ಅರ್ಥವಾಗುವುದಿಲ್ಲ. ಆದರೆ, ಅವರು ತಮ್ಮ ಬಾಸ್‌ನ ಆಜ್ಞೆಗಳನ್ನು ಕುರುಡಾಗಿ ಅನುಸರಿಸಿ, ವಿಭಜಿಸುವ ಹಿಂದುತ್ವ ಸಿದ್ಧಾಂತಕ್ಕೆ ಅನುಕೂಲವಾಗುವಂತೆ ದಲಿತರನ್ನು ಬಳಸುತ್ತಾರೆ ಎಂದು ಪರಿಸರ ಕಾರ್ಯಕರ್ತ ಲಿಯೋ ಸಾಲ್ಡಾನಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ನಿದ್ದೆ ಮಾಡುತ್ತಿದ್ದಾರೆಯೆ?: ಓವೈಸಿ


