Homeಮುಖಪುಟಕಾಂಗ್ರೆಸ್‌ ಅನ್ನು ಬಲಪಡಿಸುವಲ್ಲಿ ಅಹಮದ್ ಪಟೇಲ್ ಪಾತ್ರ ಅವಿಸ್ಮರಣೀಯ - ಪ್ರಧಾನಿ ಮೋದಿ

ಕಾಂಗ್ರೆಸ್‌ ಅನ್ನು ಬಲಪಡಿಸುವಲ್ಲಿ ಅಹಮದ್ ಪಟೇಲ್ ಪಾತ್ರ ಅವಿಸ್ಮರಣೀಯ – ಪ್ರಧಾನಿ ಮೋದಿ

ಸೋನಿಯಾ ಗಾಂಧಿಯವರ ಅಪ್ತ ಸಹಾಯಕ ಮತ್ತು ಕಾಂಗ್ರೆಸ್‌ನ ಟ್ರಬಲ್‌ಶೂಟರ್ ಎಂದೇ ಖ್ಯಾತಿಯಾಗಿದ್ದ ಅಹಮದ್ ಪಟೇಲ್ ಇಂದು ಗುರಗ್ರಾಮ್ ಆಸ್ಪತ್ರೆಯಲ್ಲಿ ನಿಧರಾದರು

- Advertisement -
- Advertisement -

ಇಂದು ಮುಂಜಾನೆ ಕಾಂಗ್ರೆಸ್ ಹಿರಿಯ ಮುಖಂಡ ಅಹಮದ್ ಪಟೇಲ್ ನಿಧಾನರಾಗಿದ್ದು, ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, “ಕಾಂಗ್ರೆಸ್ ಅನ್ನು ಬಲಗೊಳಿಸುವಲ್ಲಿ ಪಟೇಲ್ ಪಾತ್ರ ಅವಿಸ್ಮರಣೀಯ” ಎಂದಿದ್ದಾರೆ.

ಸೋನಿಯಾ ಗಾಂಧಿಯವರ ಅಪ್ತ ಸಹಾಯಕ ಮತ್ತು ಕಾಂಗ್ರೆಸ್‌ನ ಟ್ರಬಲ್‌ಶೂಟರ್ ಎಂದೇ ಖ್ಯಾತಿಯಲ್ಲಿದ್ದ ಅಹಮದ್ ಪಟೇಲ್ ಇಂದು ಗುರಗ್ರಾಮ್ ಆಸ್ಪತ್ರೆಯಲ್ಲಿ ನಿಧರಾದರು ಎಂದು ಅವರ ಪುತ್ರ ಫೈಸಲ್ ಟ್ವೀಟ್ ಮಾಡಿದ್ದರು.

ಇವರಿಗೆ ಅನೆಕ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಗುಜರಾತ್: ಕಾಂಗ್ರೆಸ್ ಹಿರಿಯ ಮುಖಂಡ ಅಹಮದ್ ಪಟೇಲ್ ನಿಧನ!

ನರೇಂದ್ರ ಮೊದಿ ಟ್ವೀಟ್ ಮಾಡಿ, “ಅಹಮದ್ ಜೀ ನಿಧನದಿಂದ ದುಃಖವಾಗಿದೆ. ಹಲವು ವರ್ಷಗಳನ್ನು ಸಾರ್ವಜನಿಕ ಜೀವನದಲ್ಲಿ ಮತ್ತು ಸಮಾಜಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು. ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರ ಅವಿಸ್ಮರಣೀಯವಾದುದು ಮತ್ತು ಇದು ಅವರ ತೀಕ್ಷ್ಣಮತಿಗೆ ಉದಾಹರಣೆಯಾಗಿದೆ. ಅವರ ಮಗನೊಂದಿಗೆ ಮಾತನಾಡಿ ಸಂತಾಪ ಸೂಚಿಸಿದ್ದೇನೆ. ಅವರ ಅತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಆನ್‌ಲೈನ್ ತರಗತಿ ಮತ್ತು ಆನ್‌ಲೈನ್ ಶಿಕ್ಷಣ ಬೇಡ’ – ಸಾಮಾನ್ಯ ಖಾಸಗಿ ಶಾಲೆಗಳ ಮನವಿ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, “ಅಹಮದ್ ಪಟೇಲ್ ನಿಧನದಿಂದ ಕಾಂಗ್ರೆಸ್ ಪಕ್ಷವು ನಿಷ್ಠಾವಂತ ನಾಯಕನನ್ನು ಮತ್ತು ನಾನು ನಂಬಿಕಸ್ತ ಗೆಳೆಯನನ್ನು ಕಳೆದುಕೊಂಡಿದ್ದೇವೆ. ನನ್ನ ರಾಜಕೀಯ ಬದುಕಿನ ಪ್ರಮುಖ ನಿರ್ಧಾರಕ್ಕೆ ಕಾರಣರಾಗಿದ್ದ ಪಟೇಲ್ ಅವರು ಕೊನೆಯವರೆಗೆ ಹಿತೈಷಿಯಾಗಿದ್ದವರು. ಈ ಸಾವಿನ ದು:ಖ ಮಾತುಗಳನ್ನು ಮೀರಿದ್ದು. ಹೋಗಿ ಬನ್ನಿ ಪಟೇಲ್‌ಜಿ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗುತ್ತಿಗೆದಾರರು ಸ್ಪರ್ಧಿಸುವಂತಿಲ್ಲ; ಚುನಾವಣಾ ಆಯೋಗ

ಮುಖ್ಯಮಂತ್ರಿ ಯಾಡಿಯೂರಪ್ಪ ಟ್ವೀಟ್ ಮಾಡಿ, “ಪ್ರಖ್ಯಾತ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್‌ ಜಿ ನಿಧನದಿಂದ ಅತೀವ ದುಃಖವಾಗಿದೆ. ಅವರ ಕುಟುಂಬ ಮತ್ತು ಹಿತೈಷಿಗಳಿಗಳಿಗೆ ನನ್ನ ಹೃದಯಸ್ಪರ್ಷಿ ಸಂತಾಪಗಳು. ಓಮ್ ಶಾಂತಿ” ಎಂದು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶ: ಬಲವಂತದ ಮತಾಂತರಕ್ಕೆ 1-10 ವರ್ಷ ಜೈಲು, 25000 ದಂಡ!

ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ, “ಕಾಂಗ್ರೆಸ್ ನಾಯಕ ಮತ್ತು ನನ್ನ ಗೆಳೆಯನ ನಿಧನದಿಂದ ದುಃಖವಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮತ್ತು ನನ್ನಂತಹ ಕಾರ್ಯಕರ್ತರಿಗೆ ಅತಿದೊಡ್ಡ ನಷ್ಟ. ಪಕ್ಷಕ್ಕೆ ಅವರ ಕೊಡುಗೆ ಸದಾ ಅವಿಸ್ಮರಣೀಯ” ಎಂದು ಬೆರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ನ ಒಳ ಒಪ್ಪಂದದಿಂದ ಉಪಚುನಾವಣೆಯನ್ನು ಗೆಲ್ಲಲಾಗಿದೆ: ಸಿದ್ದರಾಮಯ್ಯ

ಹೀಗೆ ಇನ್ನೂ ಹತ್ತಾರು ನಾಯಕರು ಅಹಮದ್ ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ 71 ವರ್ಷದ ಅಹಮದ್ ಪಟೇಲ್ ಇಂದು ನಸುಕಿನ ಜಾವ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದು, ಕೊರೊನಾ ಸೋಂಕಿಗೆ ಒಳಗಾಗಿದ್ದ ಇವರು ಗುರುಗ್ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪುತ್ರ ಫೈಸಲ್ ಹೇಳಿದ್ದಾರೆ.

ಗುಜರಾತ್ ರಾಜ್ಯಸಭಾ ಸಂಸದ ಬುಧವಾರ ಮುಂಜಾನೆ 3.30 ಕ್ಕೆ ನಿಧನರಾಗಿದ್ದಾರೆ ಎಂದು ಫೈಸಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಫೆ. 26 ರಿಂದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

“25/11/2020, 03:30 AM ಕ್ಕೆ ನನ್ನ ತಂದೆ ಅಹ್ಮದ್ ಪಟೇಲ್ ಅಕಾಲಿಕವಾಗಿ ನಿಧನರಾದರೆಂದು ಘೋಷಿಸಲು ಅತೀವ ದುಃಖ ಮತ್ತು ವಿಷಾದವಾಗಿತ್ತಿದೆ. ಒಂದು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾದ ನಂತರ ಅವರ ಆರೋಗ್ಯ ಸ್ಥಿರವಾಗಿರಲಿಲ್ಲ. ಬಹು ಅಂಗಾಂಗ ವೈಫಲ್ಯಗಳಿಂದಾಗಿ ಅದು ಇನ್ನಷ್ಟು ಹದಗೆಟ್ಟಿತ್ತು. ಅಲ್ಲಾಹನು ಅವರಿಗೆ ಜನ್ನತ್‌ ಉಲ್ ಫಿರ್ದೌಸ್, ಇನ್ಶಅಲ್ಲಾವನ್ನು ನೀಡಲಿ” ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಖಜಾಂಚಿಯೂ ಆಗಿದ್ದ ಅಹಮದ್ ಪಟೇಲ್ ಅವರು ಅಕ್ಟೋಬರ್ 1 ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದರು. ನಂತರ ಅವರನ್ನು ನವೆಂಬರ್ 15 ರಂದು ಗುರುಗ್ರಾಮ್‌ನ ಮೆಡಂತಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು.


ಇದನ್ನೂ ಓದಿ: ಆಯ್ಕೆಯಾಗಿದ್ದರೂ ಆದೇಶ ಪತ್ರ ನೀಡದ ಕಾಲೇಜು ಶಿಕ್ಷಣ ಇಲಾಖೆ; ಧರಣಿ ಕೂತ ಪ್ರಾಧ್ಯಾಪಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read