Homeಮುಖಪುಟಗುಜರಾತ್: ಕಾಂಗ್ರೆಸ್ ಹಿರಿಯ ಮುಖಂಡ ಅಹಮದ್ ಪಟೇಲ್ ನಿಧನ!

ಗುಜರಾತ್: ಕಾಂಗ್ರೆಸ್ ಹಿರಿಯ ಮುಖಂಡ ಅಹಮದ್ ಪಟೇಲ್ ನಿಧನ!

- Advertisement -
- Advertisement -

ಕಾಂಗ್ರೆಸ್ ಹಿರಿಯ ಮುಖಂಡ 71 ವರ್ಷದ ಅಹಮದ್ ಪಟೇಲ್ ಇಂದು ನಸುಕಿನ ಜಾವ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದು, ಕೊರೊನಾ ಸೋಂಕಿಗೆ ಒಳಗಾಗಿದ್ದ ಇವರು ಗುರುಗ್ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪುತ್ರ ಫೈಸಲ್ ಹೇಳಿದ್ದಾರೆ.

ಗುಜರಾತ್ ರಾಜ್ಯಸಭಾ ಸಂಸದ ಬುಧವಾರ ಮುಂಜಾನೆ 3.30 ಕ್ಕೆ ನಿಧನರಾಗಿದ್ದಾರೆ ಎಂದು ಫೈಸಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಡಿವೈಡ್ & ರೂಲ್ ತಂತ್ರಕ್ಕೆ ಆಹಾರವಾಗುತ್ತಿದ್ದಾರಾ ಸಿದ್ದರಾಮಯ್ಯ?

ಇದನ್ನೂ ಓದಿ: ಸಿಎಂ ಹುದ್ದೆ ಹಂಚಿಕೆ ಮೇಲೆ ಎನ್‌ಸಿಪಿ, ಸ್ಪೀಕರ್‌ ಸ್ಥಾನದ ಮೇಲೆ ಕಾಂಗ್ರೆಸ್‌ ಕಣ್ಣು: ಶಿವಸೇನೆಯ ಮುಂದಿನ ನಡೆ ಏನು..?

“25/11/2020, 03:30 AM ಕ್ಕೆ ನನ್ನ ತಂದೆ ಅಹ್ಮದ್ ಪಟೇಲ್ ಅಕಾಲಿಕವಾಗಿ ನಿಧನರಾದರೆಂದು ಘೋಷಿಸಲು ಅತೀವ ದುಃಖ ಮತ್ತು ವಿಷಾದವಾಗಿತ್ತಿದೆ. ಒಂದು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾದ ನಂತರ ಅವರ ಆರೋಗ್ಯ ಸ್ಥಿರವಾಗಿರಲಿಲ್ಲ. ಬಹು ಅಂಗಾಂಗ ವೈಫಲ್ಯಗಳಿಂದಾಗಿ ಅದು ಇನ್ನಷ್ಟು ಹದಗೆಟ್ಟಿತ್ತು. ಅಲ್ಲಾಹನು ಅವರಿಗೆ ಜನ್ನತ್‌ ಉಲ್ ಫಿರ್ದೌಸ್, ಇನ್ಶಅಲ್ಲಾವನ್ನು ನೀಡಲಿ” ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಖಜಾಂಚಿಯೂ ಆಗಿದ್ದ ಅಹಮದ್ ಪಟೇಲ್ ಅವರು ಅಕ್ಟೋಬರ್ 1 ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದರು. ನಂತರ ಅವರನ್ನು ನವೆಂಬರ್ 15 ರಂದು ಗುರುಗ್ರಾಮ್‌ನ ಮೆಡಂತಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು.


ಇದನ್ನೂ ಓದಿ: ‘ಆನ್‌ಲೈನ್ ತರಗತಿ ಮತ್ತು ಆನ್‌ಲೈನ್ ಶಿಕ್ಷಣ ಬೇಡ’ – ಸಾಮಾನ್ಯ ಖಾಸಗಿ ಶಾಲೆಗಳ ಮನವಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...