Homeಮುಖಪುಟಡಬ್ಲ್ಯುಎಫ್ಐ ಅಮಾನತಿಗೂ ನನಗೂ ಯಾವುದೇ ಸಂಬಂಧವಿಲ್ಲ: ಬ್ರಿಜ್ ಭೂಷಣ್ ಸಿಂಗ್

ಡಬ್ಲ್ಯುಎಫ್ಐ ಅಮಾನತಿಗೂ ನನಗೂ ಯಾವುದೇ ಸಂಬಂಧವಿಲ್ಲ: ಬ್ರಿಜ್ ಭೂಷಣ್ ಸಿಂಗ್

- Advertisement -
- Advertisement -

‘ನಾನು ಈಗಾಗಲೇ ಕುಸ್ತಿ ಚಟುವಟಿಕೆಯಿಂದ ಸಂಪೂರ್ಣ ನಿವೃತ್ತಿ ಹೊಂದಿದ್ದೇನೆ; ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ನೂತನ ಆಡಳಿತ ಮಂಡಳಿ ಅಮಾನತಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ, ಅಪ್ರಾಪ್ತ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಸಂಜಯ್ ಸಿಂಗ್ ನೇತೃತ್ವದ ಹೊಸ ಆಡಳಿತ ಮಂಡಳಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಮಾಡಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕುಸ್ತಿ ಫೆಡರೇಷನ್ ಆಡಳಿತ ಮಂಡಳಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಸದ್ಯಕ್ಕೆ ಯಾವುದೇ ವಿವಾದವನ್ನು ಎದುರಿಸಲು ಸಿದ್ಧನಿಲ್ಲ. ದೇಶದ ಕುಸ್ತಿ ಜಗತ್ತಿನಲ್ಲಿ ಇತ್ತೀಚಿನ ಯಾವ ಬೆಳವಣಿಗೆಗಳಿಗೂ, ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದರು.

‘ಕುಸ್ತಿ ಫೆಡರೇಷನ್ ನೂತನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣ ಕ್ರೀಡಾ ಸಚಿವಾಲಯವು ಇಂದು ಅಮಾನತು ಆದೇಶ ಹೊರಡಿಸಿದೆ. ಸಂಜಯ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಹೊಸದಾಗಿ ಆಯ್ಕೆಯಾದ ಮಂಡಳಿಯು ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದೆ. ಹೊಸದಾಗಿ ಆಯ್ಕೆಯಾದ ಮಂಡಳಿಯು ಹಿಂದಿನ ಅಧ್ಯಕ್ಷರ ನಿಯಂತ್ರಣದಲ್ಲಿದೆ; ಅವರನ್ನು ಲೈಂಗಿಕ ಕಿರುಕುಳದ ಆರೋಪದ ಅಡಿಯಲ್ಲಿ ಅಮಾನತುಗೊಳಿಸಲಾಗಿತ್ತು’ ಎಂದು ಸಚಿವಾಲಯ ಆರೋಪಿಸಿದೆ.

ಈ ಕುರಿತು ಮಾತನಾಡಿರುವ ಬ್ರಿಜ್ ಭೂಷಣ್, ’12 ವರ್ಷ ಕುಸ್ತಿಪಟುಗಳಿಗಾಗಿ ದುಡಿದಿದ್ದೇನೆ, ನ್ಯಾಯ ಕೊಡಿಸಿದ್ದೇನೆಯೇ ಇಲ್ಲವೇ ಎನ್ನುವುದನ್ನು ಕಾಲವೇ ಹೇಳುತ್ತದೆ. ಸದ್ಯಕ್ಕೆ ಕುಸ್ತಿಯಿಂದ ಸಂಪೂರ್ಣ ನಿವೃತ್ತಿ ಹೊಂದಿದ್ದೇನೆ, ಕುಸ್ತಿಯಿಂದ ನಂಟು ಕಡಿದುಕೊಂಡಿದ್ದೇನೆ. ಈಗ ಸರ್ಕಾರದ ನಿರ್ಧಾರದ ಕುರಿತು ಮಾತುಕತೆಯನ್ನು ಒಕ್ಕೂಟದ ಚುನಾಯಿತ ಪದಾಧಿಕಾರಿಗಳೆ ಮಾಡುತ್ತಾರೆ’ ಎಂದು ನವ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬ್ರಿಜ್ ಭೂಷಣ್ ಸಿಂಗ್ ಅವರು ಹಲವಾರು ಯುವ ಜೂನಿಯರ್ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಸಾಕ್ಷಿ ಮಲ್ಲಿಕ್ ಸೇರಿದಂತೆ ಹಲವು ಹಿರಿಯ ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆ ನಂತರ ಬ್ರಿಜ್ ಭೂಷಣ್ ಅವರನ್ನು ಡಬ್ಲ್ಯೂಎಫ್ಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಲಂಪಿಕ್ ಬೆಳ್ಳಿ ಪದಕ ವಿಜೇತೆ, ಭಾರತದ ಖ್ಯಾತ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಸಂಜಯ್ ಸಿಂಗ್ ಆಯ್ಕೆಯಿಂದ ನೊಂದು, ಕಣ್ಣೀರಿಡುತ್ತಲೇ ನಿವೃತ್ತಿ ಘೋಷಿಸಿದ್ದರು. ಮತ್ತೊಂದು ಗಂಭೀರ ಆರೋಪ ಮಾಡಿದ್ದ ಅವರು, ‘ಮಾಜಿ ಅಧ್ಯಕ್ಷರ ಭದ್ರಕೋಟೆಯಾದ ಗೊಂಡಾದಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ನಡೆಯುತ್ತಿವೆ ಎಂದು ಹಲವಾರು ಯುವ ಮಹಿಳಾ ಕುಸ್ತಿಪಟುಗಳಿಂದ ನನಗೆ ಕರೆಗಳು ಬಂದಿವೆ’ ಎಂದು ಶನಿವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಸಚಿವಾಲಯವು ಹೊಸದಾಗಿ ಚುನಾಯಿತ ಸಂಸ್ಥೆಯನ್ನು ಅಮಾನತುಗೊಳಿಸಿದೆ. ಈ ಆದೇಶದ ವಿರುದ್ಧ ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್ಐ ದೆಹಲಿ ಹೈಕೋರ್ಟಿಗೆ ಮೊರೆ ಹೋಗಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ; ಅಥ್ಲೀಟ್‌ಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ; ಡಬ್ಲ್ಯೂಎಫ್ಐ ನೂತನ ಆಡಳಿತ ಮಂಡಳಿ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...