Homeಮುಖಪುಟಉತ್ತರಪ್ರದೇಶ: ಬಲವಂತದ ಮತಾಂತರಕ್ಕೆ 1-10 ವರ್ಷ ಜೈಲು, 25000 ದಂಡ!

ಉತ್ತರಪ್ರದೇಶ: ಬಲವಂತದ ಮತಾಂತರಕ್ಕೆ 1-10 ವರ್ಷ ಜೈಲು, 25000 ದಂಡ!

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಪ್ರಾಪ್ತರು ಮತ್ತು ಮಹಿಳೆಯರನ್ನು ಬಲವಂತವಾಗಿ ಮತಾಂತರಕ್ಕೆ ಒಳಪಡಿಸಿದರೆ, 3-10 ವರ್ಷದವರೆಗೆ ಜೈಲುವಾಸ ಮತ್ತು 25 ಸಾವಿರ ದಂಡ ವಿಧಿಸಲಾಗುತ್ತದೆ

- Advertisement -
- Advertisement -

ಮತಾಂತರದ ಕುರಿತು ಬಹುವಾಗಿ ಚರ್ಚಿಸುತ್ತಿರುವ ಸಮಯದಲ್ಲಿಯೇ ಉತ್ತರ ಪ್ರದೇಶ ಸರ್ಕಾರವು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದ್ದು, ಬಲವಂತದ ಮತಾಂತರಕ್ಕೆ 1 ರಿಂದ 5 ವರ್ಷಗಳವರೆಗೆ ಜೈಲುವಾಸ ಮತ್ತು 15 ಸಾವಿರ ರೂಗಳ ದಂಡವನ್ನು ವಿಧಿಸಬಹುದು” ಎಂದು ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಎಎನ್‌ಐ, “ಈ ಸುಗ್ರೀವಾಜ್ಞೆಯು ಬಲವಂತದ ಮತಾಂತರಕ್ಕೆ ಸಂಬಂಧಿಸಿದ್ದಾಗಿದ್ದು, ಇದಕ್ಕೆ 1-5 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 15 ಸಾವಿರ ರೂಗಳ ದಂಡವನ್ನು ವಿಧಿಸಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಪ್ರಾಪ್ತರು ಮತ್ತು ಮಹಿಳೆಯರನ್ನು ಬಲವಂತವಾಗಿ ಮತಾಂತರಕ್ಕೆ ಒಳಪಡಿಸಿದರೆ, 3-10 ವರ್ಷದವರೆಗೆ ಜೈಲುವಾಸ ಮತ್ತು 25 ಸಾವಿರ ದಂಡ ವಿಧಿಸಲಾಗುತ್ತದೆ” ಎಂದು ಉತ್ತರ ಪ್ರದೇಶದ ಸಚಿವರಾದ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ ಸರ್ಕಾರಕ್ಕೆ ಹಿನ್ನಡೆ; ಲವ್ ಜಿಹಾದ್ ಕಾನೂನು ವಿರುದ್ಧ ಅಲಹಾಬಾದ್ ಹೈಕೋರ್ಟ್ ತೀರ್ಪು

ಈ ಹಿಂದೆ ಅಲಹಾಬಾದ್ ಹೈಕೋರ್ಟ್‌, “ವಿವಾಹಕ್ಕಾಗಿ ಮತಾಂತರವಾದರೆ ಅದು ಮಾನ್ಯವಲ್ಲ” ಎಂದು ತೀರ್ಪು ನೀಡಿತ್ತು.

ಇದಾದ ನಂತರ ಬಿಜೆಪಿ ಆಡಳಿತವಿರುವ ರಾಜ್ಯಗಳು ಬಲವಂತದ ಮತಾಂತರ ನಿಷೇಧಕ್ಕೆ ಕಾನೂನು ರೂಪಿಸುವುದಾಗಿ ಹೇಳಿಕೊಂಡಿದ್ದವು.


ಇದನ್ನೂ ಓದಿ: ಲವ್ ಮತ್ತು ಜಿಹಾದ್ ಒಟ್ಟಿಗೆ ಇರಲು ಸಾಧ್ಯವಿಲ್ಲ: ಸಂಸದೆ ನುಸ್ರತ್ ಜಹಾನ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...