ಬಿಜೆಪಿ ಪಕ್ಷವು ಸುಮಾರು ಎರಡು ದಶಕಗಳಿಂದ ರಾಜ್ಯವನ್ನು “ನಿಂಬೆಹಣ್ಣಿನಂತೆ ಹಿಸುಕಿ” ಮತ್ತು ಬಡ ರಾಜ್ಯಗಳ ಬೆನ್ನೆಲುಬುಗಳನ್ನು “ಮುರಿದುಹಾಕಿದೆ” ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶಾಸಕರು, ಸಂಸದರನ್ನು ಬೇಟೆಯಾಡಿ ಸರ್ಕಾರಗಳನ್ನು ಉರುಳಿಸಿ “ಡಬಲ್ ಎಂಜಿನ್ ಸರ್ಕಾರಗಳನ್ನು” ರಚಿಸುತ್ತಾ, ದೇಶದ ಒಕ್ಕೂಟ ರಚನೆಯನ್ನು “ನಾಶಗೊಳಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಬಡ ರಾಜ್ಯಗಳ
“ಬಿಜೆಪಿ ಕಳೆದ 20 ವರ್ಷಗಳಲ್ಲಿ ಜಾರ್ಖಂಡ್ ಅನ್ನು ನಿಂಬೆಹಣ್ಣಿನಂತೆ ಹಿಂಡಿದೆ. ಆದರೆ, ಈಗಲಾದರೂ ಅದು ಕೊನೆಗೊಳ್ಳಬೇಕು. ನಾವು ಹಸುವಿಗೆ ಆಹಾರವನ್ನು ನೀಡುತ್ತೇವೆ, ಆದರೆ ಅದರಿಂದ ಹಾಲು ಪಡೆಯುವುದು ಅವರು. ಜಾರ್ಖಂಡ್‌ನ ಸಂಪತ್ತನ್ನು ಅವರು ಲೂಟಿ ಮಾಡುತ್ತಿದ್ದಾರೆ. ಜಾರ್ಖಂಡ್ ಖನಿಜಗಳಿಂದ ಸಮೃದ್ಧವಾಗಿದ್ದರೂ, ಸಂಪನ್ಮೂಲಗಳು ಇದ್ದರೂ ರಾಜ್ಯವು ಅತ್ಯಂತ ಬಡ ರಾಜ್ಯಗಳಲ್ಲಿ ಒಂದಾಗಿದೆ. ಇದು ಒಂದು ವಿರೋಧಾಭಾಸವಾಗಿದ್ದು, ಇದಕ್ಕೆ ಇನ್ನು ಮುಂದೆ ಅನುಮತಿ ನೀಡಬಾರದು” ಎಂದು ಜಾರ್ಖಂಡ್ ಮುಖ್ಯಮಂತ್ರಿ ಸೊರೆನ್ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಕಲ್ಲಿದ್ದಲು, ಕಬ್ಬಿಣದ ಅದಿರು, ಬಾಕ್ಸೈಟ್, ಡಾಲಮೈಟ್‌ಗಳಂತಹ ಸಂಪನ್ಮೂಲಗಳು ನಮ್ಮಲ್ಲಿ ಹೇರಳವಾಗಿದೆ. ಆದರೆ ಜಾರ್ಖಂಡ್‌ನಂತಹ ರಾಜ್ಯಗಳ ಬೆನ್ನೆಲುಬುಗಳನ್ನು ಮುರಿದ ಕೇಂದ್ರ ಸರ್ಕಾರ, ಜಿಎಸ್‌ಟಿ ಮೂಲಕ ನಮ್ಮ ಆದಾಯ ಸಂಗ್ರಹಕ್ಕೆ ಅಡ್ಡಿ ಮಾಡಿದೆ. ಅವರು ನಮ್ಮ ಹಣಕಾಸಿನ ಅಗತ್ಯಗಳನ್ನು ಪರಿಹರಿಸಲು ಕೂಡಾ ಏನೂ ಮಾಡಿಲ್ಲ” ಅವರು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪದೇ ಪದೇ ಪತ್ರ ಬರೆದರೂ ರಾಜ್ಯಕ್ಕೆ ನೀಡಬೇಕಿರುವ 1.36 ಲಕ್ಷ ಕೋಟಿ ಕಲ್ಲಿದ್ದಲು ಬಾಕಿಯನ್ನು ಇನ್ನೂ ಪಾವತಿಸಿಲ್ಲ ಎಂದು ಸೋರೆನ್ ಹೇಳಿದ್ದಾರೆ. ಬಿಜೆಪಿಯು ವಿಭಜನೆಯ ರಾಜಕೀಯ, ಹಿಂದೂ-ಮುಸ್ಲಿಂ ಧ್ರುವೀಕರಣ ಮತ್ತು ಕೋಮು ದ್ವೇಷದ ಅಜೆಂಡಾದಲ್ಲಿ ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಆರೋಗ್ಯಕರ ರಾಜಕೀಯ ಸ್ಪರ್ಧೆಯನ್ನು ಅಳಿಸಿಹಾಕುತ್ತಿರುವುದು ಈ ದೇಶದ ದೌರ್ಭಾಗ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
“ಅವರಿಗೆ ಅಭಿವೃದ್ಧಿ, ಉದ್ಯೋಗ ಅಥವಾ ಆರ್ಥಿಕ ಸಮೃದ್ಧಿಯ ಯಾವುದೇ ಅಜೆಂಡಾವಿಲ್ಲ. ಅವರಿಗೆ ತಿಳಿದಿರುವ ಏಕೈಕ ಅಜೆಂಡಾ ವಿಭಜನೆಯಾಗಿದೆ. ಅವರು ವಿಭಜಕ ರಾಜಕೀಯದ ಬಗ್ಗೆ ಮಾತನಾಡುತ್ತಾ, ಕೋಮು ದ್ವೇಷವನ್ನು ಬೆಳೆಸುತ್ತಾರೆ. ಹಿಂದೂ-ಮುಸ್ಲಿಂ ಧ್ರುವೀಕರಣವನ್ನು ಉತ್ತೇಜಿಸುತ್ತಾರೆ” ಅವರು ಆರೋಪಿಸಿದ್ದಾರೆ. ಬಿಜೆಪಿ ಬಡ ರಾಜ್ಯಗಳ
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಬುಡಕಟ್ಟು ಮುಖ್ಯಮಂತ್ರಿಯೊಬ್ಬ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ಸೊರೆನ್ ಪ್ರತಿಪಾದಿಸಿದ್ದು, ಅದಕ್ಕಾಗಿಯೆ ಅವರ ಸರ್ಕಾರವನ್ನು ದುರ್ಬಲಗೊಳಿಸಲು ಸಮಯಕ್ಕಿಂತ ಮುಂಚಿತವಾಗಿ ಚುನಾವಣೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಟ್ರಂಪ್ ಗೆಲುವಿನ ಬೆನ್ನಲ್ಲೇ ಬೈಡೆನ್ ಪೌರತ್ವ ನೀತಿ ರದ್ದು : ವಲಸಿಗರಿಗೆ ಆತಂಕ
ಟ್ರಂಪ್ ಗೆಲುವಿನ ಬೆನ್ನಲ್ಲೇ ಬೈಡೆನ್ ಪೌರತ್ವ ನೀತಿ ರದ್ದು : ವಲಸಿಗರಿಗೆ ಆತಂಕ


