ಕಾಂಗ್ರೆಸ್ ಮುಕ್ತ ಭಾರತ, ವಿರೋಧ ಪಕ್ಷ ಮುಕ್ತ ಭಾರತ ಎಂದು ಘೋಷಣೆ ಕೂಗುತ್ತಿದ್ದ ಬಿಜೆಪಿಗೆ ಅದೇ ತಿರುಗುಬಾಣವಾಗಿದೆ. ಲೋಕಸಭೆಯಲ್ಲಿ ಅವರು ಭರ್ಜರಿ ಜಯಗಳಿಸಿದರೂ ಕೂಡ, ಕಳೆದ 20 ತಿಂಗಳಿನಲ್ಲಿ ನಡೆದ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲುಂಡಿದ್ದಾರೆ. ಅವರ ಪ್ರಾಬಲ್ಯ ಕುಸಿಯುತ್ತಿದೆ ಎಂದು ಬಹುತೇಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಘಡದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಅಲ್ಲೆಲ್ಲಾ ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರ ಸೂತ್ರ ಹಿಡಿದಿದೆ. ಮಿಝೋರಾಂನಲ್ಲಿ ಸ್ಥಳೀಯ ಪಕ್ಷ ಎಂಎನ್‌ಎಫ್ ಅಧಿಕಾರಕ್ಕೇರಿದರೆ ತೆಲಂಗಾನದಲ್ಲಿ ಪ್ರಾದೇಶಿಕ ಪಕ್ಷ ಟಿಆರ್‌ಎಸ್ ವಿಜಯಪತಾಕೆ ಹಾರಿಸಿತ್ತು. ಅಲ್ಲಿಗೆ ಬಿಜೆಪಿ ಕಥೆ ಮುಗಿದಿತ್ತು.
ಇನ್ನು ಕಳೆದ ತಿಂಗಳು ನಡೆದ ಹರಿಯಾಣ-ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಸಹ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆಯನ್ನೇನೂ ಮಾಡಲಿಲ್ಲ. ಹರಿಯಾಣದಲ್ಲಿ ಕಷ್ಟಪಟ್ಟು ಅಧಿಕಾರವಿಡಿದರೆ, ಮಹಾರಾಷ್ಟ್ರದಲ್ಲಿ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯಲು ಹೋಗಿ ಮುಗ್ಗರಿಸಿಬಿದ್ದಿದೆ.
ಇದನ್ನು ಓದಿ: ಅನರ್ಹ ಶಾಸಕರನ್ನು ಬೀದಿ ಬೀದಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿರುವ ಜನರು : ವಿಡಿಯೋ ನೋಡಿ
ಬಹುದೊಡ್ಡ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ನಂತರ ಅದರ ಚಿತ್ರವನ್ನು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಭಾರತದ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ 71% ನಿಂದ 40%ಗೆ ಬಿಜೆಪಿ ಕುಸಿದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
“ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುವವರಿಗೆ, ಈ ಚಿತ್ರ ಕನ್ನಡಿಯಂತಿದೆ. ಸಾರ್ವಜನಿಕರು ನಿರಂತರವಾಗಿ ಸ್ಪಷ್ಟ ಸಂದೇಶಗಳನ್ನು ನೀಡುತ್ತಿದ್ದಾರೆ. ವಿಭಜಕ ಮತ್ತು ನಕಾರಾತ್ಮಕ ಚಿಂತನೆಯನ್ನು ನಿರಾಕರಿಸುತ್ತಾರೆ. ಈ ದೇಶದಲ್ಲಿ ಅನೇಕ ಸಿದ್ಧಾಂತಗಳಿವೆ, ಹೋರಾಟವು ಸೈದ್ಧಾಂತಿಕವಾಗಿರಬೇಕೆ ಹೊರತು ವೈಯಕ್ತಿಕವಾಗಿರಬಾರದು” ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
कांग्रेस मुक्त भारत की बात करने वालों के लिए यह तस्वीर आईने की तरह है, जनता लगातार स्पष्ट सन्देश दे रही है, विभाजनकारी और नकारात्मक सोच को नकार रही है। इस देश में तमाम विचारधाराएं हैं, लड़ाई व्यक्तिगत नहीं, विचारधारा की होनी चाहिए।
PC: India Today pic.twitter.com/1NA1CrLjKD— Ashok Gehlot (@ashokgehlot51) November 27, 2019
ಬಿಜೆಪಿ ನಮ್ಮ ರಾಷ್ಟ್ರಕ್ಕೆ ಶಾಪವಾಗಿದೆ ಎಂದು ಜನರು ಈಗ ಅರಿತುಕೊಂಡಿದ್ದಾರೆ.
ರಾಷ್ಟ್ರೀಯವಾದಿಗಳಂತೆ ಮುಖವಾಡ ತೊಟ್ಟು ನಮ್ಮನ್ನು ವಿಭಜಿಸುವುದು ಮತ್ತು ದೇಶಭಕ್ತಿಯ ಹೆಸರಿನಲ್ಲಿ ರಾಷ್ಟ್ರವನ್ನು ಲೂಟಿ ಮಾಡುವುದು ಅವರ ಏಕೈಕ ಉದ್ದೇಶವಾಗಿದೆ.
ಈ ಭ್ರಷ್ಟ ಫ್ಯಾಸಿಸ್ಟ್‌ಗಳಿಂದ ಭಾರತವನ್ನು ರಕ್ಷಿಸಿಕೊಳ್ಳುವುದಕ್ಕೆ ಇದು ಸರಿಯಾದ ಸಮಯ ಎಂದು ಟ್ವಿಟ್ಟರ್‌ನಲ್ಲಿ ಬಹಳಷ್ಟು ಜನ ಬರೆದಿದ್ದಾರೆ. ಇದೇ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಬಿಜೆಪಿ ಮುಕ್ತ ಭಾರತ ಕೂಡ ಟ್ರೆಂಡಿಂಗ್ ಆಗಿದೆ.
ಮುಂದಿನ ತಿಂಗಳು ಜಾರ್ಖಂಡ್‌ನಲ್ಲಿ ಚುನಾವಣೆ ನಡೆಯಲಿದ್ದು ಅಲ್ಲಿಯೂ ಬಿಜೆಪಿಗೆ ಕಷ್ಟಕರವಾಗಲಿದೆ. ಹಾಗೆಯೇ ಕರ್ನಾಟಕದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು ಅಲ್ಲಿಯು ಬಿಜೆಪಿ 08ಕ್ಕಿಂತ ಕಡಿಮೆ ಸ್ಥಾನ ಗೆದ್ದಲ್ಲಿ ಅದು ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದೆ.


