ಉತ್ತರಾಖಂಡ ಬಿಜೆಪಿಯ ಸ್ಟಾರ್ ಪ್ರಚಾರಕ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ಅವರು, “ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ಕಳೆದುಕೊಳ್ಳಲಿದೆ” ಎಂದು ಹೇಳಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಈಗಾಗಲೇ ಉತ್ತರಾಖಂಡದಲ್ಲಿ ಚುನಾವಣಾ ರ್‍ಯಾಲಿಗಳನ್ನು ನಡೆಸುತ್ತಾ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಶಿವರಾಜ್ ಚೌಹಾಣ್ ಅವರ ಈ ವಿಡಿಯೊವನ್ನು ಕಾಂಗ್ರೆಸ್ಸಿಗರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಹಿರಿಯ ಕಾಂಗ್ರೆಸ್ ನಾಯಕ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ವೀಡಿಯೊವನ್ನು ಬಳಸಿಕೊಂಡು ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕೈತಪ್ಪಿದ ಟಿಕೆಟ್: ಬಿಜೆಪಿಗೆ ರಾಜೀನಾಮೆ ನೀಡುವತ್ತ ಉತ್ತರಾಖಂಡದ ಹಲವು ಶಾಸಕರು!
ಟ್ವಿಟರ್‌ನಲ್ಲಿ ಅವರು, “ಉತ್ತರಾಖಂಡದಿಂದ ಪ್ರಚಾರ ಮುಗಿಸಿ ವಾಪಸಾದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಉತ್ತರಾಖಂಡದ ಬಿಜೆಪಿಯ ವಾಸ್ತವವನ್ನು ಹೇಳಿದ್ದು, ಉತ್ತರಾಖಂಡದಿಂದ ಬಿಜೆಪಿ ಹೋಗಿದೆ ಎಂದು ಹೇಳಿದ್ದಾರೆ. ಉತ್ತರಾಖಂಡದಲ್ಲಿ ಬಿಜೆಪಿ ಹೊರಟು ಹೋಗಿದೆ” ಎಂದು ಹೇಳಿದ್ದಾರೆ.
उत्तराखंड से प्रचार करके लोटे मध्यप्रदेश के मुख्यमंत्री शिवराज सिंह ने बताई उत्तराखंड के भाजपा की हकीकत बोले उत्तराखंड से भाजपा तो गई #उत्तराखंड_से_भाजपा_तो_गई pic.twitter.com/xPOCqpNXc6
— Harish Rawat (@harishrawatcmuk) February 11, 2022
ಮುಖ್ಯಮಂತ್ರಿ ಚೌಹಾಣ್ ಅವರು ಊಟದ ಸಮಯದಲ್ಲಿ ಕೆಲವು ಜನರೊಂದಿಗೆ ಸಂವಹನ ನಡೆಸುತ್ತಾ, ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ತಮ್ಮ ಪಕ್ಷವಾದ ಬಿಜೆಪಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಉತ್ತರಾಖಂಡ: ಬಿಜೆಪಿ ಸರ್ಕಾರದ ಸಂಪುಟ ಸಚಿವ ಕಾಂಗ್ರೆಸ್‌ಗೆ ಸೇರ್ಪಡೆ
ವಿಡಿಯೊದಲ್ಲಿನ ಧ್ವನಿಯಯು ಸ್ಪಷ್ಟವಾಗಿಲ್ಲವಾದರೂ, ಎರಡೂ ರಾಜ್ಯಗಳಲ್ಲಿ ಪಕ್ಷದ ನಿರೀಕ್ಷಿತ ಕಾರ್ಯಕ್ಷಮತೆಯ ಬಗ್ಗೆ ಮತ್ತೊಬ್ಬರು ಕೇಳಿದಾಗ, ಶಿವರಾಜ್ ಸಿಂಗ್ ಚೌಹಾಣ್, “ಯುಪಿಯಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಾನು ಭಾವಿಸುತ್ತೇನೆ. ಉತ್ತರಾಖಂಡದಲ್ಲಿ ಬಿಜೆಪಿ ಸೋಲುತ್ತಿದೆ. ಇದು ಬಿಗಿ ಸ್ಪರ್ಧೆಯಾಗಿದೆ (ಮುಝೆ ತೊ ಲಗ್ತಾ ಹೈ ಯುಪಿ ಮೆ ಕೋಯಿ ಸಂದೇಹ್ ನಹೀ ಹೈ, ಉತ್ತರಾಖಂಡ ಮೇ ಭೀ ಬಿಜೆಪಿ ಗಯಿ, ಕಡಾ ಮುಕಾಬ್ಲಾ ಹೈ)” ಎಂದು ಹೇಳುತ್ತಾರೆ. ಈ ವೇಳೆ ಅವರ ಮಾತನ್ನು ವಿಡಿಯೊ ಮಾಡುತ್ತಿರುವುದನ್ನು ಗಮನಸಿ, ವಿಡಿಯೊ ಮಾಡಬೇಡ ಎಂದು ಅದನ್ನು ನಿಲ್ಲಿಸುತ್ತಾರೆ.
ಮುಖ್ಯಮಂತ್ರಿ ಈ ವಿಡಿಯೊ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ರಾಜ್ಯದ ಹರಿದ್ವಾರದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಚೌಹಾಣ್, ಈ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ. “ನಾನು ಇದನ್ನು ಆನ್‌ದ ರೆಕಾರ್ಡ್ ಹೇಳುತ್ತಿದ್ದೇನೆ. ಬಿಜೆಪಿ ಕಳೆದ ಚುನಾವಣೆಗಿಂತ ಹೆಚ್ಚು ಸ್ಥಾನ ಪಡೆಯಲಿದೆ. ಪುಷ್ಕರ್ ಸಿಂಗ್ ಧಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ” ಎಂದು ಶುಕ್ರವಾರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿರುವ ಅವರು ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಹರಿದ್ವಾರ ದ್ವೇಷ ಭಾಷಣ: ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್


