Homeಕರ್ನಾಟಕಅಧಿಕಾರ ದುರ್ಬಳಕೆಯಿಂದ ಬಿಜೆಪಿಗೆ ಗೆಲುವು: ಡಿ.ಕೆ.ಶಿವಕುಮಾರ್ ಆರೋಪ

ಅಧಿಕಾರ ದುರ್ಬಳಕೆಯಿಂದ ಬಿಜೆಪಿಗೆ ಗೆಲುವು: ಡಿ.ಕೆ.ಶಿವಕುಮಾರ್ ಆರೋಪ

ಬಿಜೆಪಿಯವರು 15 ವರ್ಷಗಳಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಆಡಳಿತ ಮಾಡುತ್ತಿದ್ದು, ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಇಲ್ಲಿನವರೇ ಆಗಿದ್ದರು. ಇಲ್ಲಿ ತಮಗೆ ಬೇಕಾದ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

- Advertisement -
- Advertisement -

ಕಲಬುರಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಫಲಿತಾಂಶ ಸಮಾಧಾನ ತಂದಿದೆ. ತರೀಕೆರೆ, ಬೆಳಗಾವಿಯಲ್ಲಿ ನಾವು ಮೊದಲ ಬಾರಿಗೆ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದ್ದೆವು. ಹೀಗಾಗಿ ನಾವು ಧೃತಿಗೆಡುವ ಅಗತ್ಯವಿಲ್ಲ. ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಮಗೆ ಸಂಖ್ಯೆ ಕಡಿಮೆ ಬಂದಿರಬಹುದು, ನಮ್ಮ ಪಕ್ಷದ ಐವರು ಬಂಡಾಯ ಸದಸ್ಯರು ಗೆದ್ದಿದ್ದು, ಎಲ್ಲ ಒಟ್ಟಾಗಿ ಸೇರಿಸಿದರೆ ಕಾಂಗ್ರೆಸ್ ವಿಚಾರ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚು ಬೆಂಬಲ ಸಿಗುತ್ತದೆ. ಬಿಜೆಪಿಯವರು 15 ವರ್ಷಗಳಿಂದ ಆಡಳಿತ ಮಾಡುತ್ತಿದ್ದು, ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಇಲ್ಲಿನವರೇ ಆಗಿದ್ದರು. ಇಲ್ಲಿ ತಮಗೆ ಬೇಕಾದ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.

ನಮಗೆ ಸಂಖ್ಯಾಬಲ ಇಲ್ಲದಿದ್ದರೂ ಮತದಾರರು ನಮಗೆ ಉತ್ತಮ ಫಲಿತಾಂಶ ನೀಡಿದ್ದಾರೆ. ನಾವು ಜನರ ಸೇವೆ ಮುಂದುವರೆಸಿಕೊಂಡು ಹೋಗುತ್ತೇವೆ. ನಮ್ಮ ಸದಸ್ಯರು ಜನರ ಸೇವೆ ಮಾಡುತ್ತಾರೆ. ನಮ್ಮ ಬಂಡಾಯ ಅಭ್ಯರ್ಥಿಗಳು ಕರೆ ಮಾಡಿ ನಾವು ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲೇ ಉಳಿಯುತ್ತೇವೆ ಎಂದಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಎಲ್‌ಪಿಜಿ ಬೆಲೆ ಏರಿಕೆ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ವಿಶೇಷ ವಿಡಿಯೋ ಬಿಡುಗಡೆ

ಈ ಫಲಿತಾಂಶ ಬಿಜೆಪಿ ಸರ್ಕಾರದ ಆಡಳಿತದ ಪರ ಬಂದಿದೆಯಾ? ಅಥವಾ ವಿರೋಧವಾಗಿ ಬಂದಿದೆಯಾ? ಎಂದು ಜಗದೀಶ್ ಶೆಟ್ಟರ್ ಅವರೇ ಹೇಳಬೇಕು. ಅವರೇ ಸರ್ಟಿಫಿಕೇಟ್ ನೀಡಲಿ. ಮುಂದೆಯೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ. ಬಳ್ಳಾರಿ, ತೀರ್ಥಹಳ್ಳಿ, ರಾಮನಗರದಲ್ಲಿ ಫಲಿತಾಂಶ ಬಂದು ನಾಲ್ಕು ತಿಂಗಳಾಗಿದೆ. ಜನರ ಕೈಗೆ ಅಧಿಕಾರ ನೀಡಬೇಕು. ಹೀಗಾಗಿ ಶೀಘ್ರ ಉಳಿದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ ಎಂದರು.

ನಾವು ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದೇವೆ. ಅದು ನಮ್ಮ ತಪ್ಪು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಲ್ಲಿನ ವಿಚಾರ, ಅಭ್ಯರ್ಥಿ ಶಕ್ತಿ ಮುಖ್ಯವಾಗುತ್ತದೆ. ವಿಧಾನಸಭೆ ಹಾಗೂ ಸಂಸತ್ ಚುನಾವಣೆಯಲ್ಲಿ ಬೇರೆ ವಿಚಾರ ಮುಖ್ಯವಾಗುತ್ತದೆ. ಪಕ್ಷಗಳು ಏನೇ ಮಾಡಿದರೂ ಮತದಾರರು ಅವರದೇ ಲೆಕ್ಕಾಚಾರ ಮಾಡಿರುತ್ತಾರೆ. ನಮ್ಮ ಪಕ್ಷದಲ್ಲಿದ್ದವರು ಕೆಲವರು ಬೇರೆ ಪಕ್ಷಗಳಿಂದ ನಿಂತು ಗೆದ್ದಿದ್ದಾರೆ. ನಮಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದು. ಬೇಧ-ಭಾವ ಏನಿದ್ದರೂ ಬಿಜೆಪಿಯಲ್ಲಿದೆ. ನಮ್ಮ ನಾಯಕರು ಚುನಾವಣೆ ಪ್ರಚಾರಕ್ಕೆ ವಾರ್ಡ್, ವಾರ್ಡ್‌ಗೂ ತೆರಳಿದ್ದಾರೆ. ಬಿಜೆಪಿಯವರಂತೆ ನಮಗೆ ಧನಶಕ್ತಿ ಇಲ್ಲದಿರಬಹುದು. ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ಮಾಡುತ್ತಿರುವುದು, ರಾಜ್ಯಗಳಲ್ಲಿ ಅವರ ನಾಯಕತ್ವ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯವಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ, ಉತ್ತಮ ಆಡಳಿತ ನೀಡಲು ಸಾಧ್ಯವಾಗಿಲ್ಲ ಎಂಬುದಕ್ಕೆ ಸಾಕ್ಷಿ. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರನ್ನು ಬದಲಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಂದ 4 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸಾವಿನ ಸಂಖ್ಯೆಯ ಆಡಿಟ್ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಮೃತರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂಬುದು ನಮ್ಮ ಬೇಡಿಕೆ. ಈ ವಿಚಾರವನ್ನು ನಾವು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ: ಕಲಬುರಗಿ ಕಾಂಗ್ರೆಸ್‌ಗೆ, ಬೆಳಗಾವಿ, ಹು-ಧಾರವಾಡ ಬಿಜೆಪಿಗೆ, ಕಾಣೆಯಾದ ಜೆಡಿಎಸ್

ನೂತನ ಮುಖ್ಯಮಂತ್ರಿಗಳು ಕೋವಿಡ್ ಸಮಯದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ, ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿದವರಿಗೆ ಸಹಾಯ ಮಾಡಲಿ, ಸತ್ತವರಿಗೆ ಪರಿಹಾರ ನೀಡಲಿ, ಅಸಂಘಟಿತ ಕಾರ್ಮಿಕರು, ರೈತರಿಗೆ ಆಗಿರುವ ನಷ್ಟ ತುಂಬಿಕೊಡಲಿ. ಮಹದಾಯಿ, ಕೃಷ್ಣ, ಮೇಕೆದಾಟು ವಿಚಾರದಲ್ಲಿ ಇಷ್ಟು ದಿನ ಬೊಮ್ಮಾಯಿ ಅವರು, ಶೆಟ್ಟರ್ ಅವರು ಏನು ಹೇಳುತ್ತಿದ್ದರು! ಈಗ ಅಧಿಕಾರ ಅವರ ಕೈಯಲ್ಲೇ ಇದೆ. ಈಗ ಏನು ಮಾಡುತ್ತೀರಾ ಎಂದು ಅವರನ್ನೇ ಕೇಳಿ ಎಂದು ಹೇಳಿದರು.

ನಾನು, ದೇಶಪಾಂಡೆ ಅವರು, ಧ್ರುವನಾರಾಯಣ ಅವರು, ಶಿವಾನಂದ ಪಾಟೀಲ್ ಅವರು, ಹುಬ್ಬಳ್ಳಿ-ಧಾರವಾಡದ ಎಲ್ಲ ಪ್ರಬುದ್ಧ ಮತದಾರರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಸಾಷ್ಟಾಂಗ ನಮಸ್ಕಾರ ಸಲ್ಲಿಸಲು ಬಂದಿದ್ದೇವೆ. ನಿಮ್ಮ ವಿಶ್ವಾಸ ಹಾಗೂ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...