ಬಿಜೆಪಿ ತನ್ನ ಶಾಸಕರಿಗೆ ಲಂಚ ನೀಡಲು ಯತ್ನಿಸುತ್ತಿದೆ ಎಂಬ ಆಮ್ ಆದ್ಮಿ ಪಕ್ಷದ ದೂರಿನ ಮೇರೆಗೆ ಪಂಜಾಬ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ. ತನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಪ್ರಯತ್ನದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಆಡಳಿತರೂಢ ಎಎಪಿ ಪೊಲೀಸರಿಗೆ ಕೋರಿದೆ. ಬಿಜೆಪಿ ಕನಿಷ್ಠ 10 ಶಾಸಕರಿಗೆ ತಲಾ 25 ಕೋಟಿ ರೂ. ಆಫರ್ ಮಾಡಿದೆ ಎಂದು ಎಎಪಿ ಹೇಳಿಕೊಂಡಿದೆ.
ದೆಹಲಿಯಲ್ಲಿ ಈ ಹಿಂದೆ ಬಿಜೆಪಿಯ ಆಪರೇಷನ್ ಕಮಲ ವಿಫಲವಾಗಿತ್ತು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ. ಎಎಪಿಯ ಆರೋಪವನ್ನು ರಾಜ್ಯ ಬಿಜೆಪಿ ನಿರಾಕರಿಸಿದ್ದು, “ಆಧಾರರಹಿತ ಮತ್ತು ಸುಳ್ಳಿನ ಕಂತೆ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ರಾಜ್ಯ ಸರ್ಕಾರವನ್ನು ಉರುಳಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಪಂಜಾಬ್ ಸಚಿವ ಹರ್ಪಾಲ್ ಚೀಮಾ ಮಾಡಿರುವ ಆಧಾರರಹಿತ ಆರೋಪವು ಪಂಜಾಬ್‌ನಲ್ಲಿ ಎಎಪಿ ದೊಡ್ಡ ವಿಭಜನೆಯತ್ತ ಹೋಗುತ್ತಿದೆ ಎಂಬುವುದನ್ನು ತೋರಿಸುತ್ತದೆ. ಕೇಜ್ರಿವಾಲ್ ಹಸ್ತಕ್ಷೇಪದಿಂದ ಪಕ್ಷವು ಛಿದ್ರವಾಗುವ ಹಂತದಲ್ಲಿದೆ” ಎಂದು ಬಿಜೆಪಿ ನಾಯಕ ಸುಭಾಷ್ ಶರ್ಮಾ ಹೇಳಿದ್ದಾರೆ.
“ಬಿಜೆಪಿಯು ಒಕ್ಕೂಟ ಸರ್ಕಾರದ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಂಡಿದ್ದು, ಬಿಜೆಪಿ ಪಕ್ಷ ಸೇರಿದರೆ ದೆಹಲಿ ಎಎಪಿ ಶಾಸಕರಿಗೆ ತಲಾ 20 ಕೋಟಿ ನೀಡುವುದಾಗಿ ಆಫರ್ ನೀಡಿದೆ” ಎಂದು ಈ ತಿಂಗಳ ಆರಂಭದಲ್ಲಿ ಎಎಪಿ ಆರೋಪಿಸಿತ್ತು.
ಇದನ್ನೂ ಓದಿ: ಡಿಸೆಂಬರ್ 2021 ರವರೆಗೆ ಬಾಕಿ ಉಳಿದ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಿದ ಪಂಜಾಬ್ ಸರ್ಕಾರ
“ಪಕ್ಷ ಬದಲಿಸಲು ಪ್ರತಿ ಶಾಸಕರಿಗೆ 25 ಕೋಟಿ ರೂ. ಬಿಜೆಪಿ ನೀಡುತ್ತಿದೆ. ಆಪರೇಷನ್ ಕಮಲವು ಕರ್ನಾಟಕದಲ್ಲಿ ಯಶಸ್ವಿಯಾಗಿರಬಹುದು, ಆದರೆ ದೆಹಲಿ ಶಾಸಕರು ದೃಢವಾಗಿ ಉಳಿದು ಬಿಜೆಪಿ ಕಾರ್ಯಾಚರಣೆಯನ್ನು ವಿಫಲಗೊಳಿಸಿದ್ದಾರೆ” ಎಂದು ಪಂಜಾಬ್ ಸಚಿವ ಚೀಮಾ ಹೇಳಿದ್ದಾರೆ.
“ಪಂಜಾಬ್‌ನಲ್ಲಿ ಸರ್ಕಾರ ಬದಲಾವಣೆಯಾದರೆ, ಶಾಸಕರಿಗೆ ದೊಡ್ಡ ಬಡ್ತಿಗಳು, ಹುದ್ದೆಗಳನ್ನು ನೀಡಲಾಗುವುದು ಬಿಜೆಪಿ ತನ್ನ ಶಾಸಕರಿಗೆ ಆಫರ್ ನೀಡಿರುವುದಾಗಿ” ಎಂದು ಸಚಿವ ಚೀಮಾ ಹೇಳಿದ್ದು, ಭಗವಂತ್ ಮಾನ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಶಾಸಕರಿಗೆ ಹಲವಾರು ಕರೆಗಳು ಬಂದಿವೆ ಎಂದು ಪುನರುಚ್ಚರಿಸಿದ್ದಾರೆ.


