ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷವೂ ‘ಡಬಲ್ ಬ್ಲಂಡರ್’ ಸರ್ಕಾರವನ್ನು ನಡೆಸುತ್ತಿದೆ ಹೊರತು, ‘ಡಬಲ್ ಎಂಜಿನ್’ ಸರ್ಕಾರವನ್ನಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮಂಗಳವಾರ ಹೇಳಿದ್ದಾರೆ. ಬಿಜೆಪಿಯದ್ದು
ಗೋವಾಕ್ಕೆ ಹೊರಟಿದ್ದ ವಂದೇ ಭಾರತ್ ರೈಲು ಕಲ್ಯಾಣಕ್ಕೆ ತಲುಪಿದ್ದ ಕುರಿತ ಸುದ್ದಿಯ ಚಿತ್ರವನ್ನು ಎಕ್ಸ್‌ನಲ್ಲಿ ಹಂಚಿರುವ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯದ್ದು
भाजपा ‘डबल इंजन’ की सरकार नहीं, ‘डबल ब्लंडर’ की सरकार है।
भाजपा ने देश की गाड़ी को भी गलत पटरी पर डाल दिया है। pic.twitter.com/wcCwEhjjLb
— Akhilesh Yadav (@yadavakhilesh) December 24, 2024
ರೈಲಿನ ಸುದ್ದಿಯ ಚಿತ್ರದ ಜೊತೆಗೆ, “ಬಿಜೆಪಿಯದ್ದು ‘ಡಬಲ್ ಇಂಜಿನ್’ ಸರ್ಕಾರವಲ್ಲ, ಬದಲಿಗೆ ‘ಡಬಲ್ ಬ್ಲಂಡರ್’ ಸರ್ಕಾರ” ಎಂದು ಅಖಿಲೇಶ್ ಯಾದವ್ ಬರೆದಿದ್ದಾರೆ. ಅದೇ ಪೋಸ್ಟ್‌ನಲ್ಲಿ ಅವರು, “ಬಿಜೆಪಿ ದೇಶದ ಎಂಜಿನ್ ಅನ್ನು ತಪ್ಪು ಹಾದಿಗೆ ತಳ್ಳಿದೆ” ಎಂದು ಟೀಕಿಸಿದ್ದಾರೆ.
ಸೋಮವಾರ ಬೆಳಗ್ಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಿವಾ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ಸಿಎಸ್‌ಎಂಟಿ-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತನ್ನ ನಿಯಮಿತ ಮಾರ್ಗವನ್ನು ಬದಲಿಸಿತ್ತು. ಈ ಘಟನೆ ವ್ಯಾಪಕ ಸುದ್ದಿಯಾಗಿತ್ತು.
ಗೋವಾಕ್ಕೆ ತೆರಳಬೇಕಿದ್ದ ಅದು ತನ್ನ ಪ್ರಯಾಣವನ್ನು 90 ನಿಮಿಷಗಳ ಕಾಲ ವಿಳಂಬಗೊಳಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂದೇಭಾರತ್ ರೈಲು ಕೊಂಕಣ ಪ್ರದೇಶಕ್ಕೆ ಹೋಗುವ ರೈಲುಗಳು ಬಳಸುವ ದಿವಾ-ಪನ್ವೇಲ್ ರೈಲುಮಾರ್ಗದ ಮೂಲಕ ಪನ್ವೇಲ್ ನಿಲ್ದಾಣದ ಕಡೆಗೆ ಸಾಗುವ ಬದಲು, ಕಲ್ಯಾಣ ಮಾರ್ಗದ ಕಡೆಗೆ ಹೋಗಿತ್ತು.
ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ನಿರ್ಣಯ ಅಂಗೀಕರಿಸಿದ ಡಿಎಂಕೆ


