ಸದಾ ಒಂದಿಲ್ಲೊಂದು ವಿವಾದಗಳಲ್ಲಿಯೇ ಮುಳುಗಿರುವ ಬಾಲಿವುಡ್ ನಟಿ ಪಾಯಲ್ ರೋಹ್ಟಗಿ ಇಂದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ತೊಂದರೆ ಮತ್ತು ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ನಟಿಯನ್ನು ಅವರನ್ನು ಅಹ್ಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಡಾಕ್ಟರ್ ಪರಾಗ್ ಸಿಂಗ್ ಎಂಬುವವರು ಪಾಯಲ್ ರೋಹ್ಟಗಿ ವಿರುದ್ಧ ಅಹ್ಮದಾಬಾದ್ ನಗರದ ಸೆಟಲೈಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಾಯಲ್ ರೋಹ್ಟಗಿಯವರು ಸಾಮಾಜಿಕ ಜಾಲತಾಣಗಳ ಮೂಲಕ ಅಪಾರ್ಟ್‌ಮೆಂಟ್ ನಿವಾಸಗಳ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಹೌಸಿಂಗ್ ಸೊಸೈಟಿಯ ಅಧ್ಯಕ್ಷರಿಗೆ ಸತತವಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿಗಳ ವಾಟ್ಸಾಪ್ ಗ್ರೂಪ್‌ನಲ್ಲಿ ತನ್ನ ವಿರುದ್ಧ ಮಾತನಾಡುವವರನ್ನು ಮತ್ತು ವಾದಿಸುವವರ ಕಾಲು ಮುರಿಯುವುದಾಗಿ ಬೆದರಿಕೆಯ ಸಂದೇಶಗಳನ್ನು ಹಾಕಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಡಾಕ್ಟರ್ ಪರಾಗ್ ಸಿಂಗ್ ಅವರ ದೂರಿನ ಆಧಾರದಲ್ಲಿ ಸೆಟಲೈಟ್ ಠಾಣೆಯ ಪೊಲೀಸರು ನಟಿ ಪಾಯಲ್ ರೋಹ್ಟಗಿಯವರನ್ನು ಬಂಧಿಸಿದ್ದಾರೆ.
ನಟಿ ಪಾಯಲ್ ರೋಹ್ಟಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಅನೇಕ ಬಾಲಿವುಡ್ ನಟ ನಟಿಯರ ವಿರುದ್ಧ ದ್ವೇಷಪೂರಿತ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಬಾಲಿವುಡ್‌ನ ಖ್ಯಾತನಾಮರೇ ಕಾರಣ ಎಂದು ಆರೋಪಿಸಿದ್ದರು. ದ್ವೇಷಪೂರಿತ ಹೇಳಿಕೆಗಳ ಕಾರಣಕ್ಕೆ ಪಾಯಲ್ಯರೋಹ್ಟಗಿವರ ಖಾತೆಯನ್ನು ಟ್ವಿಟ್ಟರ್ ನಿರ್ಬಂಧಿಸಿತ್ತು.
ಹಿರಿಯ ನಟಿ ಮತ್ತು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರ ಕುರಿತಾಗಿಯೂ ಕೂಡ ಪಾಯಲ್ ರೋಹ್ಟಗಿ ಅತ್ಯಂತ ಕೀಳುಮಟ್ಟದ ಹೇಳಿಕೆಯನ್ನು ನೀಡಿ ದೇಶಾದ್ಯಂತ ಸುದ್ದಿಯಾಗಿದ್ದರು.
ಇದನ್ನೂ ಓದಿ : ಗಂಗೆಯ ದಡದಿಂದ ಮತ್ತೆ ಎದ್ದು ಬಂದ ಮೃತದೇಹಗಳು: ಶವಗಳ ರಕ್ಷಣೆಗೆ ಅಧಿಕಾರಿಗಳ ಪರದಾಟ


