2021ರ ಐಸಿಸಿ ಪುರುಷರ T20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಸೋತ ನಂತರ ತಾಪ್ಸಿ ಪನ್ನು, ರಿಚಾ ಚಡ್ಡ, ಪ್ರೀತಿ ಜಿಂಟಾ ಸೇರಿದಂತೆ ಬಾಲಿವುಡ್‌ನಲ್ಲಿರುವ ಕ್ರೀಡಾ ಪ್ರೇಮಿಗಳು ಭಾರತ ತಂಡವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ಬಾಜಿಗರ್ ಸಿನಿಮಾದ ಶಾರುಖ್ ಖಾನ್ ಅವರ ಸಂಭಾಷಣೆಯನ್ನು ನೆನಪಿಸಿಕೊಂಡಿರುವ ನಟಿ ತಾಪ್ಸಿ ಪನ್ನು, ‘ಸೋತು ಗೆದ್ದವರನ್ನು ಬಾಜಿಗರ್ ಎಂದು ಕರೆಯಲಾಗುತ್ತದೆ (ಹರ್ ಕೆ ಜೀತ್ನೆ ವಾಲೆ ಕೊ ಬಾಜಿಗರ್ ಕೆಹ್ತೆ ಹೈ)’ ಎಂದು ಟ್ವಿಟ್ ಮಾಡಿದ್ದಾರೆ.
Haar ke jeetne wale ko Baazigar kehte hai 🙂
— taapsee pannu (@taapsee) October 24, 2021
ನಟಿ ರಿಚಾ ಚಡ್ಡಾ, ‘ಅಮೀರ್ ಖಾನ್ ಅವರ ವಿವಿಧ ಭಾವನೆಗಳನ್ನು ಒಳಗೊಂಡ ಮಿಮ್ ಒಂದನ್ನು ಹಂಚಿಕೊಂಡಿದ್ದು, ಕೆಲವು ಸಲ ಹೀಗಾಗುತ್ತದೆ (ಹೋ ಜಾತಾ ಹೈ ಕಬಿ ಕಬಿ)’ ಎಂದು ಟ್ವಿಟ್ ಮಾಡಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಕ್ರೀಡಾಂಗಣದಲ್ಲಿಯೇ ನೇರವಾಗಿ ವೀಕ್ಷಿಸಿರುವ ಪ್ರೀತಿ ಜಿಂಟಾ ಮತ್ತವರ ಪತಿ ಜೀನ್ ಗುಡೆನಫ್ ಅವರು ಪಂದ್ಯದ ನಂತರ ಟ್ವೀಟ್ ಮಾಡಿದ್ದು, ‘Tonight We were outplayed so well played Pakistan. ನಾನೊಬ್ಬ ಕ್ರಿಕೆಟ್ ಅಭಿಮಾನಿಯಾಗಿ, ನಾನು ಯಾವಾಗಲೂ ನಮ್ಮ ತಂಡವನ್ನು ಬೆಂಬಲಿಸುತ್ತೇನೆ. ನನ್ನ ಹೃದಯವು ಯಾವಾಗಲೂ ತಂಡದ ಪರವಾಗಿರುತ್ತದೆ. ನೀವು ನನ್ನಂತೆ ನಿಜವಾದ ಕ್ರಿಕೆಟ್ ಅಭಿಮಾನಿಯಾಗಿದ್ದರೆ ನೀವು ಅದೇ ರೀತಿ ಮಾಡುತ್ತೀರಿ. ಇದು ಕೇವಲ ಟೂರ್ನಿಯ ಆರಂಭವಷ್ಟೆ. #INDvsPAK ಪಂದ್ಯದ ಉಳಿದ ಆಟಗಳಿಗೆ ಶುಭವಾಗಲಿ ಎಂದು ಬರೆದಿದ್ದಾರೆ.
Disappointed dat #India lost its first game of the #T20WorldCup2021 Even more disappointed to see all the abuse by so called cricket fans to ??players on social media. It’s a game for God sake & all players are human. They DO NOT DESERVE all this negativity & slander. #indvspak
— Preity G Zinta (@realpreityzinta) October 24, 2021
“ಪಾಕಿಸ್ತಾನದ ವಿರುದ್ಧ ಸೋತಿದ್ದಕ್ಕಾಗಿ ಭಾರತದ ಕ್ರಿಕೆಟ್ ತಂಡದ ಮೇಲೆ ನಡೆಯುತ್ತಿರುವ ಮೌಕಿಕ ದಾಳಿಯನ್ನು ಖಂಡಿಸಿರುವ ಪ್ರೀತಿ, ‘2021ರ T20 ವರ್ಲ್ಡ್ ಕಪ್‌ನ ಮೊದಲ ಪಂದ್ಯದಲ್ಲಿ ಭಾರತವು ಸೋತಿದ್ದಕ್ಕೆ ನಿರಾಶೆಗೊಂಡಿದ್ದೇನೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಆಟಗಾರರ ಬಗ್ಗೆ ಮಾಡಿದ ನಿಂದನೆಯನ್ನು ನೋಡಿ ಇನ್ನಷ್ಟು ನಿರಾಶೆಗೊಂಡಿದ್ದೇನೆ. ಇದು ಆಟವಷ್ಟೆ. ಆಟಗಾರರೆಲ್ಲರೂ ಮನುಷ್ಯರು” ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ನಟ ಅರ್ಜುನ್ ರಾಂಪಾಲ್ ಭಾರತ ತಂಡವನ್ನು ಹಾರೈಸಿ ಟ್ವಿಟ್ ಮಾಡಿದ್ದು, ‘ಹಿನ್ನೆಡೆಯು ಮುಂದೆ ನಡೆಯಲಿರುವ ಅದ್ಭುತವಾದ ಪುನರಾಗಮನದ ಸಂಕೇತವಾಗಿರುತ್ತದೆ. ನಮ್ಮ ತಂಡದ ಮುನ್ನಡೆಯನ್ನು ನೋಡಲು ಕಾತರನಾಗಿದ್ದೇನೆ. ಉಳಿದ ಎಲ್ಲಾ ಪಂದ್ಯಗಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲಿ. ಒಳ್ಳಯದಾಗಲಿ. ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ಅದ್ಭುತ ಗೆಲುವಿಗೆ ಪಾಕಿಸ್ತಾನಕ್ಕೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದಾರೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಪಾಕಿಸ್ತಾನದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ 151 ರನ್ ಪೇರಿಸಲಷ್ಟೇ ಸಾಧ್ಯವಾಯಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಗೆಲುವಿನ ಸಿಹಿ ಉಂಡಿತು. ಆ ಮೂಲಕ ಪಾಕಿಸ್ತಾನ ತಂಡವು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಭಾರತದ ಎದುರು ಜಯ ದಾಖಲಿಸಿತು. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅದ್ಭುತ ಜೊತೆಯಾಟವಾಡಿದರು.
ಇದನ್ನೂ ಓದಿ: ಪಂದ್ಯ ಸೋತರೂ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಕೊಹ್ಲಿ, ಧೋನಿ!


