ಮೀನುಗಾರಿಕೆಗೆ ತೆರಳಿದ ಬಾಲಕನನ್ನು ಎಳೆದೊಯ್ದ ಮೊಸಳೆ | Naanu Gauri
ಪ್ರಾತಿನಿಧಿಕ ಚಿತ್ರ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕಾಳಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 15 ವರ್ಷದ ಬಾಲಕನನ್ನು ಮೊಸಳೆ ಎಳೆದೊಯ್ದಿರುವ ಘಟನೆ ಭಾನುವಾರ ನಡೆದಿದೆ.

ಮೃತಪಟ್ಟ ಬಾಲಕನನ್ನು ಪಟ್ಟಣದ ವಿನಾಯಕನಗರ ನಿವಾಸಿ ಮೊಯೀನ್ ಮೊಹಮ್ಮದ್ ಗುಲ್ಬರ್ಗ್‌ ಎಂದು ಗುರುತಿಸಲಾಗಿದೆ. ಅವರು ಪಟ್ಟಣದ ಹೊರವಲಯದಲ್ಲಿರುವ ಹಳಿಯಾಳ ರಸ್ತೆಯ ಕಾಳಿ ನದಿಯಲ್ಲಿ ಮೀನುಗಾರಿಕೆಗೆ ಹೋದಾಗ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಸಿಎಂ ‘ಬುರುಡೆ ಬೊಮ್ಮಾಯಿ’ ಬಿಜೆಪಿ ‘ಬಂಡಲ್’: ಸಿದ್ದರಾಮಯ್ಯ

ಬಾಲಕ ಮೀನು ಹಿಡಿಯಲು ದಂಡೆಯಲ್ಲಿ ಕಾಯುತ್ತಿದ್ದಾಗ ಮೊಸಳೆಯೊಂದು ಅವರ ಮೇಲೆ ಎರಗಿ ಅವರನ್ನು ನದಿಗೆ ಎಳೆದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್‌‌ ವರದಿ ಮಾಡಿದೆ. ಅಲ್ಲದೆ ಮೊಸಳೆ ಸಂಜೆಯ ಹೊತ್ತಿಗೆ ಮೃತದೇಹವನ್ನು ಎರಡು ಭಾರಿ ಮೇಲೆ ತಂದು ಮತ್ತೆ ನದಿಯೊಳಗೆ ಎಳೆದೊಯ್ದಿದೆ ಎಂದು ಮಾಧ್ಯಮಗಳು ವರಿದ ಮಾಡಿವೆ.

ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಹಾಗೂ ಜಂಗಲ್‌ ಲಾಡ್ಜ್ ರೆಸಾರ್ಟ್ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಗೆ ನೆರವಾಗಲು ಅಧಿಕಾರಿಗಳು ಸೂಪಾ ಅಣೆಕಟ್ಟಿನಿಂದ ಹೊರಹರಿವು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ತಡರಾತ್ರಿಯವರೆಗೂ ಶವವನ್ನು ಪತ್ತೆ ಹಚ್ಚಲು ಶೋಧ ತಂಡಕ್ಕೆ ಸಾಧ್ಯವಾಗಲಿಲ್ಲ ಎಂದು DH ವರಿದಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕರ್ನಾಟಕ: ಒಂದುವರೆ ವರ್ಷದಲ್ಲಿ 746 ರೈತರ ಆತ್ಮಹತ್ಯೆ; ದೇಶದಲ್ಲೇ 2ನೇ ಸ್ಥಾನ

LEAVE A REPLY

Please enter your comment!
Please enter your name here