ಪಶ್ಚಿಮ ಬಂಗಾಳದ ಎಲ್ಲೆಡೆ ಬಾಂಬ್ ಫ್ಯಾಕ್ಟರಿಗಳಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು ಸಂಪೂರ್ಣ ಸುಳ್ಳು ಎಂದು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಬಯಲು ಮಾಡಿರುವ ಘಟನೆ ನಡೆದಿದೆ.
ಕಳೆದ ಅಕ್ಟೋಬರ್‌ನಲ್ಲಿ ಗೃಹ ಸಚಿವ ಅಮಿತ್ ಶಾ, ಸಿಎನ್‌ಎನ್ ನ್ಯೂಸ್ 18 ಗೆ ನೀಡಿದ ಸಂದರ್ಶನವೊಂದರಲ್ಲಿ “ಪಶ್ಚಿಮ ಬಂಗಾಳದ ಪ್ರತಿ ಜಿಲ್ಲೆಯಲ್ಲೂ ಬಾಂಬ್ ತಯಾರಿಸುವ ಕಾರ್ಖಾನೆಗಳಿವೆ” ಎಂದು ಹೇಳಿದ್ದರು.
(ಈ ವಿಡಿಯೋದ 1.10 ನೇ ನಿಮಿಷದಲ್ಲಿ ಅಮಿತ್ ಶಾ ಬಾಂಬ್ ಫ್ಯಾಕ್ಟರಿಗಳ ಬಗ್ಗೆ ಮಾತನಾಡುವುದನ್ನು ನೋಡಬಹುದು.)
ಈ ಕುರಿತು ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಗೃಹ ಸಚಿವರ ಈ ಹೇಳಿಕೆಗಳ ಮೂಲ ಒದಗಿಸಬೇಕೆಂದು ಕೋರಿ 4 ಅಂಶಗಳ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಅದು ಸತ್ಯವೇ ಆಗಿದ್ದರೆ, ದೇಶಕ್ಕೆ ಆಘಾತಕಾರಿಯಾದ ವಿಷಯವಾಗಿತ್ತು ಎಂದು ಅವರು ಹೇಳಿದ್ದಾರೆ.
ಆರ್‌ಟಿಐನಲ್ಲಿ ಕೇಳಿದ್ದು ಇಷ್ಟು: (1) ಅಮಿತ್ ಶಾ ಉಲ್ಲೇಖಿಸಿರುವ ಬಂಗಾಳದ ಬಾಂಬ್ ತಯಾರಿಸುವ ಕಾರ್ಖಾನೆಗಳ ಪಟ್ಟಿ ನೀಡಿ. (2) ಗೃಹ ಸಚಿವಾಲಯ (ಎಂಎಚ್‌ಎ) ಈ ಬಗ್ಗೆ ಅಮಿತ್ ಶಾರವರಿಗೆ ವಿವರ ನೀಡಿದೆಯೇ? (3) ಅಮಿತ್ ಶಾ ಅವರ ಹೇಳಿಕೆಗಳು ಅಧಿಕೃತ ದಾಖಲೆಗಳನ್ನು ಆಧರಿಸಿವೆಯೇ?
I'd asked for
(1) a list of the bomb making factories in Bengal referred to by Amit Shah
(2) Whether MHA had briefed Shah about this
(3) Whether Shah's remarks were based on official records
The Home Ministry's answer is NO. They claim they don't have any such info.
(2/5) pic.twitter.com/6AqPNbhQ9W
— Saket Gokhale (@SaketGokhale) March 9, 2021
ಈ ಎಲ್ಲದಕ್ಕೂ ಗೃಹ ಸಚಿವಾಲಯದ ಉತ್ತರ ‘ಇಲ್ಲ’ ಎಂಬುದೇ ಆಗಿತ್ತು. ಅಂತಹ ಯಾವುದೇ ಮಾಹಿತಿಯನ್ನು ತಾವು ಹೊಂದಿಲ್ಲ ಎಂದು ಗೃಹ ಇಲಾಖೆ ಅಧಿಕೃತವಾಗಿ ಒಪ್ಪಿಕೊಂಡಿತು.
ಇದಲ್ಲದೆ, ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಗೃಹ ಸಚಿವಾಲಯ ಹೇಳಿಕೊಂಡಿದೆ.
ತದನಂತರ ಗೋಖಲೆ ತನ್ನ 4 ನೇ ಪ್ರಶ್ನೆಯಲ್ಲಿ “ಈ ಆಪಾದಿತ ಬಾಂಬ್ ಕಾರ್ಖಾನೆಗಳ ಬಗೆಗಿನ ಮಾಹಿತಿಯನ್ನು ಪಶ್ಚಿಮ ಬಂಗಾಳ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆಯೇ” ಎಂದು ಕೇಳಿದ್ದರು. ಅದಕ್ಕೆ ಉತ್ತರವಾಗಿ ಇಲ್ಲ ಎಂಬ ಉತ್ತರ ಬಂದಿತ್ತು.
ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಸಾಕೇತ್ ಗೋಖಲೆ, “ಗೃಹ ಮಂತ್ರಿಗಳು ಅಥವಾ ಗೃಹ ಇಲಾಖೆ ಈ ಬಗ್ಗೆ ಬಂಗಾಳ ಪೊಲೀಸರಿಗೆ ಮಾಹಿತಿ ನೀಡಿಲ್ಲ ಏಕೆ? ಏಕೆಂದರೆ ಅಂತಹ ಯಾವುದೇ ಕಾರ್ಖಾನೆಗಳು ಅಲ್ಲಿ ಅಸ್ತಿತ್ವದಲ್ಲಿಲ್ಲ. ಚುನಾವಣಾ ಲಾಭಕ್ಕಾಗಿ ಪಶ್ಚಿಮ ಬಂಗಾಳ ರಾಜ್ಯವನ್ನು ಅನುಮಾನಿಸುವ ಮತ್ತು ಅವಮಾನಿಸುವ ಸಲುವಾಗಿ ಕೇಂದ್ರ ಗೃಹ ಸಚಿವರು ಆಂತರಿಕ ಭದ್ರತಾ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಬಹಿರಂಗವಾಗಿ ಹರಡುತ್ತಿದ್ದಾರೆ ಎಂಬುದು ಆಘಾತಕಾರಿ ಎಂದು ಕಿಡಿಕಾರಿದ್ದಾರೆ.
ಸತ್ಯಗಳು ಕಣ್ಮುಂದೆ ಇರುವಾಗ, ಗೃಹ ಇಲಾಖೆ ನೀಡಿದ ಮಾಹಿತಿಯೂ ಬೇರೆ ಇರುವಾಗ ಫೇಕ್ ನ್ಯೂಸ್ ಹರಡುವ ಗೃಹ ಸಚಿವರನ್ನು ಅದ್ಹೇಗೆ ನಂಬಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.

“ನಾನು ಈ ಮಾಹಿತಿಯನ್ನು ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ. ನನ್ನ ಪ್ರಶ್ನೆಗಳಿಗೆ ಗೃಹ ಇಲಾಖೆ ಅಕ್ಟೋಬರ್‌ನಿಂದ ಪ್ರತಿಕ್ರಿಯೆ ನೀಡುವುದನ್ನು ಸ್ಥಗಿತಗೊಳಿಸಿತು. 1 ನೇ ಮನವಿಗೆ ಸಹ ಪ್ರತಿಕ್ರಿಯಿಸಲಾಗಿಲ್ಲ. ಗೃಹ ಇಲಾಕೆಯ ಅಧಿಕಾರಿಯೊಬ್ಬರು ನನ್ನನ್ನು ಕರೆದು “ಇದಕ್ಕೆ ಪ್ರತ್ಯುತ್ತರ ನೀಡದಂತೆ ನಮಗೆ ತಿಳಿಸಲಾಗಿದೆ” ಎಂದು ಹೇಳಿದ್ದರು. ಆದರೆ ಕಳೆದ ವಾರ ನಾನು ಲೀಗಲ್ ನೋಟಿಸ್ ನೀಡಿದ ನಂತರ ಅಂತಿಮವಾಗಿ ಪ್ರತಿಕ್ರಿಯೆ ಸಿಕ್ಕಿತು” ಎಂದು ಗೋಖಲೆ ತಿಳಿಸಿದ್ದಾರೆ.
ಇದನ್ನೂ ಓದಿ: ಎಡಪಕ್ಷಗಳ ಬೃಹತ್ ರ‍್ಯಾಲಿಯ ಫೋಟೊಗಳನ್ನು ಮೋದಿ ರ‍್ಯಾಲಿಯೆಂದು ತಪ್ಪಾಗಿ ಹಂಚಿದ ಬಿಜೆಪಿಗರು!


