ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ನಟರಾದ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ಖುಷ್ಬು ಅವರ ನಿವಾಸಕ್ಕೆ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಗೆ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ತಕ್ಷಣ ಕಾರ್ಯಪ್ರವರತ್ತರಾದ ಪೊಲೀಸರು ನಾಲ್ಕೂ ಸ್ಥಳಗಳಲ್ಲಿ ಭದ್ರತಾ ತಪಾಸಣೆ ನಡೆಸಿದ್ದಾರೆ.
ಕಳೆದ ವಾರ ಚೆನ್ನೈನ ಇಂಜಂಬಕ್ಕಂನಲ್ಲಿರುವ ಅಜಿತ್ ಕುಮಾರ್ ಅವರ ನಿವಾಸಕ್ಕೂ ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಬಂದಿತ್ತು ಎಂಬುದನ್ನು ಗಮನಿಸಬೇಕು.
ಬೆದರಿಕೆ ಮೇಲ್ ಬಂದ ಕೂಡಲೇ, ಅಧಿಕಾರಿಗಳು ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಶೋಧ ನಡೆಸಿದರು. ಆದರೆ, ತಪಾಸಣೆಯ ಸಮಯದಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ. ಬೆದರಿಕೆ ಕಳುಹಿಸಿದವರ ಬಗ್ಗೆ ಅಧಿಕಾರಿಗಳು ವಿವರಗಳನ್ನು ಬಹಿರಂಗಪಡಿಸಲಿಲ್ಲ.
ಪೂರ್ವ ಕರಾವಳಿ ರಸ್ತೆ (ಇಸಿಆರ್) ನಲ್ಲಿರುವ ನಟ ಅಜಿತ್ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ಬಾಂಬ್ ಸ್ಕ್ವಾಡ್ ಅನ್ನು ನಿಯೋಜಿಸಿದರು. ಶೋಧ ಕಾರ್ಯಾಚರಣೆ ಕೆಲವು ಗಂಟೆಗಳ ಕಾಲ ನಡೆಯಿತು, ನಂತರ ತನಿಖಾಧಿಕಾರಿಗಳು ಇದು ಹುಸಿ ಬೆದರಿಕೆ ಎಂದು ದೃಢಪಡಿಸಿದರು.
ಡಿಜಿಪಿ ಕಚೇರಿಗೂ ಬಾಂಬ್ ಬೆದರಿಕೆ
ಇದಲ್ಲದೆ, ಅರುಣ್ ವಿಜಯ್ ಅವರ ಎಕ್ಕಾಟ್ಟುತಂಗಲ್‌ನಲ್ಲಿರುವ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿಕೊಂಡು ಡಿಜಿಪಿ ಕಚೇರಿಗೆ ಅಪರಿಚಿತ ವ್ಯಕ್ತಿಯಿಂದ ಇಮೇಲ್ ಬಂದಿತ್ತು. ಮಾಹಿತಿ ಪಡೆದ ಕೂಡಲೇ, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ತಜ್ಞರು ಆಸ್ತಿಯನ್ನು ಶೋಧಿಸಿದಾಗ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ.
ಮತ್ತೊಂದು ಬೆಳವಣಿಗೆಯಲ್ಲಿ, ಸಂಗೀತ ಸಂಯೋಜಕ ಇಳಯರಾಜ ಅವರ ಟಿ ನಗರ ಸ್ಟುಡಿಯೋ ಕೂಡ ಹುಸಿ ಬಾಂಬ್ ಎಚ್ಚರಿಕೆಗೆ ಗುರಿಯಾಗಿದೆ. ಇದು ಅಂತಹದ್ದೇ ಘಟನೆಗಳಿಂದ ಪ್ರಭಾವಿತರಾದ ಉನ್ನತ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಕೊಪ್ಪಳ| ಮಹಿಳೆಗೆ ಮದ್ಯ ಕುಡಿಸಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಬಂಧನ


