ಮಹಾರಾಷ್ಟ್ರದ ಬಿಜೆಪಿ ನಾಯಕ ಮತ್ತು ಮಾಜಿ ಕೃಷಿ ಸಚಿವ ದಾದಾ ಜಾಧವ್ರಾವ್ ಅವರ ಪುತ್ರ ಪಿಲಾಜಿ ಸುರ್ಸಿಂಗ್ ಜಾಧವ್ರಾವ್ ಅವರ ಪಾಸ್‌ಪೋರ್ಟ್ ನವೀಕರಣವನ್ನು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಏಪ್ರಿಲ್‌ನಲ್ಲಿ ಪಾಸ್‌ಪೋರ್ಟ್ ಅವಧಿ ಮುಗಿದ ನಂತರ ಜಾಧವ್ರಾವ್ ಆಗಸ್ಟ್ 2024 ರಲ್ಲಿ ದೀರ್ಘಾವಧಿಯ ಪಾಸ್‌ಪೋರ್ಟ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು (ಆರ್‌ಪಿಒ) ಚಾಲ್ಇಯಲ್ಲಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಉಲ್ಲೇಖಿಸಿ ನ್ಯಾಯಾಲಯದ ಅನುಮತಿಯನ್ನು ಪಡೆಯುವಂತೆ ನಿರ್ದೇಶಿಸಿತು.
ನ್ಯಾಯಮೂರ್ತಿಗಳಾದ ಜಿಎಸ್ ಕುಲಕರ್ಣಿ ಮತ್ತು ಅದ್ವೈತ್ ಸೇಥ್ನಾ ಅವರ ಪೀಠವು ಜಾಧವ್ರಾವ್ ಅವರಿಗೆ ಅನುಮೋದನೆಗಾಗಿ ಕ್ರಿಮಿನಲ್ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶ ಮಾಡಿಕೊಟ್ಟಿತು. ಆದರೆ, ಕ್ರಿಮಿನಲ್ ವಿಚಾರಣೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಪಾಸ್‌ಪೋರ್ಟ್ ನೀಡುವಿಕೆಯನ್ನು ನಿರ್ಬಂಧಿಸುವ ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 6(2)(ಎಫ್) ಅಡಿಯಲ್ಲಿ ಅವರ ಪಾಸ್‌ಪೋರ್ಟ್ ನವೀಕರಣವನ್ನು ನಿರಾಕರಿಸುವ ಆರ್‌ಪಿಒ ನಿರ್ಧಾರವನ್ನು ಎತ್ತಿಹಿಡಿದಿದೆ.
ಜಾಧವ್ರಾವ್ 2005 ರಲ್ಲಿ ಪುಣೆಯ ಸವಾದ್ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿ ಅವರು ಮತ್ತು ಇತರ 74 ಜನರು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರಿಗೆ ಜಾಮೀನು ನೀಡಲಾಗಿದ್ದರೂ, ಪ್ರಕರಣ ಬಾಕಿ ಉಳಿದಿದೆ. ಇದರ ಹೊರತಾಗಿಯೂ, ಅವರಿಗೆ 2023 ರಲ್ಲಿ ಒಂದು ವರ್ಷದ ಪಾಸ್‌ಪೋರ್ಟ್ ನೀಡಲಾಯಿತು, ಆಗ ಅವರು ಯುನೈಟೆಡ್ ಕಿಂಗ್‌ಡಮ್‌ಗೆ ಪ್ರಯಾಣಿಸುತ್ತಿದ್ದರು.
ಜಾಧವ್ರಾವ್ ಅವರನ್ನು ಪ್ರತಿನಿಧಿಸುವ ವಕೀಲ ಅಭಿಜಿತ್ ಕುಲಕರ್ಣಿ, ತಮ್ಮ ಕಕ್ಷಿದಾರರಿಗೆ ಎಂದಿಗೂ ಶಿಕ್ಷೆಯಾಗಿಲ್ಲ ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ ಎಂದು ವಾದಿಸಿದರು. ಪಾಸ್‌ಪೋರ್ಟ್ ನಿರಾಕರಿಸುವುದು ಆರ್ಟಿಕಲ್ 21 ರ ಅಡಿಯಲ್ಲಿ ಪ್ರಯಾಣಿಸುವ ಅವರ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ಗಮನಸೆಳೆದರು.
ಸರ್ಕಾರಿ ವಕೀಲೆ ಲೀನಾ ಪಾಟೀಲ್, ಬಾಕಿ ಇರುವ ಕ್ರಿಮಿನಲ್ ವಿಚಾರಣೆಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಪಾಸ್‌ಪೋರ್ಟ್ ನೀಡಲು ನ್ಯಾಯಾಲಯದ ಅನುಮೋದನೆ ಅಗತ್ಯವಿರುವ 1993 ರ ಸರ್ಕಾರಿ ಅಧಿಸೂಚನೆಯನ್ನು ಉಲ್ಲೇಖಿಸಿ, ಆರ್‌ಪಿಒ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಜಾಧವ್ರಾವ್ ಅವರು ಕ್ರಿಮಿನಲ್ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು, ಅದು ಅವರ ಅರ್ಜಿಯನ್ನು 10 ದಿನಗಳಲ್ಲಿ ನಿರ್ಧರಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತು.
ಇದನ್ನೂ ಓದಿ; ವೈದ್ಯೆಯ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ : ನಾಲ್ವರು ಅಪರಾಧಿಗಳಿಗೆ 20 ವರ್ಷ ಜೈಲು


