ಭಾನುವಾರ ಮಂಡ್ಯದಲ್ಲಿ ನಡೆದ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚು ಜನರನ್ನು ಸೇರಿಸುವ ಉದ್ದೇಶದಿಂದ ಸರ್ಕಾರ ಜಿಲ್ಲಾ ಪಂಚಾಯತ್ ಕಾರ್ಯಾಲಯದಿಂದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದಕ್ಕೆ ಕಾಂಗ್ರೆಸ್, ಮೋದಿಮೋಸ ಟ್ಯಾಗ್ ಬಳಸಿ ಟ್ವಿಟರ್‌ನಲ್ಲಿ ಟೀಕೆ ಮಾಡಿದೆ.
”ಖಾಲಿ ಕುರ್ಚಿಗಳಿಂದ ನರೇಂದ್ರ ಮೋದಿ ಅವರಿಗೆ ಮುಜುಗರ ಆಗಬಾರದೆಂದು ಬಲವಂತವಾಗಿ ಜನರನ್ನು ಕರೆತರುತ್ತಿರುವಿರಾ ಬಸವರಾಜ್ ಬೊಮ್ಮಾಯಿ ಅವರೇ..? ಜನರ ಹಣದಲ್ಲಿ ಪಕ್ಷದ ಮೆರವಣಿಗೆ ಮಾಡಲು ನಾಚಿಕೆ ಎನಿಸುವುದಿಲ್ಲವೇ..? ರಾಜ್ಯ ಬಿಜೆಪಿಯು ಜನರನ್ನು ಸೇರಿಸಲು ಇಷ್ಟೊಂದು ಪರದಾಡುತ್ತಿರುವುದು ಕರ್ನಾಟಕದಲ್ಲಿ ಮೋದಿ ಮುಖ ಹಳಸಿದೆ ಎಂಬುದನ್ನು ಸೂಚಿಸುತ್ತದೆ!” ಎಂದು ಕಾಂಗ್ರೆಸ್ ಟೀಕಿಸಿದೆ. ಜೊತೆಗೆ ಟ್ವೀಟ್ ನಲ್ಲಿ ‘ಮೋದಿ ಮೋಸ’ ಎಂದು ಟ್ಯಾಗ್ ಕೂಡ ಬಳಸಲಾಗಿದೆ.
ಖಾಲಿ ಕುರ್ಚಿಗಳಿಂದ @narendramodi ಅವರಿಗೆ ಮುಜುಗರ ಆಗಬಾರದೆಂದು ಬಲವಂತವಾಗಿ ಜನರನ್ನು ಕರೆತರುತ್ತಿರುವಿರಾ @BSBommai ಅವರೇ?
ಜನರ ಹಣದಲ್ಲಿ ಪಕ್ಷದ ಮೆರವಣಿಗೆ ಮಾಡಲು ನಾಚಿಕೆ ಎನಿಸುವುದಿಲ್ಲವೇ?@BJP4Karnataka ಜನ ಸೇರಿಸಲು ಇಷ್ಟೊಂದು ಪರದಾಡುತ್ತಿರುವುದು ಕರ್ನಾಟಕದಲ್ಲಿ ಮೋದಿ ಮುಖ ಹಳಸಿದೆ ಎಂಬುದನ್ನು ಸೂಚಿಸುತ್ತದೆ!#ModiMosa pic.twitter.com/6ZgSZ5V9mo
— Karnataka Congress (@INCKarnataka) March 12, 2023
ಜಿಲ್ಲಾ ಪಂಚಾಯತ್ ಕಾರ್ಯಲಯವು, ಮಾರ್ಚ್ 12ರಂದು ನಡೆಯುವ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರಬೇಕು ಎಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.
ಆ ಸುತ್ತೋಲೆಯಲ್ಲಿ,- ಸನ್ಮಾನ್ಯ ಪ್ರಧಾನ ಮಂತ್ರಿಗಳು ಮಂಡ್ಯ ಜಿಲ್ಲೆಗೆ ದಿನಾಂಕ:12-03-2023 ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೇಂದ್ರ ಸರ್ಕಾರದ/ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳನ್ನು ಸಮಾರಂಭ ನಡೆಯುವ ಸ್ಥಳಕ್ಕೆ ಕರೆತರಲು ತಮ್ಮ ತಮ್ಮ ಗ್ರಾಮ ಪಂಚಾಯತಿ ಕೇಂದ್ರಸ್ಥಾನಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಿದ್ದು, ನಿಮ್ಮ ವ್ಯಾಪ್ತಿಯ ಫಲಾನುಭವಿಗಳನ್ನು ಬೆಳಗ್ಗೆ 8.00 ಗಂಟೆಗೆ ಸಮಾರಂಭಕ್ಕೆ ಕರೆದುಕೊಂಡು ಹೋಗಿ, ಸಮಾರಂಭ ಮುಕ್ತಾಯದ ನಂತರ ಫಲಾನುಭವಿಗಳನ್ನು ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಬಿಡಲು ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲು ಎಲ್ಲಾ ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುಟ್ಟಾಗಿ ಸೂಚಿಸಿದೆ ಹಾಗೂ ಈ ಸಂಬಂಧಪಟ್ಟ ಛಾಯಾಚಿತ್ರಗಳನ್ನು ವಾಲ್ಟಾಪ್ ಗ್ರೂಪ್‌ಗಳಲ್ಲಿ ಹಾಕಲು ಸೂಚಿಸುತ್ತಾ, ಮಾನ್ಯ ಜಿಲ್ಲಾಧಿಕಾರಿಗಳ ಪತ್ರವನ್ನು ಈ ಕೆಳಗೆ ಲಗತ್ತಿಸಿದೆ ಎಂದು ಹೇಳಲಾಗಿದೆ.

”ನೆರೆ ಬಂದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ, ಕರ್ನಾಟಕಕ್ಕೆ ಆಕ್ಸಿಜನ್ ಕೊಡಲಿಲ್ಲ, ವ್ಯಾಕ್ಸಿನ್ ನೀಡಲಿಲ್ಲ, GST ಪಾಲು ಸಿಗಲಿಲ್ಲ. ಬಿಎಸ್ ಯಡಿಯೂರಪ್ಪ ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ. ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ ನರೇಂದ್ರ ಮೋದಿ ಕರ್ನಾಟಕಕ್ಕೆ ಮಾಡಿದ್ದು ಮಹಾ ವಂಚನೆ” ಎಂದು ‘ಮೋದಿ ಮೋಸ’ ಟ್ಯಾಗ್ ಬಳಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ನೆರೆ ಬಂದಾಗ ಬರಲಿಲ್ಲ,
ಬರ ಬಂದಾಗ ಬರಲಿಲ್ಲ,
ಕರ್ನಾಟಕಕ್ಕೆ
ಆಕ್ಸಿಜನ್ ಕೊಡಲಿಲ್ಲ,
ವ್ಯಾಕ್ಸಿನ್ ನೀಡಲಿಲ್ಲ,
GST ಪಾಲು ಸಿಗಲಿಲ್ಲ.@BSYBJP ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ.ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ @narendramodi ಕರ್ನಾಟಕಕ್ಕೆ ಮಾಡಿದ್ದು ಮಹಾ ವಂಚನೆ.#ModiMosa pic.twitter.com/hpfmtvejNv
— Karnataka Congress (@INCKarnataka) March 12, 2023


