Homeಮುಖಪುಟಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ: ಕೇಂದ್ರದ ವಿರೋಧ

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ: ಕೇಂದ್ರದ ವಿರೋಧ

- Advertisement -
- Advertisement -

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

4 ಸಲಿಂಗ ದಂಪತಿಗಳು ತಮ್ಮ ವಿವಾಹದ ಮಾನ್ಯತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ನಿಗಧಿಪಡಿಸಿದೆ.

ಇತಿಹಾಸದುದ್ದಕ್ಕೂ ಭಿನ್ನಲಿಂಗೀಯ ವಿವಾಹಗಳು ನಡೆದುಬಂದಿವೆ. ಅದು ಪ್ರಭುತ್ವದ ಅಸ್ತಿತ್ವ ಮುಂದುವರಿಕೆಗೆ ಅಡಿಪಾಯವಾಗಿದೆ. ಹಾಗಾಗಿ ಭಿನ್ನಲಿಂಗೀಯ ವಿವಾಹಕ್ಕೆ ನಾವು ಆಸಕ್ತಿ ಹೊಂದಿದ್ದೇವೆಯೇ ಹೊರತು ಸಲಿಂಗ ವಿವಾಹಕ್ಕಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಕುಟುಂಬಗಳು ಸಣ್ಣ ಘಟಕಗಳು. ಅವುಗಳ ಆಧಾರದಲ್ಲಿ ಸಮಾಜ ರೂಪುಗೊಂಡಿದೆ. ಸಮಾಜದ ಹಲವು ಸಂಘಟನೆಗಳು ಸಲಿಂಗ ವಿವಾಹವನ್ನು ವಿರೋಧಿಸಿವೆ ಎಂದು ಕೇಂದ್ರ ಹೇಳಿದೆ.

ಸಲಿಂಗ ವಿವಾಹವು ಸಮಸ್ಯೆಗಳಿಂದ ಕೂಡಿದೆ. ಹಾಗಾಗಿ ಅದರ ಕುರಿತ ತೀರ್ಮಾನವನ್ನು ಶಾಸಕಾಂಗಕ್ಕೆ ನೀಡುವುದು ಒಳಿತು. ಇಲ್ಲದಿದ್ದಲ್ಲಿ ದೇಶದಲ್ಲಿನ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನ ಮತ್ತು ಅಂಗೀಕೃತ ಸಾಮಾಜಿಕ ಮೌಲ್ಯಗಳೊಂದಿಗೆ ಸಂಪೂರ್ಣ ಹಾನಿಯನ್ನುಂಟುಮಾಡುತ್ತದೆ ಎಂದು ಕೇಂದ್ರ ವಾದಿಸಿದೆ.

ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡದ ಕಾರಣ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರವು ಪ್ರತಿಪಾದಿಸಿದೆ.

ಸಲಿಂಗ ಸಂಬಂಧಗಳನ್ನು ಅಪರಾಧೀಕರಿಸುವ ಸೆಕ್ಷನ್ 377 ಅನ್ನು ಸೆಪ್ಟೆಂಬರ್ 6, 2018 ರಂದು ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ರದ್ದುಗೊಳಿಸಿದೆ. ಅದಕ್ಕಾಗಿ ದೇಶಾದ್ಯಂತ ನೂರಾರು ಸಾಮಾಜಿಕ ಸಂಘಟನೆಗಳು ಹೋರಾಟ ನಡೆಸಿದ್ದರು. ಆದರೆ ಈಗ ಕೇಂದ್ರ ಸರ್ಕಾರ ಸಲಿಂಗ ವಿವಾಹಗಳಿಗೆ ಕಾನೂನಿನ ಮಾನ್ಯತೆ ನೀಡುವುದು ಸರಿಯಲ್ಲ ಎಂದು ವಾದಿಸುತ್ತಿದೆ.

ಇದನ್ನೂ ಓದಿ: ಪರ್ಯಾಯ ಕಾನೂನು ವೇದಿಕೆಗೆ 22 ವರ್ಷ: ದಣಿವರಿಯದ ನಿರಂತರ ಕಾನೂನು ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಎಂಸಿ ವಿರುದ್ಧ ಅವಹೇಳನಕಾರಿ ಜಾಹೀರಾತು; ಬಿಜೆಪಿ ನಡೆಯನ್ನು ಟೀಕಿಸಿದ ಸುಪ್ರೀಂಕೋರ್ಟ್‌

0
ಪಶ್ಚಿಮ ಬಂಗಾಳದ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ "ಅವಹೇಳನಕಾರಿ" ಎಂದು ಪರಿಗಣಿಸುವ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಮವಾರ ಕಟುವಾಗಿ ಟೀಕಿಸಿದ ಸುಪ್ರೀಂ ಕೋರ್ಟ್, ಜಾಹೀರಾತುಗಳನ್ನು ಪ್ರಕಟಿಸದಂತೆ...