ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ.
ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್ ಅಕ್ಟೋಪ್ರಾಕ್, ಯಂಬಾಲಿ ಮತ್ತು ಎಂಗಾ ಪ್ರಾಂತ್ಯದ ಅಂಕಿ ಅಂಶಗಳ ಆಧಾರದ ಮೇಲೆ ಭೂಕುಸಿತದಿಂದ 150ಕ್ಕೂ ಹೆಚ್ಚು ಮನೆಗಳು ನೆಲಸಮಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಮೊದಲು 60 ಮನೆಗಳು ಮಾತ್ರ ನೆಲಸಮಗೊಂಡಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 670ಕ್ಕೂ ಹೆಚ್ಚು ಮಂದಿ ಮಣ್ಣಿನೊಳಗೆ ಹೂತು ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
About 670 people are estimated to be buried under a massive landslide in #PapuaNewGuinea, a UN official says.
The disaster hit the remote village of Kaokalam in Enga province, about 600 kilometres northwest of the capital Port Moresby, at approximately 3 a.m. local time on… pic.twitter.com/yhCybKDx9J
— All India Radio News (@airnewsalerts) May 26, 2024
ಸ್ಥಳೀಯ ಅಧಿಕಾರಿಗಳು ಸಾವಿನ ಸಂಖ್ಯೆ 100 ದಾಟಿರಬಹುದು ಎಂದು ಈ ಮೊದಲು ಅಂದಾಜಿಸಿದ್ದರು. ಭಾನುವಾರದವರೆಗೂ 6 ಮೃತದೇಹಗಳನ್ನು ಮಾತ್ರ ಹೊರತೆಗೆಯಲಾಗಿದೆ.
ಪಪುವಾ ನ್ಯೂಗಿನಿಯಾದ ತುರ್ತು ನಿರ್ವಹಣಾ ಘಟಕದ ಅಧಿಕಾರಿಗಳು ಬದುಕುಳಿದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಅಲ್ಲಿನ ಸರ್ಕಾರ ಹೆಚ್ಚಿನ ಅಂತಾರಾಷ್ಟ್ರೀಯ ನೆರವಿಗಾಗಿ ಅಧಿಕೃತ ಮನವಿ ಅಗತ್ಯವಿದೆಯೇ? ಎಂಬುವುದನ್ನು ಪರಿಶೀಲಿಸುತ್ತಿದೆ.
ಭೂಕುಸಿತ ಉಂಟಾಗಿರುವ ಪ್ರದೇಶಗಳ ಅವಶೇಷಗಳಡಿ ಇನ್ನೂ ಹಲವರು ಬದುಕುಳಿದಿರುವ ಸಂಭವವಿದ್ದು, ಕುಟುಂಬದ ಸದಸ್ಯರು ತಮ್ಮವರ ರಕ್ಷಣೆಗಾಗಿ ಅಳಲು ತೋಡಿಕೊಂಡಿದ್ದಾರೆ ಎಂದು ಸೆರಾನ್ ಅಕ್ಟೋಪ್ರಾಕ್ ತಿಳಿಸಿದ್ದಾರೆ.
#Watch | More than 300 people and over 1,100 houses were buried by a massive landslide that leveled a remote village in northern Papua New Guinea #PapuaNewGuinea pic.twitter.com/uOBlys7bHe
— DD News (@DDNewslive) May 25, 2024
ಪರಿಹಾರ ಕೇಂದ್ರಗಳು ಹಾಗೂ ಅವಶೇಷಗಳನ್ನು ಸಂಗ್ರಹಿಸಲು ನಾಲ್ಕು ಫುಟ್‌ಬಾಲ್ ಮೈದಾನಗಳನ್ನು ಬಳಸಿಕೊಳ್ಳಲಾಗಿದೆ. ಅವಶೇಷಗಳಡಿ ಕೆಲಸ ನಿರ್ವಹಿಸುವುದು ಅತ್ಯಂತ ಅಪಾಯಕಾರಿಯಾದ ಕೆಲಸವಾಗಿದ್ದು,ಭೂಕುಸಿತವು ಇನ್ನೂ ಮುಂದುವರೆಯುತ್ತಿದೆ ಎಂದು ಅಕ್ಟೋಪ್ರಾಕ್ ಹೇಳಿದ್ದಾರೆ.
ಭೂಕುಸಿತಗೊಂಡಿರುವ ಪ್ರದೇಶಗಳಿಗೆ ಆಹಾರ, ನೀರು ಹಾಗೂ ಇತರ ಅಗತ್ಯ ಸೌಕರ್ಯಗಳನ್ನು 60 ಕಿಮೀ ದೂರವಿರುವ ಪಪುವಾ ನ್ಯೂಗಿನಿಯಾ ರಾಜಧಾನಿ ವಬಾಗ್‌ನಿಂದ ಸೇನೆಯ ಭದ್ರತೆಯೊಂದಿಗೆ ರವಾನಿಸಲಾಗುತ್ತಿದೆ.
ಇದನ್ನೂ ಓದಿ : ‘ಮುಕ್ತ ಅಭಿವ್ಯಕ್ತಿ’ಯ ಮಹತ್ವ ಸಾರಿದ ಪಾಯಲ್ ಕಪಾಡಿಯ ಕೇನ್ಸ್ ಗೆಲುವು