Homeದಲಿತ್ ಫೈಲ್ಸ್ತಮಿಳು ಸಿನಿಮಾಗಳು ಐತಿಹಾಸಿಕ ಪ್ರತಿರೋಧ ತೋರಿವೆ: ಕೋಟಗಾನಹಳ್ಳಿ ರಾಮಯ್ಯ

ತಮಿಳು ಸಿನಿಮಾಗಳು ಐತಿಹಾಸಿಕ ಪ್ರತಿರೋಧ ತೋರಿವೆ: ಕೋಟಗಾನಹಳ್ಳಿ ರಾಮಯ್ಯ

- Advertisement -
- Advertisement -

“ತಮಿಳು ಚಿತ್ರಗಳು ಸಮಕಾಲೀನ ಜಗತ್ತಿನಲ್ಲಿ ಐತಿಹಾಸಿಕ ಪ್ರತಿರೋಧ ತೋರಿವೆ” ಎಂದು ಚಿಂತಕ, ದಸಂಸ ಸಂಸ್ಥಾಪಕ ಸದಸ್ಯರಾದ ಕೋಟಗಾನಹಳ್ಳಿ ರಾಮಯ್ಯ ಹೇಳಿದ್ದಾರೆ.

ತಮಿಳಿನ ಖ್ಯಾತ ನಿರ್ದೇಶಕ ಪ.ರಂಜಿತ್‌ ಸಕ್ರಿಯರಾಗಿರುವ ನೀಲಂ ಸಂಘಟನೆ ವತಿಯಿಂದ ದಲಿತ್‌ ಇತಿಹಾಸ ತಿಂಗಳ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವನಂ ಆರ್ಟ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.

ನಿರ್ದೇಶಕರಾದ ಪ.ರಂಜಿತ್‌, ಮಾರಿ ಸೆಲ್ವರಾಜ್‌, ವೆಟ್ರಿಮಾರನ್‌ ಸೇರಿದಂತೆ ಹಲವು ನಿರ್ದೇಶಕರು ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಯಶಸ್ಸು ಪಡೆದಿದ್ದಾರೆ. ನೀಲಂ ಸಂಸ್ಥೆ ಸಾಹಸ ಮೆರೆದಿದೆ. ಬದ್ಧತೆ ಇರುವ ಸಾಕಷ್ಟು ಯುವ ತಾರೆಗಳು ಮಿಂಚಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುಖ್ಯವಾಹಿನಿ ಚಿತ್ರಕಥೆ ಬರೆಹಗಾರ ಹಲವು ವಿಚಿತ್ರ ಎಡರು ತೊಡರುಗಳನ್ನು ಕಾಣುತ್ತಾನೆ. ಐದು ಸಾವಿರ ಸಂಚಿಕೆಯನ್ನು ಕಂಡ, ಉದಯ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ‘ಸಂಕ್ರಾಂತಿ’ ಮೆಗಾ ಧಾರಾವಾಹಿಗೆ ನಾನು ಬರೆಯುತ್ತಿದ್ದೆ. ಅದೊಂದು ಗ್ರಾಮೀಣ ಮಹಾಕಾವ್ಯ. ಹೆಚ್ಚಿನ ಟಿ.ಆರ್‌.ಪಿ.ಯೂ ಇತ್ತು. ದಲಿತ ಜೀವನ ಮತ್ತು ಬದುಕಿನ ದೃಷ್ಟಿಕೋನವನ್ನು ಅದು ಒಳಗೊಂಡಿತ್ತು. ಬೇರೊಂದು ಟಿವಿಯಿಂದ ನನಗೆ ಮತ್ತೊಂದು ಅವಕಾಶ ಬಂತು. ಅದಕ್ಕೂ ಬರೆದೆ. ಆದರೆ ಚಾನೆಲ್‌ನ ಕ್ರಿಯೆಟಿವ್ ಹೆಡ್‌ ನಿರ್ದೇಶಕನಲ್ಲಿ ಮಾತನಾಡುತ್ತಾ- ಯಾಕೆ ಅತಿಹೆಚ್ಚು ದಲಿತ ಪಾತ್ರಗಳು ಈ ಧಾರವಾಹಿಯಲ್ಲಿವೆ ಎಂದು ಕೇಳಿದ್ದರು. ಅವರ ಮುಖವನ್ನು ಯಾರು ನೋಡುತ್ತಾರೆ? ಆದರೆ ಈ ಐತಿಹಾಸಿಕ ಸಂಗತಿಯನ್ನು ಪ.ರಂಜಿತ್ ಸಹೋದರ ಬದಲಿಸಿದ್ದಾರೆ. ಎಲ್ಲರೂ ಈಗ ನೋಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಲಿತರು ಹೆಚ್ಚು ಯಾಕಿದ್ದಾರೆಂಬುದನ್ನು ಡೈರೆಕ್ಷರ್‌ ಸಮರ್ಥಿಸಿದ್ದರು. ಜಾಮೀನ್ದಾರರ ಕಥೆಯಲ್ಲಿ ದಲಿತ ಪಾತ್ರಗಳು ಅನಿವಾರ್ಯ ಎಂದು ತಿಳಿಸಿದ್ದರು. ಕ್ಯಾಮೆರಾವನ್ನು ಮನೆಯಿಂದ ಹೊರಗೆ ಬಳಸದಂತೆ ಕ್ರಿಯೆಟಿವ್‌ ಹೆಡ್‌ ಸೂಚಿಸಿದ್ದರು. ನಾನು ಅದನ್ನು ಪ್ರತಿಭಟಿಸಿ, ಆ ಪ್ರೊಜೆಕ್ಟ್‌ನಿಂದ ಹೊರಬಂದೆ. ಮಾಧ್ಯಮಗಳು, ತಂತ್ರಜ್ಞಾನ ತನ್ನಷ್ಟಕ್ಕೆ ತಾನೇ ಹೊರಗುಳಿದಿವೆ. ಸಮಕಾಲೀನ ಜಗತ್ತಿನಲ್ಲಿ ಪ್ರತಿರೋಧವನ್ನು ಒಡ್ಡಿದ ಕಾರಣಕ್ಕೆ ತಮಿಳು ಚಿತ್ರಗಳು ಮುಖ್ಯವಾಗಿವೆ ಎಂದು ತಿಳಿಸಿದ್ದಾರೆ.

ಬಾಲಿವುಡ್‌ನತ್ತ ನೋಡಿದರೆ ಅಲ್ಲಿ ಕಪ್ಪು ಪ್ರಾತಿನಿಧ್ಯ ತುಂಬಾ ಕಡಿಮೆ. ಐದು ದಶಕಗಳ ಪ್ರಯತ್ನದ ಬಳಿಕ ಡೊಮಿನೇಟ್‌ ಮಾಡುತ್ತಿದ್ದೇವೆ. ಸಿನಿಮಾ ಅಷ್ಟೇ ಅಲ್ಲ ಸಂಗೀತ, ಸಾಹಿತ್ಯ, ರಂಗಭೂಮಿ, ಕ್ರೀಡೆ ಯಾವುದರಿಂದಲೂ ದೂರ ಇಡಲು ಸಾಧ್ಯವಿಲ್ಲ. ಗುರುತಿಸಿಕೊಳ್ಳುವಿಕೆಯ ರಾಜಕಾರಣ ಬ್ರಹ್ಮಾಂಡ ಪ್ರವೇಶಕ್ಕೆ ತೆರೆದ ಬಾಗಿಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ನಟಿ ಮಂಜು ವಾರಿಯರ್‌ ಜೀವಕ್ಕೆ ಅಪಾಯವಿದೆ: ನಿರ್ದೇಶಕ ಸನಲ್‌ಕುಮಾರ್‌ ಆರೋಪ

ಫ್ಯಾಸಿಸಂ ಕೇವಲ ಗಾಳಿಯಲ್ಲಿ ಇಲ್ಲ. ಅದು ಬೇರುಗಳಲ್ಲಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ನಾರ್ಸಿಸ್ಟ್‌‌ ಐಡಿಯಾಲಜಿಯಂತೆಯೇ ಹಿಂದುತ್ವ ರಾಜಕೀಯ ಸಿದ್ಧಾಂತ ಎಂದು 1940ರಲ್ಲೇ ಬಾಬಾ ಸಾಹೇಬರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆಂದು ಎಚ್ಚರಿಸಿದರು.

ನೀಲಂ ಸಂಸ್ಥೆಯ ಕುರಿತು ಮೆಚ್ಚುಗೆ ಮಾತನಾಡಿದ ಅವರು, “ನೀಲಂ ಎಂಬುದು ಕೇವಲ ಬಣ್ಣವಲ್ಲ- ಅದು ಹೆಮ್ಮ ಮತ್ತು ಮರುಹುಟ್ಟು” ಎಂದು ಬಣ್ಣಿಸಿದರು. ‘ನನ್ನಜ್ಜ’ ಮತ್ತು ‘ಪ್ರಿಯ ಅಂಬೇಡ್ಕರ್’ ಕವನವನ್ನು ವಾಚಿಸುವ ಮೂಲಕ ದಲಿತ ಅಸ್ಮಿತೆಯನ್ನು ಧ್ವನಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...