ಶುದ್ಧೋದನ
ಧಾರವಾಡ: ಶೆಟ್ಟರ್ ಸೇಡು! ಜೋಶಿಗೆ ಕೇಡು?
ಕಿತ್ತೂರು ಕರ್ನಾಟಕದ ಲಿಂಗಾಯತ ಏಕಸ್ವಾಮ್ಯದ ರಾಜಕಾರಣವೀಗ ಬಂಡುಕೋರ ಸಂಘ ಪರಿವಾರಿಗ, ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ನಡೆ-ನುಡಿಯ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಬೆಳವಲ ನಾಡಿನ ಪ್ರಬಲ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿ...
ಉತ್ತರ ಕನ್ನಡ: “ಹಸ್ತಾಂತರ”ಕ್ಕೆ ಹವಣಿಸುತ್ತಿರುವ ಹೆಬ್ಬಾರ್ ಹಕೀಕತ್!
ರಾಜ್ಯ ರಾಜಕಾರಣದ ಚಕ್ರ ಮೇಲು-ಕೆಳಗಾಗಿದೆ; ರಿವರ್ಸ್ ಆಪರೇಷನ್ ಸದ್ದು-ಸುದ್ದಿ ಜೋರಾಗುತ್ತಿದೆ. ಆಪರೇಷನ್ ಕಮಲದ ಕಲಿಗಳು, ತಮ್ಮವರೇ ಹಸ್ತಾಂತರಕ್ಕೆ ಅಣಿಯಾಗಿರುವುದು ಕಂಡು ಕಂಗಾಲಾಗಿ ಕೂತಿದ್ದಾರೆ. ಮೂರು ತಿಂಗಳ ಹಿಂದೆ ಮುಗಿದ ಅಸೆಂಬ್ಲಿ ಚುನಾವಣೆಯಲ್ಲಾದ ಸೋಲಿನ...
ಕರಾವಳಿ: ಹಿಂದುತ್ವದ ಹುಲಿ ಸವಾರಿ ಹೊರಟವರಿಗೆ ಆ ಹುಲಿಯೆ ನುಂಗುತ್ತಿದೆ!!
ಹಿಂದುತ್ವದ ಪ್ರಯೋಗ ಶಾಲೆ ಎನ್ನಲಾಗುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟರ್ ಕೇಸರಿ ರಾಜಕಾರಣವೀಗ ಸಂಘ ಪರಿವಾರಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ...
ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಹವಣಿಕೆ; ಧರ್ಮಸ್ಥಳದ “ಮಾತಾಡುವ ಮಂಜುನಾಥ”ನ ಭಕ್ತರ ಬಾಯಲ್ಲಿ ಕಡಿಯುವ-ಕೊಲ್ಲುವ ಭಾಷೆ!
ಹನ್ನೊಂದು ವರ್ಷದ ಹಿಂದೆ ಕಾಲೇಜಿಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ಮುಗ್ಧ ಹುಡುಗಿ ಸೌಜನ್ಯ ಗೌಡಳನ್ನು ಧರ್ಮಸ್ಥಳದ ದೇವಸನ್ನಿಧಿಯಲ್ಲಿ ವಿಕೃತವಾಗಿ ಅತ್ಯಾಚಾರ ಮಾಡಿ-ಭೀಭತ್ಸವಾಗಿ ಕಚ್ಚಿ-ಚುಚ್ಚಿ ನರಳಾಡಿಸಿ ಕೊಂದುಹಾಕಿರುವ ಪ್ರಕರಣದ ಮರುತನಿಖೆಗೆ ರಾಜ್ಯದಾದ್ಯಂತ ಹೋರಾಟ...
ಧರ್ಮಸ್ಥಳದ ನಿರ್ಭಯಾ ಪ್ರಕರಣ: ಧರ್ಮ ಸಂಸ್ಥಾನದ ಪಾರುಪತ್ಯಗಾರ ವೀರೇಂದ್ರ ಹೆಗ್ಗಡೆ ಹತಾಶರಾದರೆ?
“ನಮ್ಮ ಅಭಿಮಾನಿಗಳು ಏನನ್ನು ಮಾಡಲಿಕ್ಕೂ ಸಿದ್ಧರಿದ್ಧಾರೆ…. ಆದರೆ ನಾವೇ ಬೇಡವೆಂದು ತಡೆದಿದ್ದೇವೆ….”- ಇದು ಧರ್ಮಸ್ಥಳ ದೇವಳದ “ಧರ್ಮ ದಂಡ”ಧಾರಿ- ಬಿಜೆಪಿ ರಾಜ್ಯಸಭಾ ಸಂಸದ ವೀರೇಂದ್ರ ಹೆಗ್ಗಡೆ, ಅಮಾಯಕ ಹುಡುಗಿ ಸೌಜನ್ಯ ಗೌಡ ಅತ್ಯಾಚಾರ-ಕಗ್ಗೊಲೆ...
ಉಡುಪಿ ವಿಡಿಯೋ ಪ್ರಕರಣ: ಹಾಸ್ಟೆಲ್ ಮಕ್ಕಳ ಹುಚ್ಚಾಟವೂ, ಹಿಡನ್ ಹಿಂದುತ್ವದ ಹಿಕಮತ್ತೂ!!
ಉಡುಪಿಯನ್ನು ಬಲಪಂಥೀಯರು ಒಂದೇ ವರ್ಷದ ಒಳಗೆ ಹಿಂದುತ್ವದ ಹರಾಕಿರಿ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದಾರೆ! ಸ್ಥಳೀಯ ಪ್ಯಾರಾ ಮೆಡಿಕಲ್ ಕಾಲೇಜಿನ ತುಂಟ ಹುಡುಗಿರು ಮಾಡಿದ ದುಬಾರಿ ಕುಚೇಷ್ಟೆಯನ್ನೇ ಬಂಡವಾಳ ಮಾಡಿಕೊಂಡು...
ಧರ್ಮಸ್ಥಳದ ’ನಿರ್ಭಯಾ’ ಪ್ರಕರಣ: ಪರಮ ಪಾಪಿಗಳ ಪಾರು ಮಾಡಲು ಫಿಕ್ಸ್ ಮಾಡಲಾಗಿದ್ದ ಸಂತೋಷ್ ರಾವ್ ಕುಟುಂಬದ ಕಣ್ಣೀರ ಕತೆ!!
ಧರ್ಮಸ್ಥಳದ ಸೌಜನ್ಯ ಗೌಡ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಒಂದಲ್ಲ, ಎರಡೆರಡು ಬರ್ಬರ-ಭಯಾನಕ ಮತ್ತು ಅಷ್ಟೇ ಕರುಣಾಜನಕ ಆಯಾಮವಿದೆ. ಪಿಯುಸಿ ಓದುತ್ತಿದ್ದ ಪುಟ್ಟ ಬಾಲಕಿ ಸೌಜನ್ಯಳನ್ನು ಹಾಡುಹಗಲೆ ಅಪಹರಿಸಿದ ನುರಿತ ರೇಪಿಸ್ಟ್‌ಗಳು ರಾತ್ರಿಯಿಡೀ ಅತ್ಯಾಚಾರ-ಹಿಂಸಾಚಾರಮಾಡಿ ಕೊನೆಗೆ...
ರುದ್ರಪ್ಪ ಲಮಾಣಿ: ಲಂಬಾಣಿ ತಾಂಡಾದಿಂದ ವಿಧಾನಸಭಾ ಉಪಸಭಾಧ್ಯಕ್ಷ ಗಾದಿಯವರೆಗೆ!
ರಾಜಕಾರಣವೇ ಹಾಗೆ! ಎಲ್ಲ ತರ್ಕ-ಲೆಕ್ಕಾಚಾರ ತಲೆಕೆಳಗಾಗಿ ಯಾರಿಗೋ ಅಧಿಕಾರ-ಸ್ಥಾನಮಾನದ ಭಾಗ್ಯ ಬಂದುಬಿಡುತ್ತದೆ; ಅದರ ಅಡ್ಡ ಪರಿಣಾಮದಿಂದ ಇನ್ಯಾರೋ ರಾಜಕಾರಣದ ಮುಖ್ಯಭೂಮಿಕೆಯಿಂದ ನೇಪಥ್ಯಕ್ಕೆ ತಳ್ಳಲ್ಪಡುತ್ತಾರೆ; ಯಾರೋ ತನಗೆ ಬೇಡವೆಂದು ತಿರಸ್ಕರಿಸಿದ್ದ ಹುದ್ದೆ ಮತ್ಯಾರದೋ ದೆಸೆದ...
ನಮ್ಮ ಸಚಿವರಿವರು; “ನಿರಾಶ್ರಿತ” ಸಂತೋಷ್ ಲಾಡ್‌ಗೆ “ಪುನರ್ವಸತಿ” ಕಲ್ಪಿಸಿದ ಕಲಘಟಗಿಯ ದೆಸೆ ಬದಲಾದೀತೇ?!
ಎತ್ತಣ ಬಳ್ಳಾರಿಯ ಸಂಡೂರು? ಎತ್ತಣ ಧಾರವಾಡದ ಕಲಘಟಗಿ? ಹದಿನೈದು ವರ್ಷಗಳ ಹಿಂದಾದ ಅಸೆಂಬ್ಲಿ ಕ್ಷೇತ್ರಗಳ ಪುನರ್‌ವಿಂಗಡನೆ ಸಂದರ್ಭದಲ್ಲಿ ನಿರಾಶ್ರಿತನಂತಾದ ಸಂಡೂರಿನ ಗಣಿಧಣಿ ಸಂತೋಷ್ ಶಿವಾಜಿ ಲಾಡ್ ಯಾನೆ ಎಮ್ಮೆಲ್ಲೆ ಸಂತೋಷ್ ಲಾಡ್ ಪುನರ್ವಸತಿ...
ನಮ್ಮ ಸಚಿವರಿವರು; ಮತ್ತೆಮತ್ತೆ ಮಂತ್ರಿಯಾಗುವ ಭಾಗ್ಯದ ಎಚ್.ಕೆ.ಪಾಟೀಲ್; ಗದಗಕ್ಕೂ ಭಾಗ್ಯ ಒಲಿಯುವುದೇ?
ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಹನುಮಂತಗೌಡ ಕೃಷ್ಣೇಗೌಡ ಪಾಟೀಲ್ ಯಾನೆ ಎಚ್.ಕೆ.ಪಾಟೀಲ್ ಯಾನೆ ಎಚ್ಕೆಪಿ ಐದನೆ ಬಾರಿ ರಾಜ್ಯದ ಮಂತ್ರಿಯಾಗಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಆಯಕಟ್ಟಿನ ಸಚಿವ ಸ್ಥಾನಕ್ಕೇರಿರುವ ಎಚ್ಕೆಪಿಯವರಿಗೆ ಸಿದ್ದು...