Homeಅಂಕಣಗಳುಭಾವಪೂರ್ಣ ನೃತ್ಯ ಪ್ರಕಾರದ ಬೇರುಗಳು ದೇವದಾಸಿಯರ ಕುಣಿತದ ಮೂಲದಲ್ಲಿವೆ

ಭಾವಪೂರ್ಣ ನೃತ್ಯ ಪ್ರಕಾರದ ಬೇರುಗಳು ದೇವದಾಸಿಯರ ಕುಣಿತದ ಮೂಲದಲ್ಲಿವೆ

ಹೆಣ್ಣಿನ ದೇಹ, ಮನಸ್ಸು ಮತ್ತು ಭಾವನೆಗಳ ಮೇಲೆ ಆಗುತ್ತಿದ್ದ ದೌರ್ಜನ್ಯ ಮತ್ತು ಪುರುಷಾಧಿಪತ್ಯದ ದಬ್ಬಾಳಿಕೆಯ ಬುನಾದಿ ಭರತನಾಟ್ಯದ ಬುಡದಲ್ಲಿದೆ.

- Advertisement -
- Advertisement -

ಇಂದು ಭರತನಾಟ್ಯಂ ಎಂಬ ದೇವರ ವರ್ಣನೆಯ ಕೀರ್ತನೆಗಳ ಹಾಡುಗಾರಿಕೆಯ ಜೊತೆಗೆ ಸುಂದರವಾದ ಹಾಗೂ ಭಾವಪೂರ್ಣವಾದ ನೃತ್ಯದ ಪ್ರಕಾರದ ಬೇರುಗಳು ದೇವದಾಸಿಯರ ಕುಣಿತದ ಮೂಲದಲ್ಲಿವೆ ಎಂಬುದನ್ನು ಕೇಳಲು ಯಾವುದೇ ಕಲಾರಾಧಕರ ಮನಸ್ಸಿಗೆ ನೋವಾದರೂ ವಾಸ್ತವವನ್ನು ಒಪ್ಪಲೇಬೇಕು, ನೋವನ್ನು ಭರಿಸಲೇಬೇಕು. ಹೆಣ್ಣಿನ ದೇಹ, ಮನಸ್ಸು ಮತ್ತು ಭಾವನೆಗಳ ಮೇಲೆ ಆಗುತ್ತಿದ್ದ ದೌರ್ಜನ್ಯ ಮತ್ತು ಪುರುಷಾಧಿಪತ್ಯದ ದಬ್ಬಾಳಿಕೆಯ ಬುನಾದಿ ಭರತನಾಟ್ಯದ ಬುಡದಲ್ಲಿದೆ. ಆದರೆ ಮಹಿಳೆಯರೇ ಈ ಕಲೆಯ ಪ್ರಕಾರವನ್ನು ಉಳಿಸಿಕೊಂಡು ಅದಕ್ಕೆ ಹತ್ತಿದ್ದ ಕಳಂಕವನ್ನು ತೊಡೆದು ಹಾಕಿ, ಸಾದಿರ್ ಎಂಬ ನಾಟ್ಯದ ಬಗೆಯನ್ನು ಇಂದು ಭರತನಾಟ್ಯಂ ಎಂಬ ಅಪ್ರತಿಮ ನೃತ್ಯಪ್ರಕಾರವನ್ನಾಗಿ ಪರಿವರ್ತಿಸಿದ್ದು ಅವರ ಹೋರಾಟಕ್ಕೆ ಸಂದ ವಿಜಯವಾಗಿದೆ.

ಪ್ರಾರಂಭದಲ್ಲಿ ದೇವದಾಸಿಯರು ದೇವಸ್ಥಾನದಲ್ಲಿ ಪ್ರಚಲಿತದಲ್ಲಿರುವ ಹಲವು ಆಚಾರಗಳನ್ನು ನೆರವೇರಿಸಲು ನೇಮಕವಾಗಿದ್ದವರು. ದೇವದಾಸಿ ಪದ್ಧತಿಯು ಬಹಳ ಪುರಾತನವಾಗಿದ್ದು. ಸುಮಾರು ಕ್ರಿ.ಶ 800ರಲ್ಲಿ ಪ್ರಾರಂಭವಾಗಿದ್ದಿರಬಹುದು. 5 ಮತ್ತು 6ನೆಯ ಶತಮಾನದಲ್ಲಿ ರಾಜಮನೆತನ ಅಥವಾ ಕುಲೀನ ಮನೆತನದ ಹೆಣ್ಣುಮಕ್ಕಳು ನಡೆಸುವಂತಹ ವೈಭವದ ಜೀವನವನ್ನು ಮತ್ತೊಂದು ಹೆಣ್ಣುಮಕ್ಕಳ ಗುಂಪೊಂದು ನಡೆಸುತ್ತಿತ್ತು. ಅವರಿಗೆ ವೇಶ್ಯೆಯರು ಅಥವಾ ಗಣಿಕೆಯರು ಎಂದು ಕರೆಯುತ್ತಿದ್ದರು. ಅವರು ಅವರ ವೃತ್ತಿಯನ್ನು ಮಾಡಿಕೊಂಡು, ತಮ್ಮದೇ ಆದಂತಹ ವರ್ತುಲವನ್ನು ರೂಪಿಸಿಕೊಂಡಿದ್ದರಿಂದ ಸಹಜವಾಗಿಯೇ ಸಾಮಾನ್ಯ ಜನರ ಗುಂಪಿಗೆ ಸೇರುತ್ತಿರಲಿಲ್ಲ.

ದೇವದಾಸಿಯರು

ತಮಿಳುನಾಡಿನ ರಾಜ ರಾಜ ಚೋಳ ಕಟ್ಟಿಸಿರುವಂತಹ ತಂಜಾವೂರಿನ ಬೃಹದೇಶ್ವರ ದೇವಸ್ಥಾನದಲ್ಲಿ ದೊರೆತ ಶಿಲಾ ಶಾಸನದ ಪ್ರಕಾರ ಈ ದೇವದಾಸಿ ಪದ್ಧತಿ ಪ್ರಾರಂಭವಾಗಿದ್ದು ಕರ್ನಾಟಕದ ಪ್ರಾಂತ್ಯಗಳಲ್ಲಿ.
ದೇವದಾಸಿ ಪದ್ಧತಿಯ ಮೂಲ ಉದ್ದೇಶ ಪವಿತ್ರವಾಗಿಯೇ ಇದೆ ಎಂದು ಭಾವಿಸಲಾಗಿತ್ತು. ಈ ಪದ್ಧತಿಯ ಹೆಂಗಸರು ತಮ್ಮನ್ನು ಸಂಪೂರ್ಣವಾಗಿ ದೇವಸ್ಥಾನಕ್ಕೆ ಅರ್ಪಿಸಿಕೊಂಡು, ದೇವರ ಸೇವೆಯಲ್ಲಿಯೇ ಇದ್ದು, ಅವಿವಾಹಿತರಾಗಿಯೇ ಉಳಿದಿರುತ್ತಿದ್ದರು. ದೇವದಾಸಿ ಪದ್ಧತಿಯ ಪ್ರಾರಂಭದ ದಿನಗಳಲ್ಲಿ ಕುಲೀನ ಮತ್ತು ಉತ್ತಮ ವಂಶಸ್ಥರು ತಮ್ಮ ಮನೆಯಲ್ಲಿ ಹುಟ್ಟುವ ಹೆಣ್ಣುಮಗುವೊಂದನ್ನು ದೇವಸ್ಥಾನದಲ್ಲಿ, ದೇವರ ಪಾದಕ್ಕೆ ದೇವದಾಸಿಯಾಗಿ ಸಮರ್ಪಿಸುವುದು ಗೌರವದ ಮತ್ತು ಘನತೆಯ ವಿಷಯವಾಗಿತ್ತು. ಪೈಪೋಟಿಯಲ್ಲಿ ಇದೇ ರೀತಿ ಘನತೆಯನ್ನು ಪ್ರದರ್ಶಿಸಲು ಎಷ್ಟೋ ಜನ ಸಣ್ಣ ಸಣ್ಣ ಕಾರಣಗಳಿಗೂ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು ಕೊಂಡುಕೊಂಡು ಅವರನ್ನು ದೇವಸ್ಥಾನಕ್ಕೆ ಅರ್ಪಿಸುತ್ತಿದ್ದರು. ಇದರಿಂದಾಗಿ ದೇವಾಲಯದಲ್ಲಿ ಸಣ್ಣ ವಯಸ್ಸಿನ ದೇವದಾಸಿಯರ ಸಂಖ್ಯೆ ಹೆಚ್ಚಿತು.

ಆದರೆ ನಂತರದ ದಿನಗಳಲ್ಲಿ ಈ ಪದ್ಧತಿಯ ತನ್ನ ಮೂಲ ಉದ್ದೇಶವನ್ನು ಕಳೆದುಕೊಳ್ಳಲಾರಂಭಿಸಿತು. ಧಾರ್ಮಿಕ ಪದ್ಧತಿಯ ನೆಪದಲ್ಲಿ ಲಂಪಟ ಪುರುಷರು ದೇವದಾಸಿಯರನ್ನು ತಮ್ಮ ಮೋಜಿಗೆ ಬಳಸಿಕೊಳ್ಳಲಾರಂಭಿಸಿದರು. ಇದರಿಂದಾಗಿ ಜನಸಾಮಾನ್ಯರ ದೃಷ್ಟಿಯಲ್ಲಿ ದೇವದಾಸಿ ಪದ್ಧತಿಯು ಗೌರವ ಕಳೆದುಕೊಂಡಿತು. ಇದರಿಂದಾಗಿ ದೇವದಾಸಿಯರ ಪರಿಸ್ಥಿತಿ ಎಷ್ಟು ಹದಗೆಟ್ಟಿತೆಂದರೆ, ಅವರ ಸೋದರರು ಅವರನ್ನು ಸೋದರಿಯರೆಂದು ಸ್ವೀಕರಿಸುತ್ತಿರಲಿಲ್ಲ. ಹೇಳುವವರು ಕೇಳುವವರು ಇಲ್ಲದೇ ದೇವಸ್ಥಾನದ ಪೂಜಾರಿಗಳು ಅವರನ್ನು ಮನಬಂದಂತೆ ಬಳಸಿಕೊಳ್ಳಲು ತೊಡಗಿದರು.

ಹಾಗಾಗಿ ದೇವರಿಗೆ ಸೇವೆ ಸಲ್ಲಿಸುವ ಬದಲು ದೇವದಾಸಿಯರು ವೇಶ್ಯೆಯಾಗಿಹೋದರು. ನಿಸ್ವಾರ್ಥ ಮತ್ತು ಉತ್ತಮ ಉದ್ದೇಶದಲ್ಲಿ ತೊಡಗಿದ್ದ ದೇವದಾಸಿಯರು ಆಳರಸರ, ಜಮೀನುದಾರರ, ಪೂಜಾರಿಗಳ ಮತ್ತು ಶ್ರೀಮಂತರ ಸ್ವಾರ್ಥಕ್ಕೆ ಬಳಕೆಯಾಗಿ, ಅವರೆಷ್ಟೇ ತಮ್ಮ ಮೂಲ ಉದ್ದೇಶಕ್ಕೆ ಬದ್ಧರಾಗಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಜೊತೆಗೆ ತಮ್ಮ ಸ್ವಾರ್ಥದ ಉದ್ದೇಶಕ್ಕೆ ಅನುಕೂಲವಾಗುವಂತೆ, ಈ ಮೇಲ್ವರ್ಗದ ಪುರುಷರು ಕೆಲವು ಕಾನೂನುಗಳನ್ನು ತಂದರು. ದೇವದಾಸಿಯರು ಮದುವೆಯಾಗುವ ಅವಕಾಶ ನೀಡಿ, ಅವರಿಗೆ ಹುಟ್ಟುವ ಮೊದಲ ಹೆಣ್ಣು ಮಗಳನ್ನು ದೇವದಾಸಿ ಪದ್ಧತಿಗೆ ಬಿಡುವ ಸಂಪ್ರದಾಯ ಪ್ರಾರಂಭಿಸಿದರು. ಒಂದುವೇಳೆ ತಾಯಿಯಾಗಿರುವ ದೇವದಾಸಿಯು ಮರಣಿಸಿದರೆ, ದೇವದಾಸಿಯಾಗುವ ಶಾಸನದ ಪ್ರಕಾರ, ಅವಳ ಮೊದಲನೆಯ ಮಗಳು ವಯಸ್ಸಿಗೆ ಬರುತ್ತಿದ್ದಂತೆ ಕಡ್ಡಾಯವಾಗಿ ತನ್ನ ವೈಯಕ್ತಿಕ ವಿವರಗಳನ್ನು ಅಲ್ಲಿನ ಆಳುವ ಅರಸನಿಗೆ ನೀಡಬೇಕಾಗಿತ್ತು. ನಂತರ ಅವಳನ್ನು ದೇವದಾಸಿಯನ್ನಾಗಿ ನೇಮಕ ಮಾಡಿ, ಅವಳಿಗೆ ಸಂಬಳ, ಮನೆ, ಭೂಮಿಯಂತಹ ಸವಲತ್ತುಗಳನ್ನು ನೀಡಲಾಗುತ್ತಿತ್ತು.

ರುಕ್ಮಿಣಿ ದೇವಿ

ಈ ದೇವದಾಸಿ ಪದ್ಧತಿಯು ಬರೀ ದಕ್ಷಿಣಭಾರತದಲ್ಲಿ ಮಾತ್ರವಲ್ಲದೇ, ಉತ್ತರ ಭಾರತದಲ್ಲಿಯೂ ಬಹುವೇಗವಾಗಿ ಹರಡಿಕೊಂಡಿತು. ಪಾಂಡ್ಯರ ಮತ್ತು ಚೋಳರ ಕಾಲಾವಧಿಯಲ್ಲಿ ಈ ಪದ್ಧತಿಯು ಬಹಳ ವ್ಯಾಪಕವಾಗಿ ಆವರಿಸಿತ್ತು. ಉತ್ತರ ಭಾರತದಲ್ಲಿ ದೇವದಾಸಿ ಪದ್ಧತಿಗೆ ಸೇರುವಂತಹ ಹೆಣ್ಣುಮಕ್ಕಳನ್ನು ಒಂದು ಖಡ್ಗಕ್ಕೆ ಅಥವಾ ದೇವರ ವಿಗ್ರಹಕ್ಕೆ ಮದುವೆ ಮಾಡಿಕೊಡುತ್ತಿದ್ದರು.

19ನೆಯ ಶತಮಾನದ ಹೊತ್ತಿಗೆ ದೇವದಾಸಿ ಪದ್ಧತಿಯು ತನ್ನ ಹೆಸರನ್ನು ಕೆಡಿಸಿಕೊಂಡಿತ್ತು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇರದೇ ಹೋದರೂ, ಕಾಲಕ್ರಮದಲ್ಲಿ, ಈ ಪದ್ಧತಿಯು ಹದಗೆಟ್ಟು ಸಂಪೂರ್ಣ ಕಳಂಕಿತವಾಗಿತ್ತು. 1924ರಲ್ಲಿ ಭಾರತೀಯ ನಾಗರಿಕ ಹಕ್ಕಿನ ವಿಧಿಯಡಿಯಲ್ಲಿ ಈ ಸಮಸ್ಯೆಗೆ ಏನಾದರೂ ಸುಧಾರಣೆ ತರಲು ಸಾಧ್ಯವೇ ಎಂದು ಅಧ್ಯಯನ ಮಾಡಲು ಆಯೋಗ ಸಿದ್ಧವಾಯಿತು. ಇದರ ನಂತರ ಮದ್ರಾಸ್ ಶಾಸಕರ ಸಭೆಯು “ಆ್ಯಂಟಿ ದೇವದಾಸಿ ಬಿಲ್”ಅನ್ನು ಒಮ್ಮತವಾಗಿ ಜಾರಿ ಮಾಡಿ, ದೇವದಾಸಿ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲು ಒತ್ತಾಯಿಸಲಾಯಿತು. 1945-46ರಲ್ಲಿ ಈ ಕಾಯಿದೆ ಜಾರಿಗೆಯಾಗಿ, ದೇವದಾಸಿ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಿದ್ದರಿಂದ, ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಲವು ದೇವದಾಸಿಯರಿಗೆ ಇದರಿಂದ ಅನುಕೂಲಗಳಾದವು. 1946ರಲ್ಲಿ “ಹಿಂದೂ ವಿವಾಹಿತ ಮಹಿಳೆಯರ ವಿಚ್ಛೇದನಾ ಹಕ್ಕು ಮತ್ತು ಸವಲತ್ತಿನ ಕಾಯಿದೆ” ದೇಶಾದ್ಯಂತ ವೃತ್ತಿನಿರತರಾಗಿದ್ದ ಅನೇಕ ದೇವದಾಸಿಯರಿಗೆ ಅನುಕೂಲವಾಗಿ ಪರಿಣಮಿಸಿತು. ಆದರೆ, ದೇವಾಲಯಗಳು ಇವರಿಗೆ ಕೊಡುತ್ತಿದ್ದಂತಹ ಅನುಕೂಲಗಳನ್ನು ಮತ್ತು ಸವಲತ್ತುಗಳನ್ನು ನೀಡುವುದರಲ್ಲಿ ಈ ಕಾಯಿದೆ ವಿಫಲವಾಯಿತು. ಹಾಗಾಗಿ, ಈ ಕಾಯಿದೆಯ ಅಡಿಯಲ್ಲಿ ಮುಕ್ತರಾದ ದೇವದಾಸಿಯರು ಯಾರಾದರೊಬ್ಬರ ಪುರುಷರ ಅಧೀನಕ್ಕೆ ಒಳಗಾಗಲೇ ಬೇಕಾಗಿಬಂದಿತ್ತು.

ತಮಿಳುನಾಡಿನ ಪುದುಕೋಟ್ಟೈ ಬ್ರಿಟಿಷರ ಆಡಳಿತಕ್ಕೆ ಹೆಸರಾದಂತೆ ದೇವದಾಸಿಯ ಪ್ರಾಬಲ್ಯಕ್ಕೂ ಹೆಸರಾಗಿತ್ತು. ಬ್ರಿಟಿಷರ ಅಧಿಪತ್ಯ ಅಲ್ಲಿ ನಾಶವಾದಂತೆ, ದೇವದಾಸಿ ಪದ್ಧತಿಯೂ ಅಲ್ಲಿ ನಾಶವಾಯಿತು. ಅದೇರೀತಿ ವೀರಳಿ ಮಲೈ ಕೂಡ ದೇವದಾಸಿ ಪದ್ಧತಿಗೆ ಹೆಸರಾದ ಊರಾಗಿತ್ತು. ಬೆಟ್ಟಗಳಲ್ಲಿರುವ ಪ್ರಖ್ಯಾತ ತೀರ್ಥಕ್ಷೇತ್ರಗಳು ಹತ್ತಿರದಲ್ಲಿ ಇದ್ದುದ್ದೇ ಇದಕ್ಕೆ ಕಾರಣವಾಗಿತ್ತು. ಕುರುವಂಜಿ ನಾಟಕದ ಪ್ರಖ್ಯಾತ ಕಥೆಗಳು ಇಲ್ಲಿಯೇ ಬೆಳೆದು ಪ್ರಖ್ಯಾತವಾದದ್ದು. ಅಲ್ಲಿನ ದೇವದಾಸಿಯರು ತಮ್ಮನ್ನು ಮುರುಗನ್ ದೇವರಿಗೆ ಸಮರ್ಪಿಸಿಕೊಂಡು, ಹಾಗೆ ಸೇವೆ ಸಲ್ಲಿಸುತ್ತಾ ಮೋಕ್ಷವನ್ನು ಪಡೆಯುವರು ಎಂಬ ನಂಬುಗೆ ಇತ್ತು. ಇಲ್ಲಿನ ದೇವದಾಸಿಯರಲ್ಲಿ ಒಬ್ಬಾಕೆ ಭರತನಾಟ್ಯವನ್ನು ಮಾಡುತ್ತಿದ್ದಳು. ಈಕೆ ಪುದುಕೋಟ್ಟೈಯಿಂದ ಬಂದಿದ್ದಳು. ಈಕೆಯೇ ಮೊಟ್ಟ ಮೊದಲ ಬಾರಿಗೆ ದೇವದಾಸಿ ಪದ್ಧತಿಯ ವಿರುದ್ಧ ದನಿ ಎತ್ತಿದವಳು.

1945ರಲ್ಲಿ ಈ ದೇವದಾಸಿಯು ದೇವಸ್ಥಾನಗಳಲ್ಲಿ ಈ ಪದ್ಧತಿಯ ಮೂಲಕವಾಗಿ ನಡೆಯುತ್ತಿದ್ದ ಅನಾಚಾರಗಳ ವಿರುದ್ಧವಾಗಿ ದನಿ ಎತ್ತಿದ್ದೇ ಅಲ್ಲದೇ, ಅಲ್ಲಿನ ಮಹಾರಾಜನಿಗೆ ಇದರ ಬಗ್ಗೆ ದೂರು ಸಲ್ಲಿಸಿದಳು. ಹಾಗೂ ತಾನು ಮರ್ಯಾದಸ್ಥ ಹೆಣ್ಣುಮಕ್ಕಳ ಹಾಗೆ ಬಾಳುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದಳು. ದೇವದಾಸಿಯಾಗಿದ್ದು ತಾನು ಪಡೆದಿದ್ದ ಭೂಮಿಯನ್ನು ತನಗೇ ಕೊಡಬೇಕೆಂದೂ, ತಾನು ಬಯಸಿದವರೊಂದಿಗೆ ಮದುವೆಯಾಗಿ ಬಾಳುವೆ ಮಾಡಲು ಅವಕಾಶ ಕೊಡಬೇಕೆಂದೂ ತನ್ನ ಬೇಡಿಕೆಯಲ್ಲಿ ತಿಳಿಸಿದ್ದಳು. ಅದರಂತೆಯೇ ಅವಳು ದೇವದಾಸಿ ಪದ್ಧತಿಯನ್ನು ತಿರಸ್ಕರಿಸಿ, ಬಯಸಿದವರೊಂದಿಗೆ ವಿವಾಹವಾಗಲು ಸಾಧ್ಯವಾಯಿತು. ಈ ಮೂಲಕ ಇತರ ದೇವದಾಸಿಯರೂ ಈ ಬಗೆಯ ಅವಕಾಶವನ್ನು ಬಳಸಿಕೊಂಡು ನೆಮ್ಮದಿಯ ಬಾಳು ನಡೆಸಲು ಸಾಧ್ಯವಾಯಿತು.

ತಮ್ಮ ವೈಯಕ್ತಿಕ ಬದುಕಲ್ಲಿ ಏನೆಲ್ಲಾ ಏಳುಬೀಳುಗಳನ್ನು ಕಂಡರೂ ತಾವು ಅಭ್ಯಾಸ ಮಾಡುತ್ತಿದ್ದ ನರ್ತನ ಕಲೆಯನ್ನು ಜೀವಂತವಾಗಿಟ್ಟ ಈ ಮಹಿಳೆಯರಿಗೆ ನಮ್ಮ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯ. ತಮ್ಮ ಭಕ್ತಿ ಪೂರ್ವಕವಾದ ಕಲಾರಾಧನೆಯಿಂದ ಇವರು ನಮ್ಮ ಭಾರತೀಯ ಕಲಾ ಪರಂಪರೆಯ ಸೌಂದರ್ಯವನ್ನು ಕಾಪಾಡಿದರು.

ಅನ್ನಾಪಾವ್‍ಲೋವ

ಈಗಿನ ಶಾಸ್ತ್ರೀಯ ನೃತ್ಯದ ಪುನರುತ್ಥಾನದಲ್ಲಿ ಪಾಶ್ಚಾತ್ಯ ನೃತ್ಯಪಟುಗಳ ಪಾತ್ರವಿದೆ ಎಂಬುದು ಒಂದು ಕುತೂಹಲಕರವಾದ ಅಂಶ. ರಷ್ಯಾ ದೇಶದ ಬ್ಯಾಲೆಪ್ರಪಂಚದಲ್ಲಿ ಚಿರಸ್ಥಾಯಿಯಾದ ಹಾಗೂ ಪರಂಪರೆಯ ಸಂಕೇತವಾಗಿರುವ ಬ್ಯಾಲೆ ಪಟು ಶ್ರೀಮತಿ ಅನ್ನಾಪಾವ್‍ಲೋವ ಭಾರತದ ಮೇರು ನೃತ್ಯ ಪಟು ಶ್ರೀ ಉದಯ ಶಂಕರ್‌ ರವರ ನೃತ್ಯ ಪ್ರಯೋಗಗಳನ್ನು ಲಂಡನ್‍ನಲ್ಲಿ ಪ್ರದರ್ಶಿಸುವ ಅವಕಾಶವನ್ನು ಕಲ್ಪಿಸಿದರು.

ನೃತ್ಯಕ್ಕೆ ಸಂಬಂಧಿಸಿದ ಹಾಗೆ ಅನ್ನಾಪಾವ್‍ಲೋವರವರು ಭಾರತದಲ್ಲಿ ಪ್ರವಾಸ ಕೈಗೊಂಡರು. ಆಗ ಅವರು ದೇವದಾಸಿ ನೃತ್ಯದ ಪ್ರಕಾರವನ್ನು ತಿಳಿಯುವ ಆಶಯದಿಂದ ವಿಷಯ ಸಂಗ್ರಹ ಮಾಡಿದರು. ಅನ್ನಾಪಾವ್‍ಲೋವರವರು ಉದಯ ಶಂಕರ್‌ರವರಿಗೆ ನಮ್ಮ ರಾಷ್ಟ್ರದ ನೃತ್ಯ ಪರಂಪರೆಯನ್ನು ಸಂಶೋಧಿಸಲು ಹಾಗೂ ಆ ವಿಷಯವನ್ನು ಅಭ್ಯಾಸ ಮಾಡಲು ಸೂಚಿಸಿದರು. ಅದು ಉದಯ ಶಂಕರ್‌ರವರ ಜೀವನದ ದಿಕ್ಕನ್ನೇ ಬದಲಾಯಿಸಿದ್ದಲ್ಲದೇ, ಅವರ ಸಂಶೋಧನೆಯು ಭಾರತೀಯ ನೃತ್ಯ ಕ್ಷೇತ್ರದ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಪ್ರಾರಂಭಿಸಿತು. ಹಾಗೂ ಭಾರತೀಯ ನೃತ್ಯ ಕ್ಷೇತ್ರದಲ್ಲಿ ಪುನರುತ್ಥಾನದ ಛಾಪು ಮೂಡಿಸಿತು.

ಭರತನಾಟ್ಯದ ಪುನರುತ್ಥಾನದಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿರುವವರೆಂದರೆ ಇ. ಕೃಷ್ಣ ಅಯ್ಯರ್. ಈ ಕಲೆಗೆ ಹತ್ತಿದ್ದ ಕಳಂಕವನ್ನು ದೂರಾಗಿಸಲು, ಜನರಲ್ಲಿ ಈ ಕಲೆಯನ್ನು ಪ್ರಶಂಸಿಸುವಂತಹ ಅಭಿರುಚಿ ಬೆಳೆಸಲು ಸಾರ್ವಜನಿಕ ಪ್ರದರ್ಶನಗಳನ್ನು ಅವರು ನೀಡುತ್ತಿದ್ದರು.

ಉತ್ತಮ ಹಾಗೂ ಗೌರವಾನ್ವಿತ ಕುಟುಂಬಗಳಿಂದ ನೃತ್ಯಕ್ಕೆ ಪ್ರವೇಶಿಸುವುದನ್ನು ಕಟುವಾಗಿ ಟೀಕಿಸುತ್ತಿದ್ದಂತಹ ಸಮಯವಿತ್ತು. ಆದರೆ, ನಿಧಾನವಾಗಿ ಜನರ ಧೋರಣೆ ಮತ್ತು ದೃಷ್ಟಿಕೋನ ಬದಲಾಗತೊಡಗಿತು.

ದೇವದಾಸಿಯರ ಹೊರತಾಗಿ ಸಾಮಾನ್ಯ ಕುಟುಂಬದಿಂದ ನೃತ್ಯ ಕಲಿಯಲು ಬಂದವರೆಂದರೆ ಕುಮಾರಿ ಭಾರತಿ. ಇವರು ಮೊದಲಿಯಾರ್ ಕುಟುಂಬವೊಂದಕ್ಕೆ ಸೇರಿದವರಾಗಿದ್ದರು. ನಂತರ ಬಂದವರೆಂದರೆ; ಮೈಲಾಪುರದ ಪ್ರಖ್ಯಾತ ಇಂಜಿನಿಯರ್ ಶ್ರೀ ಗಣಪತಿ ಅಯ್ಯರ್‌ರವರ ಮಗಳು ಕುಮಾರಿ ಕಾವ್ಯನಿಧಿ. ಇವರು ಆಗಿನ ಬ್ರಾಹ್ಮಣ ಸಮುದಾಯಕ್ಕೆ ತಮ್ಮ ನೃತ್ಯಾಭ್ಯಾಸದಿಂದ ಒಂದು ಆಘಾತವನ್ನೇ ನೀಡಿದ್ದರು.

ನಂತರ ಪ್ರವೇಶಿಸಿದ ಶ್ರೀಮತಿ ರುಕ್ಮಿಣೀದೇವಿಯವರಿಂದಾಗಿ ಭರತನಾಟ್ಯದಲ್ಲಿ ಒಂದು ಹೊಸ ಅಧ್ಯಾಯವನ್ನೇ ಕಾಣುವಂತಾಯಿತು. ರುಕ್ಮಿಣೀದೇವಿಯವರ ಪ್ರವೇಶದಿಂದಾಗಿ ಭರತನಾಟ್ಯದ ಘನತೆಯು ವೃದ್ಧಿಸಿತು. ಅವರು ವೇದಿಕೆಯ ಮೇಲೆ ಸ್ವಾಗತಕೋರುವ ನಾಟ್ಯಪ್ರಕಾರವನ್ನು ಪರಿಚಯಿಸಿದರು.

ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತವಾಗಿಸುವ ಹಂತದಲ್ಲಿ ಲಲಿತ ಕಲೆಗಳ ಪುನಶ್ಚೇತನಕ್ಕೆ ಅವಕಾಶವಾಯಿತು. ಶ್ರೀ ರಾಮಗೋಪಾಲ್ ಮತ್ತು ಅವರ ತಂಡದ ಸದಸ್ಯರಾದ ಮೃಣಾಲಿನಿ ಸಾರಾಭಾಯಿ ಮತ್ತು ಇತರ ಅನೇಕ ನೃತ್ಯಪಟುಗಳು ಒಬ್ಬೊಬ್ಬರಾಗಿಯೂ ಮತ್ತು ಸಾಮೂಹಿಕವಾಗಿಯೂ ಭಾರತಾದ್ಯಂತ ಅತ್ಯುತ್ತಮ ಪ್ರದರ್ಶನಗಳನ್ನು ನೀಡುತ್ತಾ ಜನತೆಯಲ್ಲಿ ಭರತನಾಟ್ಯದ ಬಗ್ಗೆ ಸದಭಿರುಚಿ ಬೆಳೆಯುವಂತೆ ಮಾಡಿದರು. ಈ ಪುನರುತ್ಥಾನದ ಮಾರ್ಗವನ್ನು ಹಲವಾರು ಕಲಾವಿದರು ಅನುಸರಿಸಿದ್ದರಿಂದ ಇಂದು ಭರತನಾಟ್ಯವೆಂಬುದು ಒಂದು ಪ್ರಸಿದ್ಧವಾದಂತಹ ನೃತ್ಯಕಲೆಯ ಪ್ರಕಾರವಾಗಿದೆ.

ಈ ಬೇರುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಡಾ. ಪದ್ಮಾ ಸುಬ್ರಹ್ಮಣ್ಯಂರವರು ಭರತ ನಾಟ್ಯದ ಬಗ್ಗೆ ರಚಿಸಿರುವ ‘ಭರತಕ್ಕಲೈ ಕೋಟ್ಪಾಡು’ ಪುಸ್ತಕದ ಕಲಾಸಿದ್ಧಾಂತವು ನಾಟ್ಯಾಸಕ್ತರ ಮತ್ತು ಗಂಭೀರ ಅಭ್ಯಾಸಿಗಳಿಗೆ ಒಂದು ಉತ್ತಮ ಕೈಪಿಡಿಯಾಗಿದೆ.


ಇದನ್ನೂ ಓದಿ: ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...