Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ'- ಇದು ನಿಜವಾದ ಪ್ರಕಟಣೆಯಲ್ಲ

ಫ್ಯಾಕ್ಟ್‌ಚೆಕ್: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’- ಇದು ನಿಜವಾದ ಪ್ರಕಟಣೆಯಲ್ಲ

- Advertisement -
- Advertisement -

‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’ ಎಂದು ಪತ್ರಿಕೆಯಲ್ಲಿ ಪ್ರಕಟಣೆ ಬಂದಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವಿಸ್ತ್ರತವಾಗಿ ಷೇರ್ ಆಗುತ್ತಿದೆ. ಈ ಪ್ರಕಟಣೆಯನ್ನು ಪ್ರಮುಖ ತೆಲುಗು ಸುದ್ದಿವಾಹಿನಿ TV9 ಸಹ ಪ್ರಸಾರಮಾಡಿದೆ. ಅದು ನಿಜವೇ ಎಂಬುದನ್ನು ಈ ಲೇಖನದ ಮೂಲಕ ನೋಡೋಣ.

ಇದೆ ಪತ್ರಿಕೆಯ ಕ್ಲಿಪ್ ಅನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಹ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಶಶಿ ತರೂರ್ ಟ್ವೀಟ್‌ಗೆ ಸಾಕಷ್ಟು ಜನ ಇದು ನಿಜವಾದ ಪತ್ರಿಕೆಯ ಕ್ಲಿಪ್ ಅಲ್ಲವೆಂದು, ಇದನ್ನು ಆನ್ಲೈನ್ ಆಪ್ಸ್ ಮೂಲಕ ಸೃಷ್ಟಿ ಮಾಡಿದ್ದಾರೆಂದು ಕಾಮೆಂಟ್ ಮಾಡಿದ್ದಾರೆ.

ಈ ಕಾಮೆಂಟ್ಸ್ ಆಧಾರದ ಮೇಲೆ FACTLY ಸಹ fodey.com ಎಂಬ ಒಂದು  ಗ್ರಾಫಿಕ್ಸ್ ವೆಬ್‌ಸೈಟ್‌ನಲ್ಲಿ ಹುಡುಕಾಡಿತು. ಅದು ಇಂತಹ ಒಂದು ಪತ್ರಿಕೆಯ ಕ್ಲಿಪ್ ಅನ್ನು ತಯಾರು ಮಾಡಿರುವುದು ನಿಜವಾದರೂ ಆ ಕ್ಲಿಪ್‌ನಲ್ಲಿ ‘ಕೋವಿಶೀಲ್ಡ್’ ಗೆ ಬದಲಾಗಿ ‘ಕೋವ್ಯಾಕ್ಸಿನ್’ ಎಂದು ಬರೆದಿರುವುದು ಕಂಡುಬಂದಿದೆ.

ಅಲ್ಲದೆ ಈ ವರ ಬೇಕಾಗಿದ್ದಾನೆ ಕ್ಲಿಪ್‌ ಪ್ರಕಟಣೆಯ ಪಕ್ಕದ ಪ್ಯಾರಾದಲ್ಲಿ ಪ್ರತಿ ಸಾಲಿನ ಮೊದಲ ಅಕ್ಷರಗಳು ಪೋಸ್ಟ್‌‌ನ ಕ್ಲಿಪ್‌ನಲ್ಲಿರುವ ಪ್ಯಾರಾದ ಮೊದಲ ಅಕ್ಷರಗಳು ಒಂದೆ ರೀತಿ ಇರುವುದನ್ನು ನೋಡಬಹದು. ಇದರ ಮೂಲಕ ವೈರಲ್ ಆದ ಕ್ಲಿಪ್ ಈ ವೆಬ್ಸೈಟ್ ಮೂಲಕ ಸೃಷ್ಟಿಯಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಈ ವೆಬ್‌ಸೈಟ್ ‌ನಲ್ಲಿ ಒಂದು ಸ್ಟಾಂಡರ್ಡ್ ಟೆಂಪ್ಲೇಟ್ ಇರುವುದರಿಂದ ಹೀಗೆ ಪಕ್ಕದ ಪ್ಯಾರಾದಲ್ಲಿಯೂ ಒಂದು ವಿಧವಾದ ಅಕ್ಷರಗಳು ಕಾಣಿಸುತ್ತವೆ. ಇವುಗಳೆಲ್ಲದರಿಂದ ವೈರಲ್ ಆದ ಕ್ಲಿಪ್ ನಿಜವಾದ ಪ್ರಕಟಣೆ ಅಲ್ಲವೆಂದು, ಕೇವಲ ಡಿಜಿಟಲ್ ಆಗಿ ಸೃಷ್ಟಿ ಮಾಡಿರುವುದೆಂದು ಅರ್ಥ ಮಾಡಿಕೊಳ್ಳಬಹುದು.

ಸಾವಿಯೋ ಫಿಗ್ಯೂರೆಡೋ ಎಂಬ ಪೇಸ್‌ಬುಕ್ ಬಳಕೆದಾರ, ಜನರನ್ನು ಕೊರೊನಾ ವ್ಯಾಕ್ಸಿನ್ ತೆಗೆದು ಕೊಳ್ಳಲು ಪ್ರೋತ್ಸಾಹಿಸುವುದಕ್ಕಾಗಿ ಆತನೆ ಹೀಗೆ ಆನ್ಲೈನ್‌ನಲ್ಲಿ ಒಂದು ಹಾಸ್ಯಭರಿತವಾದ ಪ್ರಕಟಣೆಯನ್ನು ತಯಾರು ಮಾಡಿದ್ದೇನೆಂದು, ಅದು ವೈರಲ್ ಆದ್ದರಿಂದ ತನಗೆ ಹೆಚ್ಚು ಕರೆಗಳು ಬರುತ್ತಿವೆಯೆಂದು ಫೇಸ್‌ಬುಕ್ ‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈರಲ್ ಆದ ಕ್ಲಿಪ್‌ನಲ್ಲಿ ಇರುವ ಮೊಬೈಲ್ ನಂಬರ್‌ ಅನ್ನು ಟ್ರೂಕಾಲರ್‌ನಲ್ಲಿ ಚೆಕ್ ಮಾಡಿದಾಗ ಈ ನಂಬರ್ ಸಾವಿಯೋ ಫಿಗ್ಯುರೆಡೋ ಎಂದು ಕಾಣಿಸುತ್ತಿದೆ. ಈ ಆಧಾರಗಳಿಂದ ಈ ವೈರಲ್ ಕ್ಲಿಪ್‌ನ್ನು ಸಾವಿಯೋ ಫಿಗ್ಯೂರೆಡೊ ತಯಾರು ಮಾಡಿರಬಹುದು ಎಂದು ಅರ್ಥವಾಗುತ್ತದೆ.

ಒಟ್ಟಿನಲ್ಲಿ ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’ ಎಂಬುದು ನಿಜವಾದ ಪ್ರಕಟನೆಯಲ್ಲ ಎಂದು ಸಾಬೀತಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ರಾಹುಲ್ ಗಾಂಧಿಯ ವಯನಾಡ್ ಕ್ಷೇತ್ರವಲ್ಲ – ಬಿಹಾರದ ಹಳೆಯ ರಸ್ತೆಯ ಚಿತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಿಕ್ಷಣ ಸಂಸ್ಥೆಗಳು ‘ಕೋಮುವಾದದ ಪ್ರಯೋಗಶಾಲೆʼಗಳಾಗಲು ಅವಕಾಶ ನೀಡುವುದಿಲ್ಲ: ಕೇರಳ ಸರ್ಕಾರ

ಶಾಲೆಗಳಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಹಿಂದುತ್ವ ಗುಂಪುಗಳು ಅಡ್ಡಿಪಡಿಸುತ್ತಿವೆ ಎಂಬ ಆರೋಪದ ಕುರಿತು ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಭಾನುವಾರ (ಡಿ.22) ಪ್ರತಿಕ್ರಿಯಿಸಿದ್ದು, ಶಿಕ್ಷಣ ಸಂಸ್ಥೆಗಳು ಕೋಮುವಾದದ ಪ್ರಯೋಗ ಶಾಲೆಗಳಾಗಲು ಅವಕಾಶ ನೀಡುವುದಿಲ್ಲ...

ರಷ್ಯಾ ಪರವಾಗಿ ಹೋರಾಡಿದ ಆರೋಪ; ಉಕ್ರೇನ್‌ನಲ್ಲಿ ಗುಜರಾತ್ ವಿದ್ಯಾರ್ಥಿ ಬಂಧನ

ರಷ್ಯಾ ಪರವಾಗಿ ಹೋರಾಡಿದ ಆರೋಪದ ಮೇಲೆ ಪ್ರಸ್ತುತ ಉಕ್ರೇನಿಯನ್ ಬಂಧನದಲ್ಲಿರುವ ಗುಜರಾತ್‌ನ ಮೊರ್ಬಿ ಜಿಲ್ಲೆಯ 23 ವರ್ಷದ ವ್ಯಕ್ತಿಯೊಬ್ಬರು ತಮ್ಮ ಬಿಡುಗಡೆ ಮಾಡಿ, ಸಹಾಯ ಮಾಡುವಂತೆ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ...

ತಮಿಳುನಾಡು| ದಲಿತ ಮಹಿಳೆ ಅಡುಗೆ ಮಾಡುವುದಕ್ಕೆ ಪೋಷಕರ ವಿರೋಧ; ಕೆಲಸದಿಂದ ತೆಗೆದ ಶಾಲೆ

ತಮಿಳುನಾಡಿನ ಕರೂರ್ ಜಿಲ್ಲೆಯ ತೋಗಮಲೈ ಬಳಿಯ ಪಂಚಾಯತ್ ಯೂನಿಯನ್ ಮಧ್ಯಮ ಶಾಲೆಯಲ್ಲಿ, ಮುಖ್ಯಮಂತ್ರಿಗಳ ಉಪಾಹಾರ ಯೋಜನೆ (ಸಿಎಮ್‌ಬಿಎಸ್) ಅಡಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕಲಾಗಿದ ಎಂದು 'ನ್ಯೂ ಇಂಡಿಯನ್...

ಬಾಂಗ್ಲಾ ಉದ್ವಿಗ್ನತೆ: ಮತ್ತೊಬ್ಬ ಯುವ ನಾಯಕ ಮುಹಮ್ಮದ್ ಮೊತಾಲೆಬ್ ಸಿಕ್ದಾರ್ ಮೇಲೆ ಗುಂಡಿನ ದಾಳಿ 

ದೇಶದಲ್ಲಿ ವ್ಯಾಪಕ ಅಶಾಂತಿಗೆ ಕಾರಣವಾದ ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಬಿನ್ ಹಾದಿ ಅವರ ಮರಣದ ಕೆಲವು ದಿನಗಳ ನಂತರ, ಸೋಮವಾರ ಮತ್ತೊಬ್ಬ ನಾಯಕನ ಮೇಲೆ ಗುಂಡು ಹಾರಿಸಲಾಯಿತು. ಗಾಯಗೊಂಡ...

ಕೇರಳ |ವಲಸೆ ಕಾರ್ಮಿಕನ ಗುಂಪು ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಭಾಗಿ : ಸಿಪಿಐ(ಎಂ) ನಾಯಕರಿಂದ ಆರೋಪ

ಕೇರಳದಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ಛತ್ತೀಸ್‌ಗಢದ ವಲಸೆ ಕಾರ್ಮಿಕನ ಗುಂಪು ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯರ್ತರು ಭಾಗಿಯಾಗಿದ್ದಾರೆ ಎಂದು ಆಡಳಿತರೂಢ ಸಿಪಿಐ(ಎಂ) ನಾಯಕರು ಆರೋಪಿಸಿದ್ದಾರೆ. ಸ್ಥಳೀಯ ಸ್ವ-ಆಡಳಿತ ಸಚಿವ ಎಂ.ಬಿ ರಾಜೇಶ್ ಆರಂಭದಲ್ಲಿ ಈ ಆರೋಪ ಮಾಡಿದ್ದು,...

‘ಹಿಂದೂಸ್ತಾನಿ ಅವಾಮ್ ಮೋರ್ಚಾಕ್ಕೆ ರಾಜ್ಯಸಭಾ ಸೀಟು ನೀಡಿ’: ದಲಿತ ನಾಯಕ ಜಿತನ್ ರಾಮ್ ಮಾಂಝಿ ಬೇಡಿಕೆ

ಬಿಹಾರ: ಕೇಂದ್ರ ಸಚಿವ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಉಸ್ತುವಾರಿ ಜಿತನ್ ರಾಮ್ ಮಾಂಝಿ ಅವರು 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಹಾರದಲ್ಲಿ NDA ಮೈತ್ರಿಕೂಟದ ಭಾಗವಾಗಿ ನೀಡಿದ ಭರವಸೆಗಳನ್ನು ನೆನಪಿಸಿಕೊಂಡು...

ಚುನಾವಣಾ ಟ್ರಸ್ಟ್‌ಗಳ ಮೂಲಕ ದೇಣಿಗೆ : ಶೇ.82ರಷ್ಟು ಪಾಲು ಪಡೆದ ಬಿಜೆಪಿ

ಸುಪ್ರೀಂ ಕೋರ್ಟ್ ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ರದ್ದುಗೊಳಿಸಿದ ನಂತರ 2024-25ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳು ಮೂರು ಪಟ್ಟು ಹೆಚ್ಚಾಗಿದ್ದು, 3,811 ಕೋಟಿ ರೂ.ಗಳಿಗೆ ತಲುಪಿದೆ ಎಂದು ದಿ...

ಮುಂಬೈ: ಚಲಿಸುತ್ತಿದ್ದ ರೈಲಿನಿಂದ 18 ವರ್ಷದ ವಿದ್ಯಾರ್ಥಿನಿಯನ್ನು ಹೊರಗೆ ತಳ್ಳಿದ ಮಾನಸಿಕ ಅಸ್ವಸ್ಥ

ನವಿ ಮುಂಬೈನ ಪನ್ವೇಲ್-ಸಿಎಸ್‌ಎಂಟಿ ಮಾರ್ಗದಲ್ಲಿ ಚಲಿಸುವ ಸ್ಥಳೀಯ ರೈಲಿನಿಂದ 18 ವರ್ಷದ ಬಾಲಕಿಯನ್ನು ತಳ್ಳಿದ ಆರೋಪದ ಮೇಲೆ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 'ಮಾನಸಿಕವಾಗಿ ಅಸ್ವಸ್ಥ'...

ಪ್ರಚೋದನಕಾರಿಯಾಗಿ ಮಾತನಾಡುವವರು ಮಾತ್ರ ದ್ವೇಷ ಭಾಷಣ ತಡೆ ಮಸೂದೆಯನ್ನು ವಿರೋಧಿಸುತ್ತಾರೆ : ಸಿಎಂ ಸಿದ್ದರಾಮಯ್ಯ

ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ದ್ವೇಷ ಭಾಷಣ ತಡೆ ಮಸೂದೆಯನ್ನು ವಿರೋಧಿಸುತ್ತಾರೆ. ಸುಮ್ಮನೆ ಯಾರ ವಿರುದ್ದವೂ ಪ್ರಕರಣ ದಾಖಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಸೋಮವಾರ (ಡಿ.22) ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,...

ಅಜ್ಮೀರ್ ದರ್ಗಾ ಉರೂಸ್‌ಗೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ತಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಅಜ್ಮೀರ್ ದರ್ಗಾ ಉರೂಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾದರ್ ಅರ್ಪಿಸುವುದನ್ನು ತಡೆಯುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಸೂಫಿ ಸಂತ ಖ್ವಾಜಾ ಮುಯೀನುದ್ದೀನ್ ಹಸನ್ ಚಿಸ್ತಿ ಅವರ 814ನೇ ಉರೂಸ್ ಕಾರ್ಯಕ್ರಮ ಡಿಸೆಂಬರ್...