ಸರ್ಕಾರ ಕೋವಿಡ್ ನಿಭಾಯಿಸಲು ಯಶಸ್ವಿಯಾಗಿದೆಯೋ, ಇಲ್ಲವೋ ಅದು ಬೇರೆ ಮಾತು ಆದರೆ ಅದು ತನ್ನ ಅಜೆಂಡಾಗಳನ್ನು ಮಾತ್ರ ಸ್ಪಷ್ಟವಾಗಿ ಜಾರಿ ಮಾಡುತ್ತಿದೆ. ಕರ್ನಾಟಕ ಸರ್ಕಾರ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಅನುಕರಣೆ ಮಾಡುತ್ತಿದ್ದು, ಕರ್ನಾಟಕದಲ್ಲಿಯೂ ಮರುನಾಮಕರಣ ಮಾಡುವುದರಲ್ಲಿ ನಿರತವಾಗಿದೆ.
ಯಲಹಂಕದ ಮೇಲ್ಸೆತುವೆಗೆ ಕನ್ನಡಿಗರ ವಿರೋಧದ ನಡುವೆಯೂ ಸರ್ಕಾರ ಸಾವರ್ಕರ್ ಹೆಸರು ಇಡಲಾಯಿತು. ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಅಡ್ಡಗಾಲು ಹಾಕಿ, ಕನ್ನಡಿಗರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಆನಂತರ ಜನರಿಗೆ ಪ್ರವಾಹ ಪರಿಹಾರ ನೀಡಲಾಗದಿದ್ದರೂ ಮರಾಠ ಅಭಿವೃದ್ದಿ ಪ್ರಾಧಿಕಾರ ಮಾಡಲು ಮುಂದಾಯಿತು. ಇಂತಹ ಕನ್ನಡಿಗರ ವಿರೋಧದ ಮತ್ತೊಂದು ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಅದೇ ಬೆಂಗಳೂರಿನ ಶಿವಾಜಿನಗರದಲ್ಲಿರುವ ‘ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ’ಯ ಹೆಸರನ್ನು ‘ಶ್ರೀ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ’ ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಆರಂಭಿಸಲಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಸರನ್ನು "ಶ್ರೀ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ" ಎಂದು ಮರುನಾಮಕರಣ ಮಾಡಲಾಗಿದೆ.@CMofKarnataka @BSYBJP pic.twitter.com/UNOr9DblWK
— Dr Sudhakar K (@mla_sudhakar) November 21, 2020
ಈ ಹೆಸರುಗಳ ಬದಲಾವಣೆಯಿಂದ ಏನಾದರೂ ಪರಿವರ್ತನೆ ಸಾಧ್ಯವೇ? ಜನರಿಗೆ ಏನು ಉಪಯೋಗ ಎಂಬುದನ್ನು ಯೋಚಿಸದ ಸರ್ಕಾರ ತನ್ನ ಅಜೆಂಡಾಗಳನ್ನು ಹೇರುತ್ತಿದೆ ಎಂದು ಹಲವರು ದೂರಿದ್ದಾರೆ. ಇನ್ನು ನೀವು ಹೆಸರು ಬದಲಾವಣೆ ಮಾಡಲೇಬೇಕೆಂದರೆ ಕನ್ನಡ ನಾಡಿನಲ್ಲಿ ಸಾಧನೆಗೈದ ಕನ್ನಡಿಗರು ಹೆಸರು ಇಡಬಹುದಲ್ಲವೇ? ಎಲ್ಲಕ್ಕೂ ಉತ್ತರ ಭಾರತೀಯರ ಹೆಸರು ಏಕೆ ಎಂದು ಕನ್ನಡಿಗರು ಕಿಡಿಕಾರಿದ್ದಾರೆ.
“ಯಾಕೆ ನಿಮಗೆ ಯಾವ ಕನ್ನಡಿಗ ಸಾಧಕರ ಹೆಸರು ಸಿಗಲಿಲ್ಲವೇ? ಕೊರೊನಾಗೆ ಜೀವತೆತ್ತ ಕೊರನಾ ಸೈನಿಕರ ಹೆಸರು ಇಡಬಹುದಿತ್ತು ಕಡೆಪಕ್ಷ ನಿಮ್ಮ ಪಕ್ಷದ ಕರ್ನಾಟಕದ ನಾಯಕರ ಹೆಸರು ಆದ್ರೂ ಇಡಬಹುದಿತ್ತು ಅಲ್ವಾ! ಎಂತ ಶೋಚನೀಯ ಗುಲಾಮಗಿರಿ! ಕಾಂಗ್ರೆಸ್‌ನವರಿಗೆ ನೆಹರು, ಇಂದಿರಾ, ರಾಜೀವ್. ನಿಮಗೆ ಮಾಳವೀಯ, ಮುಖರ್ಜಿ, ವಾಜಪೇಯಿ ಇಷ್ಟೇನಾ ನಿಮ್ಮ ರಾಜಕೀಯ ಜೀವನ!” ಎಂದು ಕೃಷಿಕ ಎವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯ್ಯೋ ಹಾಗೆಲ್ಲಾ ಕರ್ನಾಟಕದವರ ಹೆಸರನ್ನು ಇಟ್ಟರೆ ಹೈಕಮಾಂಡ್ ಅನ್ನು ಮೆಚ್ಚಿಸುವುದಾದರೂ ಹೇಗೆ? https://t.co/s137DvLZdC
— ಅರುಣ್ ಜಾವಗಲ್ | Arun Javgal (@ajavgal) November 21, 2020
ಯಾರನ್ನ ಕೇಳಿ ಹೆಸರಿಟ್ರಿ. ಸರ್ಕಾರ ನಿಮ್ಮದೆ ಆಗಿರಬಹುದು, ಆದ್ರೆ ರಾಜ್ಯದ ಆಸ್ತಿ ಅಡವು ನಿಮ್ಮಪ್ಪಗಳು ಎಂಬಂತೆ ಬೇಕಾಬಿಟ್ಟಿ ನಿಮಗಿಶ್ಟ ಬಂದವರ ಹೆಸರಿಡುತ್ತಿದ್ದೀರಿ. ನಿಮ್ಮ ಒಡೆತನದ ಆಸ್ತಿಗಳಿಗೆ ಇಟ್ಕಳ್ರಯ್ಯ ವಾಜಪೇಯೊ, ಮುಕರ್ಜಿಯೊ ಮತ್ತಿನ್ನಾರದೊ. ಯಾರು ಕೇಳಿಯಾರು ಎಂದು ಸೋಮಶೇಖರ್ ಬಜ್ಜಣ್ಣ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಕಟ್ಟಿದ ಸಂಸ್ಥೆಗಳನ್ನ ಮರುನಾಮಕರಣ ಮಾಡುವುದೇ ತಮ್ಮ ಅಭಿವೃದ್ಧಿ ಅನ್ಸುತ್ತೆ. ಇದು ಕೈಲಾಗದೆ ಇರೋರು ಮಾಡೋ ಕೆಲಸ. ನೀವು ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟಿ ಆಮೇಲೆ ಅವಕ್ಕೆ ಹೆಸರಿಡಿ ಎಂದು ಅಜಯ್ ರಾಜ್ ಸವಾಲು ಹಾಕಿದ್ದಾರೆ.
ಇದನ್ನೂ ಓದಿ; ಶಿವಾಜಿ ಮಾತ್ರ ರಾಷ್ಟ್ರನಾಯಕರೆ, ಸಂಗೊಳ್ಳಿ ರಾಯಣ್ಣ ರಾಷ್ಟ್ರನಾಯಕರಲ್ಲವೇ?: ಕನ್ನಡಿಗರ ಆಕ್ರೋಶ


