ವಿಶ್ವ ಪ್ರಸಿದ್ಧ ತಾಜ್ ಮಹಲ್‌ಗೆ ಬಾಂಬ್ ದಾಳಿ ಬೆದರಿಕೆ ಬಂದಿದೆ ಎಂದು ಹೇಳಲಾಗುತ್ತಿದ್ದು, ಈ ಕಾರಣಕ್ಕಾಗಿ ಪ್ರವಾಸಿಗರನ್ನು ಸ್ಥಳಾಂತರಿಸಿ ತಾಜ್ ಮಹಲ್ ಅನ್ನು ಮುಚ್ಚಲಾಗಿದೆ.
ಬಾಂಬ್ ಬೆದರಿಕೆಯ ಬಗ್ಗೆ ಉತ್ತರ ಪ್ರದೇಶ ಪೊಲೀಸರಿಗೆ ಕರೆ ಬಂದ ನಂತರ ಆಗ್ರಾದಲ್ಲಿರುವ ತಾಜ್ ಮಹಲ್ ಅನ್ನು ಮುಚ್ಚಲಾಗಿದ್ದು, ಪ್ರವಾಸಿಗರನ್ನು ಬೆಳಿಗ್ಗೆ ಸ್ಥಳಾಂತರಿಸಲಾಗಿದೆ. ಪೊಲೀಸ್ ಸಹಾಯವಾಣಿಗೆ ಕರೆ ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ 2020ರ ಮಾರ್ಚ್ 17 ರಿಂದ ಆರು ತಿಂಗಳ ಕಾಲ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಲಾಗಿತ್ತು. ನಂತರ 2020ರ ಸೆಪ್ಟಂಬರ್‌ನಲ್ಲಿ ಕಟ್ಟುನಿಟ್ಟಾದ ಕೊರೊನಾ ಮಾರ್ಗಸೂಚಿಗಳೊಂದಿಗೆ ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಲಾಗಿತ್ತು.
ಬಾಂಬ್ ಬೆದರಿಕೆ ಕರೆ ಬಂದ ನಂತರ ಅಧಿಕಾರಿಗಳು ಆವರಣವನ್ನು ಶೋಧಿಸಿದರು. ಆದರೆ ಈ ವರೆಗೂ ಯಾವುದೆ ಬಾಂಬ್ ಪತ್ತೆಯಾಗಿಲ್ಲ. ಕರೆ ಮಾಡಿದವರನ್ನು ಪತ್ತೆ ಹಚ್ಚಲು ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
“ಇಂದು ಬೆಳಿಗ್ಗೆ, ಅಪರಿಚಿತ ವ್ಯಕ್ತಿಯೊಬ್ಬರು ಉತ್ತರಪ್ರದೇಶದ 112 ಸಹಾಯವಾಣಿಗೆ ಕರೆ ಮಾಡಿ ತಾಜ್ ಮಹಲ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಹೇಳಿದರು. ತಕ್ಷಣ ನಮ್ಮ ಬಾಂಬ್ ಸ್ಕ್ವಾಡ್ ಮತ್ತು ಇತರ ತಂಡಗಳು ಆವರಣದಲ್ಲಿ ಸಂಪೂರ್ಣ ಶೋಧ ನಡೆಸಿದರು. ಇಲ್ಲಿಯವರೆಗೆ ಅಂತಹ ವಸ್ತು ಪತ್ತೆಯಾದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ” ಎಂದು ಆಗ್ರಾದ ಇನ್ಸ್‌ಪೆಕ್ಟರ್ ಜನರಲ್ ಎ ಸತೀಶ್ ಗಣೇಶ್ ಹೇಳಿದರು.
ಸುದ್ದಿ ಅಪ್‌ಡೇಟ್ ಆಗಲಿದೆ.
ಇದನ್ನೂ ಓದಿ: ಪೆಟ್ರೋಲ್ ಬಂಕ್‌ಗಳಲ್ಲಿರುವ ಮೋದಿ ಭಾವಚಿತ್ರವನ್ನು ಶೀಘ್ರವೇ ತೆರವುಗೊಳಿಸಿ: ಚುನಾವಣಾ ಆಯೋಗ


