ಬ್ರಿಟೀಷರು ಭಾರತ ತೊರೆದಿದ್ದು ಶಸ್ತ್ರಾಸ್ತ್ರಗಳ ಕಾರಣಕ್ಕಾಗಿಯೆ ಹೊರತು, ಸತ್ಯಾಗ್ರಹದಿಂದಲ್ಲ ಎಂದು ಬಿಹಾರ ರಾಜ್ಯಪಾಲ ರಾಜ್ರೇಂದ್ರ ಅರ್ಲೇಕರ್ ಶುಕ್ರವಾರ ಹೇಳಿದ್ದಾರೆ. ಸ್ಥಳೀಯ ಜನರ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಕಂಡು, ಅವರು ಯಾವುದೇ ಹಂತಕ್ಕೆ ಹೋಗಬಹುದು ಎಂದು ಅರಿತುಕೊಂಡು ಬ್ರಿಟೀಷರು ಭಾರತ ತೊರೆದಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. ಬ್ರಿಟಿಷರನ್ನು ಓಡಿಸಿದ್ದು ಸತ್ಯಾಗ್ರಹವಲ್ಲ
ಗೋವಾದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲರ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡುತ್ತಿದೆ ಎಂದು ಹೇಳಿದ್ದಾರೆ. ಬ್ರಿಟಿಷರನ್ನು ಓಡಿಸಿದ್ದು ಸತ್ಯಾಗ್ರಹವಲ್ಲ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯಪಾಲರ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಈ ಸತ್ಯವನ್ನು ಸಾಬೀತುಪಡಿಸಲು ಬ್ರಿಟಿಷ್ ಸಂಸತ್ತಿನಲ್ಲಿ ಅಂದಿನ ಸಂಸದರು ನೀಡಿರುವ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳಬಹುದು ಎಂದು ಅರ್ಲೇಕರ್ ಹೇಳಿದ್ದಾರೆ.
“ಅವರು (ಸಂಸದರು) ಕೇವಲ ಸತ್ಯಾಗ್ರಹವನ್ನು ಉಲ್ಲೇಖಿಸಲಿಲ್ಲ, ಬದಲಾಗಿ ಶಸ್ತ್ರಾಸ್ತ್ರ ಹೋರಾಟವನ್ನು ಉಲ್ಲೇಖಿಸಿದ್ದರು. ಇದು ಬ್ರಿಟಿಷರಿಗೆ ಭಾರತವನ್ನು ತೊರೆಯುವ ಸಮಯ ಎಂದು ಅವರು ಅರಿತುಕೊಂಡಿತು” ಎಂದು ಅವರು ಹೇಳಿದ್ದಾರೆ.
ಆಕ್ರಮಣಕಾರರು ಭಾರತೀಯರ ವಿರುದ್ಧ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಒಂದು ನಿರೂಪಣೆಯನ್ನು ರಚಿಸಲು ಪ್ರಯತ್ನಿಸಿದರು ಎಂದು ಅರ್ಲೇಕರ್ ಹೇಳಿದ್ದಾರೆ. ಆಗಿನ ಭಾರತ ಸರ್ಕಾರವೂ ಬ್ರಿಟಿಷರ ನಿರೂಪಣೆಯನ್ನು ಬೆಂಬಲಿಸಿತ್ತು ಎಂದು ಅವರು ಹೇಳಿದ್ದಾರೆ.
.ಇತಿಹಾಸದ ನಿಖರವಾದ ಆಧಾರವನ್ನು ಪ್ರಸ್ತುತಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ ಅವರು. “ಹೀಗಾದರೆ ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇಂದಿನ ಪೀಳಿಗೆಗೆ ಸತ್ಯಗಳನ್ನು ತಿಳಿಯಲು ಸಹಾಯಆಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಎನ್ಎಸ್ ಸೆಕ್ಷನ್ 152 ಭಿನ್ನಾಬಿಪ್ರಾಯ ಹತ್ತಿಕ್ಕುವ ಅಸ್ತ್ರವಾಗಿ ಬಳಸಬಾರದು : ರಾಜಸ್ಥಾನ ಹೈಕೋರ್ಟ್
ಬಿಎನ್ಎಸ್ ಸೆಕ್ಷನ್ 152 ಭಿನ್ನಾಬಿಪ್ರಾಯ ಹತ್ತಿಕ್ಕುವ ಅಸ್ತ್ರವಾಗಿ ಬಳಸಬಾರದು : ರಾಜಸ್ಥಾನ ಹೈಕೋರ್ಟ್


