ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪೂರ್ವ ಸರಣಿ ಸಮಾಲೋಚನೆಗಳ ಭಾಗವಾಗಿ ಹಣಕಾಸು ವಲಯ ಮತ್ತು ಬಂಡವಾಳ ಮಾರುಕಟ್ಟೆಗಳ ಮಧ್ಯಸ್ಥಗಾರರನ್ನು ಗುರುವಾರ ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಬಜೆಟ್ 2025 ಹಿನ್ನೆಲೆ
ಸಭೆಯಲ್ಲಿ ಹಣಕಾಸು ಕಾರ್ಯದರ್ಶಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ, ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ – ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಗಳು ಮತ್ತು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು ಭಾಗವಹಿಸಿದ್ದರು ಎಂದು ಇಕನಾಮಿಕ್ಸ್ ಟೈಮ್ಸ್ ವರದಿ ಹೇಳಿದೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಡೆಸಿದ ಬಜೆಟ್ ಪೂರ್ವ ಸರಣಿ ಸಭೆಗಳಲ್ಲಿ ಏಳನೇ ಸಭೆ ಇದಾಗಿದೆ ಎಂದು ವರದಿ ಉಲ್ಲೇಖಿಸಿದೆ. ಹಣಕಾಸು ಸಚಿವಾಲಯವು ತಜ್ಞರು, ಉದ್ಯಮದ ಮುಖಂಡರು, ಅರ್ಥಶಾಸ್ತ್ರಜ್ಞರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ವಾರ್ಷಿಕವಾಗಿ ಹಲವಾರು ಬಜೆಟ್ ಪೂರ್ವ ಸಮಾಲೋಚನಾ ಸಭೆಗಳನ್ನು ನಡೆಸುತ್ತದೆ. ಮುಂದಿನ ಹಣಕಾಸು ವರ್ಷಕ್ಕೆ ವಾರ್ಷಿಕ ಬಜೆಟ್ ಸಿದ್ಧಪಡಿಸುವ ಔಪಚಾರಿಕ ಕಸರತ್ತು ಈಗಾಗಲೇ ಆರಂಭವಾಗಿದೆ. ಬಜೆಟ್ 2025 ಹಿನ್ನೆಲೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಿರ್ಮಲಾ ಸೀತಾರಾಮನ್ ಇದುವರೆಗೆ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳು, ರೈತರ ಸಂಘಗಳು ಮತ್ತು ಅರ್ಥಶಾಸ್ತ್ರಜ್ಞರು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ ಎಂದು ಇಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ನೀತಿ ಆಯೋಗ ಆವರಣದಲ್ಲಿ ಕೇಂದ್ರ ಬಜೆಟ್ 2025-26 ರ ತಯಾರಿಯಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ಚಿಂತಕರ ಗುಂಪಿನೊಂದಿಗೆ ಸಂವಾದ ನಡೆಸಿದ್ದರು. ವರದಿಯಂತೆ 2025-26ರ ಬಜೆಟ್ ಅನ್ನು ಫೆಬ್ರವರಿ 1, 2025 ರಂದು ಮಂಡಿಸಲಾಗುತ್ತದೆ.
2025-26ರ ಬಜೆಟ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಎಂಟನೇ ಬಜೆಟ್ ಆಗಲಿದ್ದು, ಮೋದಿ 3.0 ಸರ್ಕಾರದ ಪ್ರಮುಖ ಘೋಷಣೆಗಳು ಮತ್ತು ಸರ್ಕಾರದ ಮುಂದಿನ ನಡೆಗಳ ಬಗ್ಗೆ ಎಲ್ಲರ ಕಣ್ಣುಗಳು ನಟ್ಟಿವೆ. ಅಲ್ಲದೆ, ದುರ್ಬಲ ಜಿಡಿಪಿ ಬೆಳವಣಿಗೆ ಮತ್ತು ಸಂಕಷ್ಟದ ಆರ್ಥಿಕತೆಯ ನಡುವೆ ಈ ಬಜೆಟ್‌ಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ 2024-25 ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯ ವಾಸ್ತವ ಬೆಳವಣಿಗೆ 5.4% ಆಗಿದೆ. ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ಹಣಕಾಸು ನೀತಿಯಲ್ಲಿ 2024-25 ರ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7.2% ರಿಂದ 6.6% ಕ್ಕೆ ಕಡಿತಗೊಳಿಸಿದೆ.
ಇದನ್ನೂ ಓದಿ: ಮನು ಭಾಕರ್-ಗುಕೇಶ್ ಸೇರಿದಂತೆ ನಾಲ್ವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ; ಜನವರಿ 17 ರಂದು ಪ್ರಶಸ್ತಿ ಪ್ರದಾನ
ಮನು ಭಾಕರ್-ಗುಕೇಶ್ ಸೇರಿದಂತೆ ನಾಲ್ವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ; ಜನವರಿ 17 ರಂದು ಪ್ರಶಸ್ತಿ ಪ್ರದಾನ


