ಸೋಮವಾರ ಲಂಡನ್‌ನ ಕಿಂಗ್ಸ್ ಕಾಲೇಜ್‌ನಲ್ಲಿ ನಡೆದ ‘ಮಾನವ ಹಕ್ಕುಗಳ ರಕ್ಷಣೆ, ನಾಗರಿಕ ಸ್ವಾತಂತ್ರ್ಯದ ರಕ್ಷಣೆ: ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳ ಪಾತ್ರ’ ಕುರಿತ ವಿಚಾರಸಂಕಿರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕೆಲವು ಕಠಿಣ ಪ್ರಶ್ನೆಗಳನ್ನು ಎದುರಿಸಿದ್ದಾರೆ.
ಬುಲ್ಡೋಜರ್‌ಗಳ ಮೂಲಕ ಮುಸ್ಲಿಮರ ಮನೆಗಳ ಧ್ವಂಸ, ಹಿಜಾಬ್ ವಿವಾದ, ಬಾಬರಿ ಮಸೀದಿ ತೀರ್ಪುಗಳಿಗೆ ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ ಮುಸ್ಲಿಂ ಅಲ್ಪಸಂಖ್ಯಾತರಿಗೆ ನೀಡಿರುವ ನ್ಯಾಯದ ಕುರಿತು ಪ್ರಶ್ನಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನ್ಯಾಯಮೂರ್ತಿ ಚಂದ್ರಚೂಡ್ ಮಾತನಾಡಿ, “ಬಹುತೇಕ ಪ್ರಕರಣಗಳು ಪ್ರಸ್ತುತ ನ್ಯಾಯಾಲಯದಲ್ಲಿವೆ. ಅವುಗಳ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ನ್ಯಾಯಾಧೀಶರಾದ ಬಳಿಕ ಕೆಲವು ನಿರ್ಬಂಧಗಳಿವೆ” ಎಂದಿದ್ದಾರೆ.
ಬಾಬರಿ ಮಸೀದಿ ಪ್ರಕರಣದಲ್ಲಿ ರಾಮ ಜನ್ಮಭೂಮಿ ಪರವಾಗಿ ತೀರ್ಪು ಹೊರಬಿದ್ದಿತು. “ತೀರ್ಪು ನೀಡಿದ ಪೀಠದ ಭಾಗವಾಗಿರುವುದರಿಂದ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಮರು ಅಥವಾ ಇತರ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯದ ಪ್ರಕರಣಗಳನ್ನು ನ್ಯಾಯಾಲಯಗಳು ವ್ಯವಹರಿಸುವುದಿಲ್ಲ ಎಂಬ ಅನಿಸಿಕೆಗಳಿವೆ ಎಂದ ಅವರು, “ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗಮನ ಹರಿಸಿದ್ದು, ಈ ವಿಷಯದ ಬಗ್ಗೆ ನೋಟಿಸ್ ನೀಡಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಸಾಮಾನ್ಯವಾಗಿ ರಕ್ಷಣೆಯ ಮೊದಲ ಅಸ್ತ್ರವಾಗಿದೆ. ಧಾರ್ಮಿಕ ಸ್ವಾತಂತ್ರ್ಯದ ವಿಷಯಗಳಲ್ಲಿ ನ್ಯಾಯಾಲಯವು ಧಾರ್ಮಿಕ ಪಂಥಗಳು ಮತ್ತು ನ್ಯಾಯಶಾಸ್ತ್ರದ ಪ್ರತಿಪಾದನೆಗಳನ್ನು ಎತ್ತಿಹಿಡಿದಿದೆ. ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವ ಅಲ್ಪಸಂಖ್ಯಾತರ ಹಕ್ಕನ್ನು ನಾವು ಎತ್ತಿ ಹಿಡಿದಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿರಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!
ವೆಬ್‌ನಲ್ಲಿಯೂ ನ್ಯಾಯಮೂರ್ತಿ ಚಂದ್ರಚೂಡ್ ಅವರ ಭಾಷಣ ಪ್ರಸಾರವಾಗಿದ್ದು, ಸುಪ್ರೀಂ ಕೋರ್ಟ್‌ನಿಂದ ನಿರ್ಣಯಿಸಲಾದ ಹಲವಾರು ಪ್ರಮುಖ ಮಾನವ ಹಕ್ಕುಗಳ ಪ್ರಕರಣಗಳ ಕುರಿತು ಅವರು ಮಾತನಾಡಿರುವುದನ್ನು ಕಾಣಬಹುದು.
ಮಹಿಳೆಯರಿಂದ ಹಿಡಿದು LGBTQ+ ಸಮುದಾಯದವರೆಗೆ ಭಾರತದ ವಿವಿಧ ವಿಭಾಗದ ಜನರ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸುಪ್ರೀಂ ಕೋರ್ಟ್ ವಹಿಸಿರುವ ಮಹತ್ವದ ಪಾತ್ರದ ಕುರಿತು ವಿವರಿಸಿದ್ದಾರೆ.
ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ “ಸಂಪೂರ್ಣ ನ್ಯಾಯ” ನೀಡಲು ಸುಪ್ರೀಂ ಕೋರ್ಟ್ ಮುಂದಿರುವ ಸವಾಲುಗಳ ಕುರಿತು ಅವರು ಪ್ರಸ್ತಾಪಿಸಿದ್ದರೆ. “ನ್ಯಾಯಾಧೀಶರೂ ತಪ್ಪು ಮಾಡಬಹುದು. ಒಮ್ಮೆ ಅಂತಿಮ ಎಂದು ಭಾವಿಸಿದ ನಿರ್ಧಾರಗಳನ್ನು ನಂತರದ ಪೀಳಿಗೆಯಿಂದ ಪರಿಶೀಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
(ಭಾಷಣದ ಪೂರ್ಣ ಪಠ್ಯವನ್ನು ‘ಇಲ್ಲಿ’ ಓದಬಹುದು)


