ಮೈದುನನ್ನು ಕೊಲ್ಲಲು ವಾಮಾಚಾರದಲ್ಲಿ ತೊಡಗಿದ್ದನೆಂಬ ಅನುಮಾನದ ಮೇರೆಗೆ ತೆಲಂಗಾಣದ ಮಲ್ಲಿಯಾಲ್ ಎಂಬಲ್ಲಿ 37 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಅವರ ಸಂಬಂಧಿಕರೇ ಮನೆಯೊಳಗೆ ಕೂಡಿ ಹಾಕಿ ಕುರ್ಚಿಯಲ್ಲಿ ಕೈಕಾಲು ಕಟ್ಟಿ ಜೀವಂತ ಸುಟ್ಟುಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
ಹತ್ಯೆಗೊಳಗಾದ ಯುವಕನನ್ನು ಹೈದರಾಬಾದ್‌ನ ಅಲ್ವಾಲ್ ಮೂಲದ ರಾಚಾರ್ಲಾ ಪವನ್ ಕುಮಾರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ
ಇತ್ತಿಚೆಗೆ ಅನಾರೋಗ್ಯದಿಂದ ನಿಧನರಾಗಿರುವ ತನ್ನ ಪತ್ನಿಯ ಸಹೋದರ ಜಗನ್ ಎಂಬವರ ಪತ್ನಿಗೆ ಸಾಂತ್ವಾನ ಹೇಳಲು ಬಲವಂತಪುರಕ್ಕೆ ಬಂದಿದ್ದ ಪವನ್ ಕುಮಾರ್ ಮೇಲೆ ಅವರ ಸಂಬಂಧಿಕರೇ ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ಅವರ ಹೆಂಡತಿ ಆರೋಪಿಸಿದ್ದಾರೆ.
ಮಲ್ಲಿಯಾಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾಗರಾಜು, “ಸ್ಥಳಕ್ಕೆ ಧಾವಿಸಿ ಮುಚ್ಚಿದ್ದ ಕೊಠಡಿಯ ಬಾಗಿಲು ತೆರೆದಾಗ, ಪವನ್ ಕುಮಾರ್‌ರನ್ನು ಕುರ್ಚಿಯಲ್ಲಿ ಕಟ್ಟಿಹಾಕಿದ್ದನ್ನು ನಾವು ಕಂಡಿದ್ದೇವೆ. ಅವರು ಸಂಪೂರ್ಣ ಸುಟ್ಟು ಕರಕಲಾಗಿದ್ದು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಜಗನ್ ಪತ್ನಿ ಸುಮಲತಾ ಅಪರಾಧ ಒಪ್ಪಿಕೊಂಡಿದ್ದು, ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ’ಸರ್ವಾಧಿಕಾರಿ ಧೋರಣೆ’ ಖಂಡಿಸಿ ಬ್ರಿಟಿಷ್ ಸಂಸದರು, ತಜ್ಞರ ಪತ್ರ


