Homeದಿಟನಾಗರಫ್ಯಾಕ್ಟ್‌ಚೆಕ್: ಇದು ಮೋದಿ ಯೋಗ ಮಾಡುತ್ತಿರುವ ವಿಡಿಯೋ! ಬಿಜೆಪಿಗರು ಹೇಳುತ್ತಿರುವುದು ನಿಜವೆ?

ಫ್ಯಾಕ್ಟ್‌ಚೆಕ್: ಇದು ಮೋದಿ ಯೋಗ ಮಾಡುತ್ತಿರುವ ವಿಡಿಯೋ! ಬಿಜೆಪಿಗರು ಹೇಳುತ್ತಿರುವುದು ನಿಜವೆ?

ವಿಡಿಯೋವನ್ನು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಮನೋಜ್ ಗೋಯೆಲ್ 'ಯೋಗಋಷಿ' ಎಂದು ಬಣ್ಣಿಸಿ ಶೇರ್ ಮಾಡಿದ್ದಾರೆ.

- Advertisement -
- Advertisement -

ಯೋಗದ ವಿಭಿನ್ನ ಭಂಗಿಗಳನ್ನು ಪ್ರದರ್ಶಿಸುವ ವ್ಯಕ್ತಿಯೊಬ್ಬರ ಕಪ್ಪು ಬಿಳುಪಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದು ಪ್ರಧಾನಿ ನರೇಂದ್ರ ಮೋದಿಯವರ ಅಪರೂಪದ ವಿಡಿಯೋ ಎಂದು ಹೇಳುತ್ತಾ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಶೇರ್‌‌ ಮಾಡುತ್ತಿದ್ದಾರೆ.

ವಿಡಿಯೋವನ್ನು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಮನೋಜ್ ಗೋಯೆಲ್ ‘ಯೋಗಋಷಿ’ ಎಂದು ಬಣ್ಣಿಸಿ ಶೇರ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಗುಜರಾತ್‌ನ ಸುರೇಂದ್ರ ನಗರದ ಬಿಜೆಪಿ ಶಾಸಕ ಧನ್ಜಿಭಾಯಿ ಪಟೇಲ್‌ ಕೂಡಾ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬಿಹಾರ ಚುನಾವಣೆಗಾಗಿ ಪ್ರಿಯಾಂಕಾ ಇಂದಿರಾ ಗಾಂಧಿಯವರ ಸೀರೆ ಧರಿಸಿದ್ದಾರೆಯೇ?

ಫ್ಯಾಕ್ಟ್‌‌ಚೆಕ್

ಪ್ರಧಾನಿ ನರೇಂದ್ರ ಮೋದಿಯವರದ್ದು ಎಂದು ಹರಿದಾಡುತ್ತಿರುವ ಈ ವೀಡಿಯೋ ವಾಸ್ತವವಾಗಿ ಖ್ಯಾತ ಯೋಗ ಗುರು, ಐಯ್ಯಂಗಾರ್ ಯೋಗಾ ಸ್ಥಾಪಕ ಬಿ.ಕೆ.ಎಸ್ ಐಯ್ಯಂಗಾರ್ ಅವರದ್ದಾಗಿದೆ. ಈ ವೀಡಿಯೋವನ್ನು 2006 ರಲ್ಲಿ ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಇದು ಪ್ರಧಾನಿ ಮೋದಿ ಜನಿಸುವ ಒಂದು ದಶಕಕ್ಕೂ ಮುನ್ನ ಅಂದರೆ 1938 ರಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ ಎಂದು ಅವರ ಮಗಳು ಸುನಿತಾ ಪಾರ್ಥಸಾರಥಿ ಅವರು ದೃಡಪಡಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

 

 

 

 

 

ಈ ವೀಡಿಯೊವನ್ನು ಜೂನ್ 12 2009 ರಂದು ಯೂಟ್ಯೂಬ್ ಚಾನೆಲ್ “ಟಾಮ್ ಮಾರ್ಟಿನ್” ನಲ್ಲಿ ಕೂಡಾ ಅಪ್‌ಲೋಡ್ ಮಾಡಲಾಗಿದೆ. ಅದರ ಶೀರ್ಷಿಕೆಯಲ್ಲಿ, “ಕೃಷ್ಣಮಾಚಾರ್ಯ ಮತ್ತು ಬಿ.ಕೆ.ಎಸ್. ಅಯ್ಯಂಗಾರ್ 1938 ರಲ್ಲಿ ಯೋಗ ಸೂತ್ರಗಳೊಂದಿಗೆ, ಭಾಗ 1 ಆಫ್ 6” ಎಂದು ಬರೆಯಲಾಗಿದೆ.

ಆದ್ದರಿಂದ ಸ್ಪಷ್ಟವಾಗಿ ಹೇಳುವುದಾದರೆ ಈ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಪ್ರಧಾನಿ ಮೋದಿ ಅವರದ್ದಲ್ಲ. ಯೋಗ ಗುರು ಬಿ.ಕೆ.ಎಸ್ ಐಯ್ಯಂಗಾರ್ ಅವರದ್ದಾಗಿದೆ.

ಇದನ್ನೂ ಓದಿ:  ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂಬುದು ನಿಜವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...