Homeದಿಟನಾಗರಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂಬುದು ನಿಜವೇ?

ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂಬುದು ನಿಜವೇ?

- Advertisement -
- Advertisement -

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕುರಿತ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಗಳಲ್ಲಿ ವೈರಲ್ ಆಗಿದೆ.  ಅದು ಫೋರ್ಬ್ಸ್‌ನ ‘ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ’ ಪಟ್ಟಿಯಲ್ಲಿ ರಾಹುಲ್ ಗಾಂಧಿ ಏಳನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗಾದರೆ ಪೋರ್ಬ್ಸ್ ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯನ್ನು ಮಾಡಿದೆಯೇ..? ಅದರಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಏಳನೇ ಸ್ಥಾನ ಪಡೆದಿದ್ದಾರೆಯೇ ಎಂಬುದರ ಕುರಿತು ಸತ್ಯವನ್ನು ಹುಡುಕುವ ಕೆಲಸ ಇದು.

ಈ ಕೆಳಗಿನ ಚಿತ್ರ ಅಂತಹ ಸುದ್ದಿಯನ್ನು ಹರಡಿದ ಹಲವಾರು ಪೋಸ್ಟ್‌ಳಲ್ಲಿ ಒಂದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಹರಡುವ ಸುಳ್ಳು ಸುದ್ದಿ, ವಿಡಿಯೋ ಹಂಚಿಕೊಳ್ಳಲಾಗುತ್ತಿದೆ!

ಈ ಕುರಿತು ಸತ್ಯಾಸತ್ಯತೆ ತಿಳಿಯಲು ಫೋರ್ಬ್ಸ್ ವೆಬ್‌ಸೈಟ್‌ನಲ್ಲಿ‘ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ’ ಪಟ್ಟಿಯನ್ನು ಹುಡುಕಿದಾಗ, ಫೋರ್ಬ್ಸ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಸಮೀಕ್ಷೆಯ ಪಟ್ಟಿಗಳಲ್ಲಿ ಅಂತಹ ಯಾವುದೇ ಪಟ್ಟಿ ಕಂಡುಬಂದಿಲ್ಲ. ಫೋರ್ಬ್ಸ್ ಕಂಪನಿ ವಿಶ್ವ ನಾಯಕರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಯಾವುದೇ ಸಮೀಕ್ಷೆ ಮಾಡಿಲ್ಲ.

PC: Forbes/screenshot

ಅಮೆಥಿ ಸಂಸದೀಯ ಕ್ಷೇತ್ರಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ರಾಹುಲ್ ಗಾಂಧಿ ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಫ್ಲೋರಿಡಾದ ರೋಲಿನ್ಸ್ ಕಾಲೇಜಿನಿಂದ ‘ಬ್ಯಾಚುಲರ್ ಆಫ್ ಆರ್ಟ್ಸ್’ ಎಂದು ಉಲ್ಲೇಖಿಸಿ ನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್ (ಅಭಿವೃದ್ಧಿ ಅಧ್ಯಯನ) ಮುಗಿಸಿದರು ಎಂಬ ಮಾಹಿತಿ ನೀಡಿದ್ದಾರೆ.

ರಾಹುಲ್ ಗಾಂಧಿಯನ್ನು ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಮೂಲಗಳಿಲ್ಲ. ಜೊತೆಗೆ ಫೋರ್ಬ್ಸ್ ರಾಹುಲ್ ಗಾಂಧಿಯನ್ನು ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಪಟ್ಟಿ ಮಾಡಿಲ್ಲ.

ಹೇಳಿಕೆ: ಫೋರ್ಬ್ಸ್‌ನ ‘ವಿಶ್ವದ ಹೆಚ್ಚು ವಿದ್ಯಾವಂತ ನಾಯಕರು’ ಪಟ್ಟಿಯಲ್ಲಿ ರಾಹುಲ್ ಗಾಂಧಿ ಏಳನೇ ಸ್ಥಾನದಲ್ಲಿದ್ದಾರೆ.

ಸತ್ಯ: ವಿಶ್ವ ನಾಯಕರ ಶಿಕ್ಷಣದ ಬಗ್ಗೆ ಫೋರ್ಬ್ಸ್ ಎಂದಿಗೂ ಸಮೀಕ್ಷೆ ನಡೆಸಿಲ್ಲ. ರಾಹುಲ್ ಗಾಂಧಿಯನ್ನು ವಿಶ್ವದ 7ನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಆದ್ದರಿಂದ, ವೈರಲ್ ಆಗುತ್ತಿರುವ ಪೋಸ್ಟ್‌ಗಳಲ್ಲಿ ಸತ್ಯಾಂಶವಿಲ್ಲ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: TMC ಕಾರ್ಯಕರ್ತರಿಂದ BJP ಸದಸ್ಯನ ಕೊಲೆ ಎಂಬ ಈ ಚಿತ್ರ 2018ರದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...