ದೌರ್ಜನ್ಯ
PC: Sabrang India

ಹತ್ರಾಸ್‌ನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಘಟನೆಯು ತಳಸಮುದಾಯಗಳ ಮೇಲೆ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಎತ್ತಿ ತೋರಿಸಿದೆ. 2015 ಮತ್ತು 2019 ರ ನಡುವೆ ಪರಿಶಿಷ್ಟ ಜಾತಿಗಳ ಮೇಲೆ ನಡೆಯುವ ದೌರ್ಜನ್ಯಗಳು ಸುಮಾರು 19% ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಎನ್‌ಸಿಆರ್‌ಬಿ ಸೂಚಿಸುತ್ತದೆ. ಭಾರತದಲ್ಲೇ ಅತೀ ಹೆಚ್ಚು ಪರಿಶಿಷ್ಟರ ಮೇಲಿನ ದೌರ್ಜನ್ಯಗಳು ರಾಜಸ್ಥಾನದಲ್ಲಿ ನಡೆಯುತ್ತವೆ ಎಂದು ಈ ವರದಿ ಹೇಳುತ್ತದೆ.

ಹತ್ರಾಸ್‌ನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮಹಿಳೆಯರ ಸುರಕ್ಷತೆಯ ಬಗೆಗಿನ ಚರ್ಚೆಯನ್ನು ಮುನ್ನಲೆಗೆ ತಂದಿರುವುದು ಮಾತ್ರವಲ್ಲದೆ ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರದ ಬಗೆಗಿನ ಚರ್ಚೆಯನ್ನು ಕೂಡಾ ಮುನ್ನಲೆಗೆ ತಂದಿದೆ. ಪೊಲೀಸರು ಮತ್ತು ಸಾರ್ವಜನಿಕ ಅಧಿಕಾರಿಗಳ ನಡೆಗಳು ಸಂತ್ರಸ್ತರ ಜಾತಿ ಆಧಾರದಲ್ಲಿ ನಡೆಯುತ್ತದೆ ಎಂಬ ಆರೋಪಗಳಿವೆ. ಹತ್ರಾಸ್ ಘಟನೆಯನ್ನೆ ನೋಡಬಹುದಾದರೆ ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, ಆಪಾದಿತ ದುಷ್ಕರ್ಮಿಗಳು ಪ್ರಭಾವಿ ಜಾತಿಗೆ ಸೇರಿದವರು. ಇದೇ ರೀತಿಯ ಇತರ ಘಟನೆಗಳು ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ಇತರ ರಾಜ್ಯಗಳಿಂದ ವರದಿಯಾಗಿವೆ.

ಇದನ್ನೂ ಓದಿ: ಜಾತಿ ದೌರ್ಜನ್ಯ: ವೈದ್ಯಕೀಯ ವಿದ್ಯಾರ್ಥಿ ಅಸಹಜ ಸಾವು!

ಪ್ರಸ್ತುತ ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಮತ್ತು ತಳಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ವಿರುದ್ಧ ಅಪರಾಧಗಳು ಹೆಚ್ಚುತ್ತಿದೆ ಎಂದು ವಿರೋಧ ಪಕ್ಷಗಳು ಧ್ವನಿ ಎತ್ತಿದ್ದರೆ, ಪ್ರತಿಪಕ್ಷಗಳು ಅಧಿಕಾರದಲ್ಲಿರುವ ಇತರ ಕೆಲವು ರಾಜ್ಯಗಳಲ್ಲಿ ಕೂಡಾ ಇದೇ ರೀತಿಯ ಆರೋಪಗಳು ಮತ್ತು ಘಟನೆಗಳು ನಡೆಯುತ್ತಿವೆ.

PC: PTI

ಈ ಲೇಖನದ ಮಾಹಿತಿಯೂ ಎನ್‌ಸಿಆರ್‌ಬಿಯ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವಾರ್ಷಿಕ ಕ್ರೈಮ್ ಇನ್ ಇಂಡಿಯಾ (ಸಿಐಐ) ವರದಿಗಳಿಂದ ಸಂಗ್ರಹಿಸಲಾಗಿದೆ.

ಪರಿಶಿಷ್ಟ ಜಾತಿಗಳ ಮೇಲೆ ನಡೆಯುತ್ತಿರುವ ಅಪರಾಧಗಳು 2015 ರಿಂದ 19% ಹೆಚ್ಚಾಗಿದೆ

ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ, 2019 ರಲ್ಲಿ ಪರಿಶಿಷ್ಟ ಜಾತಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಒಟ್ಟು 45,935 ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣಗಳಲ್ಲಿ ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಯ ಅಡಿಯಲ್ಲಿ ಬರುವ ಎಲ್ಲಾ ಐಪಿಸಿ ಅಪರಾಧಗಳು ಕೂಡಾ ಸೇರಿವೆ. ಇದನ್ನು ಸಾಮಾನ್ಯವಾಗಿ ಎಸ್‌ಸಿ / ಎಸ್‌ಟಿ ಪಿಒಎ ಎಂದು ಕರೆಯಲಾಗುತ್ತದೆ ಅಂದರೆ ಎಸ್‌ಸಿಗಳಲ್ಲದವರಿಂದ ಎಸ್‌ಸಿಗಳ ವಿರುದ್ಧ ನಡೆಯುವ ಅಪರಾಧಗಳು. ಐಪಿಸಿ ಅಡಿಯಲ್ಲಿ ಬರುವ ಎಸ್‌ಸಿಗಳ ವಿರುದ್ಧದ ಯಾವುದೇ ಅಪರಾಧಗಳನ್ನು ಎನ್‌ಸಿಆರ್‌ಬಿ ಈ ವಿಭಾಗದಲ್ಲಿ ದಾಖಲಿಸುವುದಿಲ್ಲ ಯಾಕೆಂದರೆ ಈ ಮಾದರಿಯ ಪ್ರಕರಣಗಳಲ್ಲಿ ಎಸ್‌ಸಿಗಳ ವಿರುದ್ಧ ಎಸ್‌ಸಿಗಳೇ ಈ ಅಪರಾಧಗಳನ್ನು ಮಾಡುತ್ತಾರೆ.

2015 ರಲ್ಲಿ, ಈ ನಿಬಂಧನೆಗಳ ಅಡಿಯಲ್ಲಿ ಒಟ್ಟು 38.6 ಸಾವಿರ ಅಪರಾಧಗಳು ದಾಖಲಾಗಿದ್ದು, ಇದು 2019 ರಲ್ಲಿ 45.9 ಸಾವಿರಕ್ಕೆ ಏರಿದೆ, ಇದು ಹಿಂದಿನ ದರಕ್ಕಿಂತ 19% ಹೆಚ್ಚಾಗಿದೆ.

ಈ ಅಪರಾಧಗಳಲ್ಲಿ ಯುಪಿ ಅತಿ ಹೆಚ್ಚು ವರದಿ ಮಾಡಿದ್ದರೂ, ಅಪರಾಧ ಪ್ರಮಾಣ ರಾಜಸ್ಥಾನದಲ್ಲಿ ಅತಿ ಹೆಚ್ಚು

2011 ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿ(ಎಸ್‌ಸಿ)ಗೆ ಸೇರಿದ ಸುಮಾರು 20 ಕೋಟಿ ಜನರಿದ್ದಾರೆ. 2019 ರಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ ಒಟ್ಟು 11.8 ಸಾವಿರ ಅಪರಾಧಗಳು ಉತ್ತರಪ್ರದೇಶದಲ್ಲಿ ದಾಖಲಾಗಿದ್ದು, ಇದು ದೇಶದ ಎಸ್‌ಸಿಗಳ ವಿರುದ್ಧದ ಒಟ್ಟು ಅಪರಾಧಗಳ ಕಾಲು ಭಾಗಕ್ಕಿಂತಲೂ ಹೆಚ್ಚಾಗಿದೆ. ಹಿಂದಿನ ವರ್ಷಗಳಲ್ಲಿಯೂ ಸಹ, ಯುಪಿಯಿಂದ ವರದಿಯಾದ ಇಂತಹ ಪ್ರಕರಣಗಳ ಸಂಖ್ಯೆ ದೇಶದಲ್ಲಿಯೇ ಅತಿ ಹೆಚ್ಚು. ಇತ್ತೀಚಿನ ಹತ್ರಾಸ್ ಘಟನೆಯ ಹಿನ್ನಲೆಯಲ್ಲಿ ಈ ಅಂಕಿಅಂಶವನ್ನು ವ್ಯಾಪಕವಾಗಿ ವರದಿ ಮಾಡಲಾಗುತ್ತಿದೆ.

ಆದಾಗ್ಯೂ, ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಎಸ್‌ಸಿ ಜನಸಂಖ್ಯೆಯನ್ನು ಹೊಂದಿದೆ ಎಂಬುದನ್ನು ಗಮನಿಸಬೇಕು. 2011 ರ ಜನಗಣತಿಯ ಪ್ರಕಾರ ಯುಪಿಯಲ್ಲಿ ಒಟ್ಟು ಎಸ್‌ಸಿ ಜನಸಂಖ್ಯೆ 4.13 ಕೋಟಿ, ಅಂದರೆ ದೇಶದ ಒಟ್ಟು ಎಸ್‌ಸಿ ಜನಸಂಖ್ಯೆಯ 20%. ಎಸ್‌ಸಿ ಜನಸಂಖ್ಯೆಗೆ ಸಂಬಂಧಿಸಿದಂತೆ ವರದಿಯಾದ ಅಪರಾಧಗಳ ಸಂಖ್ಯೆಗೆ ಸಂಬಂಧಿಸಿದಂತೆ, ಯುಪಿ 2019 ರಲ್ಲಿ ಎಸ್‌ಸಿ ಜನಸಂಖ್ಯೆಯ ಪ್ರತಿ ಲಕ್ಷಕ್ಕೆ 28.6 ಅಪರಾಧಗಳನ್ನು ವರದಿ ಮಾಡಿದೆ.

ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

ಈ ವಿಭಾಗದಲ್ಲಿ ಅಪರಾಧ ಪ್ರಮಾಣಕ್ಕೆ ಸಂಬಂಧಿಸಿದಂತೆ ಇದು ಆರನೇ ಸ್ಥಾನದಲ್ಲಿದೆ. ಒಂದು ಲಕ್ಷ ಎಸ್‌ಸಿ ಜನಸಂಖ್ಯೆಗೆ 55.6 ಅಪರಾಧಗಳೊಂದಿಗೆ ರಾಜಸ್ಥಾನವು ಎಸ್‌ಸಿಗಳ ವಿರುದ್ಧದ ಅತಿ ಹೆಚ್ಚು ದೌರ್ಜನ್ಯ ಪ್ರಮಾಣವನ್ನು ಹೊಂದಿದೆ. 2019 ರಲ್ಲಿ, ಎಸ್‌ಸಿಗಳ ವಿರುದ್ಧ ಸುಮಾರು 6.7 ಸಾವಿರ ಅಪರಾಧಗಳು ರಾಜಸ್ಥಾನದಿಂದ ವರದಿಯಾಗಿವೆ, ಇದು ದೇಶದಲ್ಲೇ ಎರಡನೇ ಅತಿ ಹೆಚ್ಚು ಪ್ರಕರಣ ದಾಖಲಾದ ರಾಜ್ಯವಾಗಿದೆ. ರಾಜಸ್ಥಾನದಲ್ಲಿ 1.22 ಕೋಟಿ ಎಸ್‌ಸಿಗಳಿದ್ದಾರೆ, ಅಂದರೆ ದೇಶದಲ್ಲಿ 5 ನೇ ಅತಿ ಹೆಚ್ಚು ಎಸ್ಸಿಗಳಿರುವ ರಾಜ್ಯವಾಗಿದೆ.

ಎಸ್‌ಸಿಗಳ ವಿರುದ್ಧ ಹೆಚ್ಚಿನ ಅಪರಾಧ ಪ್ರಮಾಣ ಹೊಂದಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ, ಬಿಹಾರ, ಗುಜರಾತ್ ಮತ್ತು ತೆಲಂಗಾಣ ಸೇರಿವೆ. ಈ ನಡುವೆ 2.14 ಕೋಟಿ ಎಸ್ಸಿಗಳನ್ನು ಹೊಂದಿರುವ, ಭಾರತದಲ್ಲೇ ಎರಡನೇ ಅತಿ ಹೆಚ್ಚು ಎಸ್‌ಸಿ ಜನಸಂಖ್ಯೆಯನ್ನು ಹೊಂದಿರುವ ಪಶ್ಚಿಮ ಬಂಗಾಳವು 2018 ರಲ್ಲಿ ಎಸ್‌ಸಿಗಳ ವಿರುದ್ಧ ಕೇವಲ 119 ಅಪರಾಧಗಳನ್ನು ದಾಖಲಿಸಿದೆ.

ವರದಿಯಾದ 30% ಪ್ರಕರಣಗಳಲ್ಲಿ ನಿರ್ದಿಷ್ಟವಾದ ಅಪರಾಧವು ಅಸ್ಪಷ್ಟವಾಗಿದೆ

ಎಸ್‌ಸಿಗಳ ವಿರುದ್ಧ ನಡೆಯುವ ಅಪರಾಧಗಳ ಬಹುಪಾಲು ಭಾಗವು ‘ಸಿಂಪಲ್ ಹರ್ಟ್ (ಚಿಕ್ಕ ಗಾಯ)’ ಹೆಸರಿನ ವಿಭಾಗಗಳ ಅಡಿಯಲ್ಲಿ ವರದಿಯಾಗಿದೆ. 2019 ರಲ್ಲಿ ಈ ವರ್ಗದಲ್ಲಿ 13.2 ಸಾವಿರ ಪ್ರಕರಣಗಳು ವರದಿಯಾಗಿವೆ, ಇದು 2017 ಮತ್ತು 2018 ರಲ್ಲೂ ಒಂದೆ ರೀತಿಯಲ್ಲಿದೆ. ಬಿಹಾರವು ಈ ವರ್ಗದ ಅಡಿಯಲ್ಲಿ ಅತೀ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡಿದೆ.

ಪರಿಶಿಷ್ಟ ಜಾತಿಗಳ ಮೇಲಿನ ಅಪರಾಧಗಳನ್ನು ವರದಿ ಮಾಡುವ ವ್ಯಾಪ್ತಿ

ನ್ಯಾಷನಲ್ ಕ್ಯಾಂಪೇನ್ ಫಾರ್ ದಲಿತ್‌ ಹ್ಯೂಮನ್ (ಎನ್‌ಸಿಡಿಎಚ್‌ಆರ್) ಪ್ರಕಟಿಸಿರುವ ‘Access to Justice for Dalits in India’ ಎಂಬ ಶೀರ್ಷಿಕೆಯ ವರದಿಯಲ್ಲಿರುವಂತೆ, ತಳಸಮುದಾಯಗಳ ಸಂತ್ರಸ್ತರು ತಮ್ಮ ವಿರುದ್ಧ ನಡೆಯುವ ದೌರ್ಜನ್ಯಗಳ ದೂರುಗಳು ಪೊಲೀಸರವರೆಗೂ ಬರುವುದಿಲ್ಲ ಎಂದು ಸೂಚಿಸುತ್ತದೆ. ದೂರು ಕೊಡದಂತೆ ಬೆದರಿಕೆ ಹಾಕುವುದು, ರಾಜಿ ಮಾಡುವುದು ಸೇರಿದಂತೆ ಹಲವಾರು ಕಾರಣಗಳಿವೆ ಎಂದು ವರದಿ ಹೇಳುತ್ತದೆ.

ಕೃಪೆ: ಫ್ಯಾಕ್ಟ್‌‌ಲಿ


ಇದನ್ನೂ ಓದಿ: 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯ, ಪ್ರತಿನಿತ್ಯ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಅನುವಾದಿತ ಲೇಖನ
+ posts

LEAVE A REPLY

Please enter your comment!
Please enter your name here