Homeಮುಖಪುಟಇಂದು ಮುಂಬೈನ ಆರ್ಥರ್‌ ಜೈಲು ಪಾಲಾಗಲಿದ್ದಾರ ವಿಜಯ್‌ ಮಲ್ಯ?

ಇಂದು ಮುಂಬೈನ ಆರ್ಥರ್‌ ಜೈಲು ಪಾಲಾಗಲಿದ್ದಾರ ವಿಜಯ್‌ ಮಲ್ಯ?

- Advertisement -
- Advertisement -

ಬಹುಕೋಟಿ ಬ್ಯಾಂಕ್‌ ವಂಚನೆ ಆರೋಪದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ ಉದ್ಯಮಿ ವಿಜಯ್‌ ಮಲ್ಯ ರನ್ನು ಇಂದು ಭಾರತಕ್ಕೆ ಕರೆತರುವ ಸಾಧ್ಯತೆಯಿದ್ದು ಅವರನ್ನು ಮುಂಬೈನ ಆರ್ಥರ್‌ ಜೈಲಿನಲ್ಲಿಡಲಾಗುತ್ತದೆ ಎನ್ನಲಾಗಿದೆ.

ಹಣ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಕ್ಕೆ ಒಳಗಾಗಿ ಭಾರತದಿಂದ ಲಂಡನ್‌ಗೆ ಪಲಾಯನ ಮಾಡಿದ ತಲೆ ಮರೆಸಿಕೊಂಡಿರುವ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ಅಲ್ಲಿನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಆದರೆ ವಿಜಯ ಮಲ್ಯ ತನ್ನನ್ನು ಭಾರತಕ್ಕೆ ಹಸ್ತಾಂತರಿಸದಂತೆ ಲಂಡನ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.

ಭಾರತವನ್ನು ತೊರೆದು ಮಾರ್ಚ್ 2, 2016 ರಂದು ಬ್ರಿಟನ್‌ಗೆ ಪಲಾಯನ ಮಾಡಿದ ವಿಜಯ್‌ ಮಲ್ಯ ದೇಶದ 17 ಬ್ಯಾಂಕುಗಳಿಂದ ಒಂಬತ್ತು ಸಾವಿರ ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಆರ್ಥಿಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ ಮಲ್ಯ ಅವರನ್ನು ಲಂಡನ್ ಸರ್ಕಾರ ಭಾರತಕ್ಕೆ ಇಂದು ರಾತ್ರಿ ಹಸ್ತಾಂತರಿಸಲಿದೆ ಎಂದು ಐಎಎನ್ಎಸ್‌ ವರದಿ ಮಾಡಿದೆ.

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುವ ವಿಜಯ ಮಲ್ಯ ಅವರನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲೇ ವೈದ್ಯಕೀಯ ತಂಡವೊಂದು ಅವರ ಆರೋಗ್ಯ ತಪಾಸಣೆ ನಡೆಸಲಿದೆ ಎನ್ನಲಾಗಿದೆ.

ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2018 ರ ಆಗಸ್ಟ್‌ನಲ್ಲಿ ಮಲ್ಯ ಅವರ ಮನವಿಯನ್ನು ಆಲಿಸಿದ್ದ ಯುಕೆ ನ್ಯಾಯಾಲಯ ಜೈಲಿನ ವಿವರಗಳನ್ನು ಹಂಚಿಕೊಳ್ಳಲು ಭಾರತೀಯ ತನಿಖಾ ಸಂಸ್ಥೆಗಳಿಗೆ ಸೂಚಿಸಿತ್ತು. ಹೀಗಾಗಿ ಮಲ್ಯ ಅವರನ್ನು ಬಂಧಿಸುವ ಮುಂಬೈನ ಆರ್ಥರ್ ರೋಡ್ ಜೈಲಿನ ಕೋಣೆಯನ್ನು ಸಿಬಿಐ ಅಧಿಕಾರಿಗಳು ವಿಡಿಯೋ ಮಾಡಿ ಕಳುಹಿಸಿದ್ದರು. ಅಲ್ಲದೆ, ಮಲ್ಯ ಹಸ್ತಾಂತರದ ನಂತರ ಅವರನ್ನು ಇರಿಸಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರು.
ಆರ್ಥರ್ ರೋಡ್‌ನ ಎರಡು ಎರಡು ಅಂತಸ್ತಿನ ಜೈಲು ಕಟ್ಟಡದಲ್ಲಿ ಮಲ್ಯ ಅವರನ್ನು ಉನ್ನತ ಭದ್ರತಾ ಬ್ಯಾರಕ್‌ಗಳಲ್ಲಿ ಇರಿಸಲಾಗುವುದು ಎಂದು ಯುಕೆ ನ್ಯಾಯಾಲಯಕ್ಕೆ ತಿಳಿಸಿದ್ದವು.

ಕೆಲದಿನಗಳ ಹಿಂದೆಯಷ್ಟೇ ವಿಜಯ್‌ ಮಲ್ಯ ಬ್ಯಾಂಕುಗಳ ಸಾಲ ತೀರಿಸಲು ಬದ್ಧನಿದ್ದೇನೆ. ದಯವಿಟ್ಟು ನನ್ನ ಸಾಲ ಮರುಪಾವತಿಯನ್ನು ಒಪ್ಪಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು.

ಭಾರತದಲ್ಲಿ ಹಣ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ತಮ್ಮ ಸಾಲದ ಬಾಕಿ ಹಣವನ್ನು ಶೇ 100 ರಷ್ಟು ಮರುಪಾವತಿಸುತ್ತೇನೆ ಹಾಗೂ ತನ್ನ ವಿರುದ್ದದ ಪ್ರಕರಣವನ್ನು ಕೈಬಿಡಿ ಎಂದು ಸರ್ಕಾರವನ್ನು ಕೋರಿದ್ದಾರೆ.

20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನೀಡಿದ್ದಕ್ಕಾಗಿ ಭಾರತ ಸರ್ಕಾರವನ್ನು ಅಭಿನಂದಿಸುತ್ತಾ, ತಾನು ಬಾಕಿ ಹಣವನ್ನು ಮರುಪಾವತಿ ಮಾಡುತ್ತೇನೆಂದು ಪದೇ ಪದೇ ಹೇಳಿದರೂ ನನ್ನ ಮಾತನ್ನು ನಿರ್ಲಕ್ಷಿಸಲಾಗಿದೆ ಎಂದು ವಿಷಾದಿಸಿದ್ದಾರೆ.

“ಕೊರೊನಾ ಪರಿಹಾರ ಪ್ಯಾಕೇಜ್‌ಗಾಗಿ ಸರ್ಕಾರಕ್ಕೆ ಅಭಿನಂದನೆಗಳು. ಅವರು ಬಯಸಿದಷ್ಟು ಕರೆನ್ಸಿಯನ್ನು ಮುದ್ರಿಸಬಹುದು ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲಗಳ 100% ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ?” ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಸಾಲ ತೀರಿಸುತ್ತೇನೆ, ನನ್ನ ವಿರುದ್ಧದ ಪ್ರಕರಣ ಕೈಬಿಡಿ: ವಿಜಯ್ ಮಲ್ಯ ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದಲ್ಲಿ ಹಿಂದೂ ಯುವಕನ ಗುಂಪುಹತ್ಯೆ ನಾಚಿಕೆಗೇಡು ಕೃತ್ಯ; ಇಸ್ಲಾಂ ವಿರುದ್ಧ: ಜಮಿಯತ್ ಮುಖ್ಯಸ್ಥ ಮಹಮೂದ್ ಮದನಿ

ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಮೇಲೆ ನಡೆದ ಗುಂಪು ಹಲ್ಲೆಯನ್ನು ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಕೃತ್ಯಗಳು...

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ-ರಾಹುಲ್‌ಗೆ ದೆಹಲಿ ಹೈಕೋರ್ಟಿನಿಂದ ನೋಟಿಸ್

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿನ ನಡೆದಿದೆ ಎನ್ನಲಾದ ಹಣ ವರ್ಗಾವಣೆ ದೂರನ್ನು ಪರಿಗಣಿಸಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯ ಕುರಿತು, ಕಾಂಗ್ರೆಸ್ ಸಂಸದೀಯ...

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಆಕ್ರಮಣ : ಪ್ಯಾಲೆಸ್ತೀನಿಯರ ವಸತಿ ಕಟ್ಟಡಗಳು ಧ್ವಂಸ

ಇಸ್ರೇಲಿ ಪಡೆಗಳು ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಪಟ್ಟಣಗಳಿಗೆ ನುಗ್ಗಿ ಪ್ಯಾಲೆಸ್ತೀನಿಯರ ವಸತಿ ಕಟ್ಟಡಗಳನ್ನು ಕೆಡವಿ ಹಾಕಿದೆ ಎಂದು ಸುದ್ದಿ ಸಂಸ್ಥೆ ಅಲ್‌-ಜಝೀರಾ ವರದಿ ಮಾಡಿದೆ. ಇದು ಗಾಝಾ ಕದನ ವಿರಾಮದ ಮೂಲಕ ಇಸ್ರೇಲ್ ಪ್ಯಾಲೆಸ್ತೀನಿಯರ...

ಶಿಕ್ಷಣ ಸಂಸ್ಥೆಗಳು ‘ಕೋಮುವಾದದ ಪ್ರಯೋಗಶಾಲೆʼಗಳಾಗಲು ಅವಕಾಶ ನೀಡುವುದಿಲ್ಲ: ಕೇರಳ ಸರ್ಕಾರ

ಶಾಲೆಗಳಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಹಿಂದುತ್ವ ಗುಂಪುಗಳು ಅಡ್ಡಿಪಡಿಸುತ್ತಿವೆ ಎಂಬ ಆರೋಪದ ಕುರಿತು ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಭಾನುವಾರ (ಡಿ.22) ಪ್ರತಿಕ್ರಿಯಿಸಿದ್ದು, ಶಿಕ್ಷಣ ಸಂಸ್ಥೆಗಳು ಕೋಮುವಾದದ ಪ್ರಯೋಗ ಶಾಲೆಗಳಾಗಲು ಅವಕಾಶ ನೀಡುವುದಿಲ್ಲ...

ರಷ್ಯಾ ಪರವಾಗಿ ಹೋರಾಡಿದ ಆರೋಪ; ಉಕ್ರೇನ್‌ನಲ್ಲಿ ಗುಜರಾತ್ ವಿದ್ಯಾರ್ಥಿ ಬಂಧನ

ರಷ್ಯಾ ಪರವಾಗಿ ಹೋರಾಡಿದ ಆರೋಪದ ಮೇಲೆ ಪ್ರಸ್ತುತ ಉಕ್ರೇನಿಯನ್ ಬಂಧನದಲ್ಲಿರುವ ಗುಜರಾತ್‌ನ ಮೊರ್ಬಿ ಜಿಲ್ಲೆಯ 23 ವರ್ಷದ ವ್ಯಕ್ತಿಯೊಬ್ಬರು ತಮ್ಮ ಬಿಡುಗಡೆ ಮಾಡಿ, ಸಹಾಯ ಮಾಡುವಂತೆ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ...

ತಮಿಳುನಾಡು| ದಲಿತ ಮಹಿಳೆ ಅಡುಗೆ ಮಾಡುವುದಕ್ಕೆ ಪೋಷಕರ ವಿರೋಧ; ಕೆಲಸದಿಂದ ತೆಗೆದ ಶಾಲೆ

ತಮಿಳುನಾಡಿನ ಕರೂರ್ ಜಿಲ್ಲೆಯ ತೋಗಮಲೈ ಬಳಿಯ ಪಂಚಾಯತ್ ಯೂನಿಯನ್ ಮಧ್ಯಮ ಶಾಲೆಯಲ್ಲಿ, ಮುಖ್ಯಮಂತ್ರಿಗಳ ಉಪಾಹಾರ ಯೋಜನೆ (ಸಿಎಮ್‌ಬಿಎಸ್) ಅಡಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕಲಾಗಿದ ಎಂದು 'ನ್ಯೂ ಇಂಡಿಯನ್...

ಬಾಂಗ್ಲಾ ಉದ್ವಿಗ್ನತೆ: ಮತ್ತೊಬ್ಬ ಯುವ ನಾಯಕ ಮುಹಮ್ಮದ್ ಮೊತಾಲೆಬ್ ಸಿಕ್ದಾರ್ ಮೇಲೆ ಗುಂಡಿನ ದಾಳಿ 

ದೇಶದಲ್ಲಿ ವ್ಯಾಪಕ ಅಶಾಂತಿಗೆ ಕಾರಣವಾದ ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಬಿನ್ ಹಾದಿ ಅವರ ಮರಣದ ಕೆಲವು ದಿನಗಳ ನಂತರ, ಸೋಮವಾರ ಮತ್ತೊಬ್ಬ ನಾಯಕನ ಮೇಲೆ ಗುಂಡು ಹಾರಿಸಲಾಯಿತು. ಗಾಯಗೊಂಡ...

ಕೇರಳ |ವಲಸೆ ಕಾರ್ಮಿಕನ ಗುಂಪು ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಭಾಗಿ : ಸಿಪಿಐ(ಎಂ) ನಾಯಕರಿಂದ ಆರೋಪ

ಕೇರಳದಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ಛತ್ತೀಸ್‌ಗಢದ ವಲಸೆ ಕಾರ್ಮಿಕನ ಗುಂಪು ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯರ್ತರು ಭಾಗಿಯಾಗಿದ್ದಾರೆ ಎಂದು ಆಡಳಿತರೂಢ ಸಿಪಿಐ(ಎಂ) ನಾಯಕರು ಆರೋಪಿಸಿದ್ದಾರೆ. ಸ್ಥಳೀಯ ಸ್ವ-ಆಡಳಿತ ಸಚಿವ ಎಂ.ಬಿ ರಾಜೇಶ್ ಆರಂಭದಲ್ಲಿ ಈ ಆರೋಪ ಮಾಡಿದ್ದು,...

‘ಹಿಂದೂಸ್ತಾನಿ ಅವಾಮ್ ಮೋರ್ಚಾಕ್ಕೆ ರಾಜ್ಯಸಭಾ ಸೀಟು ನೀಡಿ’: ದಲಿತ ನಾಯಕ ಜಿತನ್ ರಾಮ್ ಮಾಂಝಿ ಬೇಡಿಕೆ

ಬಿಹಾರ: ಕೇಂದ್ರ ಸಚಿವ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಉಸ್ತುವಾರಿ ಜಿತನ್ ರಾಮ್ ಮಾಂಝಿ ಅವರು 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಹಾರದಲ್ಲಿ NDA ಮೈತ್ರಿಕೂಟದ ಭಾಗವಾಗಿ ನೀಡಿದ ಭರವಸೆಗಳನ್ನು ನೆನಪಿಸಿಕೊಂಡು...

ಚುನಾವಣಾ ಟ್ರಸ್ಟ್‌ಗಳ ಮೂಲಕ ದೇಣಿಗೆ : ಶೇ.82ರಷ್ಟು ಪಾಲು ಪಡೆದ ಬಿಜೆಪಿ

ಸುಪ್ರೀಂ ಕೋರ್ಟ್ ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ರದ್ದುಗೊಳಿಸಿದ ನಂತರ 2024-25ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳು ಮೂರು ಪಟ್ಟು ಹೆಚ್ಚಾಗಿದ್ದು, 3,811 ಕೋಟಿ ರೂ.ಗಳಿಗೆ ತಲುಪಿದೆ ಎಂದು ದಿ...