Homeಮುಖಪುಟಸೋನು ಸೂದ್‌ ಬಳಿ ಸಹಾಯ ಕೇಳಿದ ಮಾಜಿ ಸಚಿವ, ಹಾಲಿ BJP ಶಾಸಕ : ಕಾಂಗ್ರೆಸ್‌...

ಸೋನು ಸೂದ್‌ ಬಳಿ ಸಹಾಯ ಕೇಳಿದ ಮಾಜಿ ಸಚಿವ, ಹಾಲಿ BJP ಶಾಸಕ : ಕಾಂಗ್ರೆಸ್‌ ಟೀಕೆ

- Advertisement -
- Advertisement -

ಬಿಜೆಪಿ ಮುಖಂಡ ಮತ್ತು ಮಧ್ಯಪ್ರದೇಶದ ಮಾಜಿ ಸಚಿವ ರಾಜೇಂದ್ರ ಶುಕ್ಲಾ ಮಹಾರಾಷ್ಟ್ರದ ಮುಂಬೈಯಲ್ಲಿ ಸಿಲುಕಿರುವ ತಮ್ಮ ಮಧ್ಯಪ್ರದೇಶದ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವಂತೆ ನಟ ಸೋನು ಸೂದ್ ಅವರನ್ನು ಟ್ವಿಟ್ಟರ್ ನಲ್ಲಿ ಕೇಳಿ ಭಾರೀ ಟೀಕೆಗೊಳಗಾಗಿದ್ದಾರೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಮಧ್ಯೆ ಮನೆಗೆ ಹಿಂತಿರುಗಲು ಸಾಧ್ಯವಾಗದೇ ಸಿಕ್ಕಿಕೊಂಡಿರುವ ಸಾವಿರಾರು ವಲಸೆ ಕಾರ್ಮಿಕರಿಗೆ ತನ್ನ ಸ್ವಂತ ಹಣದಲ್ಲಿ ಸಾರಿಗೆ ವ್ಯವಸ್ಥೆ ಮಾಡಿದ್ದಕ್ಕಾಗಿ ನಟ ಸೋನು ಸೂದ್ ವ್ಯಾಪಕ ಮೆಚ್ಚುಗೆ ಗಳಿಸಿದ್ದಾರೆ.

ಮುಂಬೈನಲ್ಲಿ ಸಿಲುಕಿರುವ ಮಧ್ಯಪ್ರದೇಶದ ರೇವಾ ಮತ್ತು ಸತ್ನಾ ಜಿಲ್ಲೆಗಳಿಂದ ವಲಸೆ ಬಂದವರ ಪಟ್ಟಿಯನ್ನು  ಬಿಜೆಪಿ ಶಾಸಕ ರಾಜೇಂದ್ರ ಶುಕ್ಲಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಅವರನ್ನು ವಾಪಸ್‌ ಕಳಿಸುವಂತೆ ಸಹಾಯಕ್ಕಾಗಿ ಸೋನು ಸೂದ್‌ ಬಳಿ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸೋನು ಸೂದ್‌ ನಾಳೆಯೇ ಆ ಎಲ್ಲಾ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ. “ನಿಮ್ಮ ವಲಸೆ ಸಹೋದರರನ್ನು ನಾಳೆ ನಿಮ್ಮ ಬಳಿಗೆ ಕಳುಹಿಸಲಾಗುವುದು ಸರ್. ನಾನು ಎಂದಾದರೂ ಮಧ್ಯಪ್ರದೇಶಕ್ಕೆ ಬಂದರೆ, ನನಗೆ ಪೋಹಾ (ಅವಲಕ್ಕಿ) ಕೊಡಿಸಿ.” ಎಂದು ಅವರು ಟ್ವೀಟ್‌ ಮಾಡಿ ಹೃದಯವೈಶಾಲ್ಯತೆ ಮೆರೆದಿದ್ದಾರೆ.

ಮುಂಬಯಿಯಲ್ಲಿ ಸಿಲುಕಿರುವ 168 ಜನರಲ್ಲಿ 55 ಜನರು ಸೂದ್ ಅವರ ಸಹಾಯದ ಮೇರೆಗೆ ತಮ್ಮ ಸ್ವಂತ ಸ್ಥಳಗಳಿಗ ಮರಳಬಹುದು ಎಂದು ಶುಕ್ಲಾ ನಂತರ ಹೇಳಿದ್ದಾರೆ.

ಆದರೆ, ಸೋಶಿಯಲ್ ಮೀಡಿಯಾ ಬಳಕೆದಾರರು ಶುಕ್ಲಾ ಅವರನ್ನು ಟ್ರೋಲ್ ಮಾಡಿದ್ದಾರೆ. ಕೇಂದ್ರದಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ತಮ್ಮದೇ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಆದರೆ ಅದೇ ಬಿಜೆಪಿ ನಾಯಕ ಬಾಲಿವುಡ್ ನಟನ ಸಹಾಯ ಪಡೆಯಬೇಕಾಯಿತು ಎಂದರೆ ಅವುಗಳ ಕಾರ್ಯವೈಖರಿ ಹೇಗಿರಬೇಡ ಎಂದು ವ್ಯಂಗ್ಯವಾಡಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಸಹ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಅವರನ್ನೂ ಗುರಿಯಾಗಿಸಿ ತೀವ್ರ ಟೀಕೆ ನಡೆಸಿದೆ. “ರಾಜೇಂದ್ರ ಶುಕ್ಲಾ ಅವರ ಈ ಟ್ವೀಟ್ ಮಧ್ಯಪ್ರದೇಶದ ಕಹಿ ಸತ್ಯವನ್ನು ಬಹಿರಂಗಪಡಿಸುತ್ತದೆ. ಮಾಜಿ ಸಚಿವ ಮತ್ತು ಪ್ರಸ್ತುತ ರೇವಾ ಕ್ಷೇತ್ರದ ಬಿಜೆಪಿ ಶಾಸಕರಾದ ಶುಕ್ಲಾರವರು ಶಿವರಾಜ್ ಚೌಹಾಣ್‌ ಅವರ ಸರ್ಕಾರವನ್ನು ನಂಬುತ್ತಿಲ್ಲ. ಬದಲಿಗೆ ಅವರು ಮುಂಬೈನಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರಿಗಾಗಿ ನಟ ಸೋನು ಸೂದ್ ಅವರ ಸಹಾಯವನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಕಾಂಗ್ರೆಸ್ ಮಾಜಿ ಸಂಸದ ಮುಖ್ಯಸ್ಥ ಅರುಣ್ ಯಾದವ್ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಲಕ್ಷಾಂತರ ವಲಸೆ ಕಾರ್ಮಿಕರನ್ನು ಮರಳಿ ಕರೆತಂದಿದೆ, ಆದರೆ “ಕಾಂಗ್ರೆಸ್ಸಿಗರು ತಮ್ಮ ಮನೆಗಳಲ್ಲಿ ಅಡಗಿದ್ದಾರೆ” ಎಂದು ಶುಕ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ವಲಸೆ ಕಾರ್ಮಿಕರ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳು ಟೀಕೆಯಲ್ಲಿ ತೊಡಗಿದ್ದಾರೆ ಸೋನು ಸೂದ್‌ರಂತಹ ವ್ಯಕ್ತಿಗಳು ನಿಶ್ಕಲ್ಮಷ ಸೇವೆಯಲ್ಲಿ ತೊಡಗಿದ್ದಾರೆ.

ಇಪ್ಪತ್ತು ದಿನಗಳ ಮೊದಲೇ ಮಹಾರಾಷ್ಟ್ರದಲ್ಲಿ ಸಿಕ್ಕಿಕೊಂಡಿದ್ದ ನೂರಾರು ವಲಸೆ ಕಾರ್ಮಿಕರು ತಮ್ಮ ಊರು ಕಲಬುರಗಿ ತಲುಪಲು ಸೋನು ಸೂದ್‌ 10 ಬಸ್‌ ವ್ಯವಸ್ಥೆ ಮಾಡಿದ್ದಲ್ಲದೆ, ಆ ಎಲ್ಲ ಕಾರ್ಮಿಕರಿಗೂ ಊಟದ ವ್ಯವಸ್ಥೆ ಮಾಡಿ ಮೆಚ್ಚುಗೆ ಪಡೆದಿದ್ದರು. ಅದಾದ ನಂತರ ಪಂಜಾಬ್‌ ಸರ್ಕಾರಕ್ಕೆ 1500 ಪಿಪಿಇ ಕಿಟ್‌ಗಳನ್ನು ದೇಣಿಗೆಯಾಗಿ ನೀಡಿ ಸುದ್ದಿಯಾದರು. ಜೊತೆಗೆ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ವಲಸೆ ಕಾರ್ಮಿಕರು ತಮ್ಮ ಮನೆ ಸೇರಲು ಸೋನು ಸಹಾಯ ಮಾಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದ ಅವರು ಕೇರಳದಲ್ಲಿ ಸಿಕ್ಕಿಕೊಂಡಿದ್ದ ನೂರಾರು ವಲಸೆ ಕಾರ್ಮಿಕರಿಗೆ ಮಾಡಿದ ಸಹಾಯ ದೇಶಾದ್ಯಂತ ಸುದ್ದಿಯಾಯಿತು. ಏಕೆಂದರೆ ಕೇರಳದಿಂದ ಓಡಿಸ್ಸಾಗೆ ಬಸ್‌ ವ್ಯವಸ್ಥೆ ಸಾಧ್ಯವಿಲ್ಲ ಎಂದು ಅರಿತು ಸೋನು ಸೂದ್‌ ಅವರೆಲ್ಲರೂ ವಿಮಾನವನ್ನೇ ಬುಕ್‌ ಮಾಡಿ ತಮ್ಮ ಊರು ತಲುಪುವಂತೆ ಮಾಡಿದ್ದರು..

ಸೋನು ಸೂದ್‌ರವರ ಈ ಕಾಳಜಿಗೆ ಮೆಚ್ಚಿದ ಮಹಿಳೆಯೊಬ್ಬರು ತನ್ನ ಮಗುವಿಗೆ ಸೋನು ಸೂದ್‌ ಶ್ರೀವಾಸ್ತವ್‌ ಎಂದು ಹೆಸರಿಟ್ಟು ಕೃತಜ್ಞತೆ ಸಲ್ಲಿಸಿದ್ದರು. ಅಲ್ಲದೆ ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್‌ ಸಿಂಗ್‌ ಕೋಶಿಯಾರಿಯವರು ಸೋನು ಸೂದ್‌ರವರನ್ನು ರಾಜಭವನಕ್ಕೆ ಆಹ್ವಾನಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...