Homeಅಂಕಣಗಳುಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

- Advertisement -
- Advertisement -

ಇಫಿಗೆನಿಯಾ (1977): ಕ್ರಿಸ್ತ ಪೂರ್ವ 1250ರಲ್ಲಿ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವೆ ನಡೆದಿರಬಹುದೆಂದು ನಂಬಲಾದ ಮಹಾಸಮರದ ಕುರಿತು ಜನಪದ ಗೀತೆಗಳ ಸಂಗ್ರಹದ ಮೂಲಕ ಮುಂದೆಸಾಗಿ ಕ್ರಿ.ಪೂ 800ರಲ್ಲಿ ಹೋಮರ್ ಎಂಬ ಕುರುಡು ಹಾಡುಗಾರನ ಹಾಡುಗಳನ್ನು ದಾಖಲಿಸಲು ನಡೆದ ಪ್ರಯತ್ನದಲ್ಲಿ ಗ್ರೀಕ್ ಲಿಪಿ ಹುಟ್ಟಿತು ಎನ್ನಲಾಗುತ್ತದೆ. ಹೀಗೆ ಹುಟ್ಟಿಕೊಂಡ ಮೊದಲ ಮಹಾಕಾವ್ಯಗಳೇ ಇಲಿಯಡ್ ಮತ್ತು ಒಡಿಸ್ಸಿ (ಗ್ರೀಕ್ ಟ್ರಾಜಿಡೀಸ್).

ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳು ಹಾಡುಗಳ ರೂಪದಲ್ಲಿದ್ದು, ಗ್ರೀಕ್ ಯೋಧರ ವೀರತ್ವ ಹಾಗೂ ತ್ಯಾಗ ಬಲಿದಾನಗಳ ಕುರಿತ ದಾಖಲೆಯಾಗಿದೆ. ಹತ್ತು ವರ್ಷಗಳ ಸತತವಾಗಿ ಸಾಗಿದ ಮಹಾಸಮರ ಶುರುವಾಗಿದ್ದಕ್ಕೆ ಕಾರಣ: ಗ್ರೀಸ್ ದೇಶದ ರಾಜ ಆಗಮೆಮ್‌ನೊನ್‌ನ (ಮಿಕೇನ್ ರಾಜ್ಯ) ಸಹೋದರ ಮೆನೆಲಾಯ್‌ನ (ಸ್ಪಾರ್ಥ ರಾಜ್ಯ) ಹೆಂಡತಿಯಾದ ಮಹಾಸುಂದರಿ ಹೆಲೆನಾಳನ್ನು ಟ್ರಾಯ್ ದೇಶದ ರಾಜಕುಮಾರ ಪಾರೀಸ್ ಅಪಹರಿಸಿಕೊಂಡುಹೋಗಿರುವುದು.

ಇಫಿಗೆನಿಯಾ ಸಿನಿಮಾ ಶುರುವಾಗುವುದು ಹೆಲೆನಾಳ ಅಪಹರಣದ ಪರಿಣಾಮವಾಗಿ ಆಗಮೆಮ್‌ನೊನ್ ಮತ್ತು ಮೆನೆಲಾಯ್ ಟ್ರಾಯ್ ದೇಶದ ವಿರುದ್ಧ ಯುದ್ಧ ಸಾರಿ ಸಾವಿರಕ್ಕೂ ಹೆಚ್ಚಿನ ಹಡಗುಗಳು ಮತ್ತು ಸಾವಿರಾರು ಸೈನಿಕರು ಟ್ರಾಯ್‌ನತ್ತ ಸಾಗಲು ಸಿದ್ಧರಾಗುವುದರಿಂದ. ಆದರೆ ಆಗಮೆಮ್‌ನೊನ್ ಬೇಟೆಯಾಡುವಾಗ ಪವಿತ್ರವಾದ ಸ್ಥಳದಲ್ಲಿ ಜಿಂಕೆಯನ್ನು ಕೊಂದಿದ್ದರಿಂದ ಪಡೆಯುವ ಶಾಪದಿಂದ ಹಡಗುಗಳು ಮುಂದೆಸಾಗಲು ಗಾಳಿ ಇಲ್ಲದಂತಾಗುತ್ತದೆ.

ಇಫಿಗೆನಿಯಾ

ಆಗ ದೈವವಾಣಿಯಾಗಿ ಬರುವ ಪರಿಹಾರ ಆಗಮೆಮ್‌ನೊನ್‌ನ ಮೊದಲ ಮುದ್ದಿನ ಮಗಳಾದ ಇಫಿಗೆನಿಯಾಳನ್ನು ಬಲಿ ನೀಡಿದರೆ ಮಾತ್ರ ಟ್ರಾಯ್‌ನತ್ತ ಹಡಗುಗಳು ಸಾಗಲು ಗಾಳಿ ಬೀಸುತ್ತದೆ ಎಂಬುದು. ಇದನ್ನು ಕೇಳಿ ಆತಂಕ ಮತ್ತು ಧರ್ಮಸಂಕಟದಲ್ಲಿ ಆಗಮೆಮ್‌ನೊನ್ ಸಿಲುಕುತ್ತಾನೆ. ಗ್ರೀಸಿನ ಗೌರವಕ್ಕಾಗಿ ತನ್ನ ಮುದ್ದಿನ ಮಗಳನ್ನು ಕೊಲ್ಲುವ ಸಂದಿಗ್ಧತೆಯಲ್ಲಿ ಸಿಕ್ಕಿ ಒದ್ದಾಡುತ್ತಾನೆ.

ಸಾವಿರಾರು ಸೈನಿಕರ ಯುದ್ಧಾಕ್ರೋಶದ ಮುಂದೆ ತಲೆ ಬಾಗುವ ಆಗಮೆಮ್‌ನೊನ್ ಇಫಿಗೆನಿಯಾಳಿಗೆ ತಾನಿರುವ ಸ್ಥಳಕ್ಕೆ ಬರುವಂತೆ ಸುದ್ದಿ ಕಳಿಸುತ್ತಾನೆ. ಸುದ್ದಿ ಕೊಂಡೊಯ್ಯುವವನ ಬಳಿಯಲ್ಲಿ ’ಇಫಿಗೆನಿಯಾಳಿಗೆ ಮತ್ತು ನೆರೆಯ ರಾಜ್ಯದ ಆಕಿಲೀಸ್‌ನಿಗೆ ಮದುವೆಯೆಂದು’ ಸುಳ್ಳು ಹೇಳಲು ತಿಳಿಸಿರುತ್ತಾನೆ. ಇದನ್ನು ನಿಜವೆಂದುಕೊಂಡ ಆಗಮೆಮ್‌ನೊನ್‌ನ ಹೆಂಡತಿ ಕ್ಲಿಟೆಮ್ನೆಸ್ಟ್ರಾ ತನ್ನ ಮಕ್ಕಳೊಂದಿಗೆ ಬರುತ್ತಾಳೆ.

ಈ ಬರಸಿಡಿಲಿನಂತ ನಿರ್ಧಾರದಿಂದ ಆಗಮೆಮ್‌ನೊನ್ ತಳಮಳ ಸಿನಿಮಾದ ಮೊದಲ ಭಾಗ ಹಿಡಿದಿಟ್ಟರೆ, ಒಮ್ಮೆ ಮಗಳು ಇಪಿಜೆನಿಯಾ ಮತ್ತು ಹೆಂಡತಿ ಕ್ಲಿಟೆಮ್ನೆಸ್ಟ್ರಾ ಬಂದ ನಂತರ ಈ ಸುದ್ದಿ ತಿಳಿದು ಉಂಟಾಗುವ ಸಂಘರ್ಷ ಮತ್ತು ಆಗಮೆಮ್‌ನೊನ್ ಅಸಹಾಯಕತೆಯನ್ನು ಸಿನಿಮಾದ ಕೊನೆಯವರೆಗೂ ಕಟ್ಟಲಾಗಿದೆ.

ಸಾವಿರಾರು ಸೈನಿಕರು ಯುದ್ದದ ರೋಷಾಗ್ನಿಯಿಂದ ಇಫಿಗೆನಿಯಾಳ ಬಲಿಗಾಗಿ ಕೂಗಾಟ ಕಿರುಚಾಟಗಳ ಮಧ್ಯೆ, ಇಪಿಜೆನಿಯಾಳಿಗೆ ಬೇರೆ ದಾರಿಯಿಲ್ಲದೆ ’ಮದುವೆಗೆಂದು ಬಂದೆ, ಈ ಸಾವೇ ನನ್ನ ಮದುವೆ, ನಿಮ್ಮ ಯುದ್ದದ ಗೆಲ್ಲುವೆ ನನ್ನ ಮಕ್ಕಳು’ ಎಂದು ಹೇಳಿ ಬಲಿಪೀಠದತ್ತ ಸಾಗುತ್ತಾಳೆ.

ಒಂದು ಕಡೆ ಆಸಹಾಯಕತೆಯಲ್ಲಿ ನಿಂತು ನೋಡುತ್ತಿರುವ ಆಗಮೆಮ್‌ನೊನ್, ಕೋಪದಲ್ಲಿ ಕುದಿಯುತ್ತಿರುವ ಕ್ಲಿಟೆಮ್ನೆಸ್ಟ್ರಾ ಇನ್ನೊಂದು ಕಡೆ. ಕೊನೆಗೆ ಗಾಳಿ ಬೀಸಲಾರಂಭಿಸುತ್ತದೆ. ಸೈನಿಕರು ಮತ್ತು ಹಡಗುಗಳು ಯುದ್ಧದ ಉತ್ಸಾಹದಿಂದ ಟ್ರಾಯ್‌ನತ್ತ ಸಾಗುತ್ತಾರೆ. ಕ್ಲಿಟೆಮ್ನೆಸ್ಟ್ರಾಳ ಕೋಪ ಸೇಡಿನ ರೂಪಾಂತರವಾಗುವುದೆಂಬ ಊಹೆಯಲ್ಲಿಯೇ ಸಿನಿಮಾದ ಅಂತ್ಯ.

ಎಲೆಕ್ಟ್ರಾ (1962): ಇಫಿಗೆನಿಯಾಳ ಬಲಿಯ ನಂತರ ಆಗಮೆಮ್‌ನೊನ್ ಟ್ರಾಯ್‌ನ ಮೇಲೆ ಮಾಡಿದ ಹತ್ತು ವರ್ಷಗಳ ಮಹಾಸಮರವನ್ನು ಮುಗಿಸಿ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ. ಸ್ನಾನದ ಕೋಣೆಯಲ್ಲಿ ಹೆಂಡತಿ ಕ್ಲಿಟೆಮ್ನೆಸ್ಟ್ರಾ ಮತ್ತು ಅವಳ ಪ್ರಿಯಕರ ಎಗೀಸ್‌ನ ಸಹಾಯದಿಂದ ಆಗಮೆಮ್‌ನೊನ್‌ನನ್ನು ಕೊಲ್ಲುವುದರ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಾಳೆ.

ಕ್ಲಿಟೆಮ್ನೆಸ್ಟ್ರಾ ಆಗಮೆಮ್‌ನೊನ್‌ನ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪ್ರಿಯಕರನೊಂದಿಗೆ ಇರುವುದನ್ನು ಗಮನಿಸುವ ಆಕೆಯ ಮಗ ಒರೆಸ್ಟೆಸ್ ಹಲವು ವರ್ಷಗಳ ಮೊದಲೇ ಅರಮನೆಯಿಂದ ದೂರವಾಗಿ ತನ್ನ ಗುರುವಿನ ಬಳಿ ರಾಜತಂತ್ರಗಳನ್ನು ಕಲಿಯುತ್ತಿರುತ್ತಾನೆ. ಅರಮನೆಯಲ್ಲಿ ಉಳಿದಿದ್ದು ಮಗಳು ಎಕ್ಟ್ರಾ.

ಆಗಮೆಮ್‌ನೊನ್‌ನ ಸಾವಿನ ನಂತರ ಮಗಳನ್ನು ಅವಮಾನಿಸಲು, ಅವಳ ಕೂದಲನ್ನು ಕತ್ತರಿಸಿ ಬಡ ಮುದಿ ರೈತನೊಂದಿಗೆ ಮದುವೆ ಮಾಡಿಸಿ ಕ್ಲಿಟೆಮ್ನೆಸ್ಟ್ರಾ ಮತ್ತು ಪ್ರಿಯಕರ ಎಗೀಸ್ ಆಕೆಯನ್ನು ರಾಜ್ಯದಿಂದ ಹೊರತಳ್ಳುತ್ತಾರೆ. ಇದರಿಂದ ನೊಂದ ಎಲೆಕ್ಟ್ರಾ ತನ್ನ ತಮ್ಮ ಒಂದು ದಿನ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿಯೇ ಹಳ್ಳಿಯೊಂದರಲ್ಲಿ ಬದುಕುತ್ತಿರುತ್ತಾಳೆ, ಊರಿನ ಹೆಂಗಸರೆಲ್ಲಾ ಎಲೆಕ್ಟ್ರಾಳಿಗೆ ಸಹಾಯ ಮಾಡುತ್ತಿರುತ್ತಾರೆ.

ಕೊನೆಗೊಂದು ದಿನ ತಮ್ಮ ಒರೆಸ್ಟೆಸ್‌ನ ಕಡೆಯವರೆಂದು ಹೇಳಿಕೊಂಡು ಬರುವ ಇಬ್ಬರು ಅಪರಿಚಿತರು ಎಲೆಕ್ಟ್ರಾಳನ್ನು ಭೇಟಿಯಾಗುತ್ತಾರೆ. ಆಗ ತನ್ನ ತಂದೆ ಆಗಮೆಮ್‌ನೊನ್‌ನ ಸಹಾಯಕನಾಗಿದ್ದ ಕುರುಡ ಮುದುಕನೊಬ್ಬನ ಸಹಾಯದಿಂದ, ಆ ಇಬ್ಬರು ಅಪರಿಚಿತರಲ್ಲೊಬ್ಬ ಎಲೆಕ್ಟ್ರಾಳ ತಮ್ಮ ಒರೆಸ್ಟೆಸ್ ಎಂಬ ಸತ್ಯ ತಿಳಿಯುತ್ತದೆ.

ಎಲೆಕ್ಟ್ರಾ

ಹೀಗೆ ಒಂದಾದ ಒರೆಸ್ಟೆಸ್ ಮತ್ತು ಎಲೆಕ್ಟ್ರಾ ತಮ್ಮ ಮುಂದಿನ ಯೋಜನೆಯನ್ನು ರೂಪಿಸುತ್ತಾರೆ. ಅದರಂತೆ ರಾತ್ರಿ ಸಮಯದಲ್ಲಿ ಅರಮನೆಯ ಹೊರಾಂಗಣದಲ್ಲಿ ಕುಡಿದು ಮೋಜು ಮಾಡುತ್ತಿರುವ ಎಗೀಸ್‌ನ ಕೂಟಕ್ಕೆ, ಒರೆಸ್ಟೆಸ್ ತನ್ನ ಗೆಳೆಯನೊಂದಿಗೆ ದಾರಿಹೋಕರಂತೆ ಸೇರಿಕೊಳ್ಳುತ್ತಾರೆ. ಎಗೀಸ್ ಒರೆಸ್ಟೆಸ್‌ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ಕುಡಿದು ಮೈಮರೆತ ಕ್ಷಣದಲ್ಲಿ ಎಗೀಸ್‌ನ ಕೊಲೆಯಾಗುತ್ತಾನೆ.

ಎಗೀಸ್‌ನ ಹೆಣವನ್ನು ಅಕ್ಕ ಎಲೆಕ್ಟ್ರಾಳ ಮನೆಯ ಮುಂದೆ ತಂದಿಡುತ್ತಾನೆ. ಎಲೆಕ್ಟ್ರಾಳ ಸೇಡು ಅಲ್ಲಿಗೆ ತಣಿಯುತ್ತದೆ. ಇದಾದ ತುಸು ಸಮಯಕ್ಕೆ ತಾಯಿ ಕ್ಲಿಟೆಮ್ನೆಸ್ಟ್ರಾ ಎಲೆಕ್ಟ್ರಾಳ ಮನೆಗೆ ಬರುತ್ತಾಳೆ. ಇಬ್ಬರ ನಡುವಿನ ತಪ್ಪು-ಸರಿ ವಾಗ್ವಾದಗಳ ನಂತರ, ಪ್ರಿಯಕರನನ್ನು ಕಾಣಲು ಮನೆಯೊಳಗೆ ಬರಲು, ಎಲೆಕ್ಟ್ರಾ ಮತ್ತು ಒರೆಸ್ಟೆಸ್ ಸೇರಿ ತಾಯಿ ಕ್ಲಿಟೆಮ್ನೆಸ್ಟ್ರಾಳನ್ನು ಕೊಲ್ಲುತ್ತಾರೆ.

ಈ ಭೀಕರ ಸಂದರ್ಭವನ್ನು ಊರಿನ ಜನರೆಲ್ಲ ತಿಳಿದು ಆಘಾತದಲ್ಲಿರುತ್ತಾರೆ. ಮನೆಯಿಂದ ಹೊರ ಬಂದು ಅಕ್ಕ-ತಮ್ಮರಿಬ್ಬರೂ ನೋವು ಮತ್ತು ದುಃಖದ ಭಾವನೆಯಿಂದ ಪರಸ್ಪರ ವಿರುದ್ಧ ದಿಕ್ಕುಗಳಿಗೆ ಹೋಗುವ ಮೂಲಕ ಸಿನಿಮಾ ಅಂತ್ಯವಾಗುತ್ತದೆ.

ಮಿಕೇಲ್ ಕಕೊಯಾನೀಸ್: ಮಿಕೇಲ್ ಗ್ರೀಸ್ ದೇಶದ ಪ್ರಮುಖ ನಿರ್ದೇಶಕರಲ್ಲೊಬ್ಬರು. ಇವರ ಮುಖ್ಯ ಕಥಾವಸ್ತುಗಳೆಂದರೆ ಇತಿಹಾಸ, ಪುರಾಣಗಳು, ಗ್ರೀಕ್ ಟ್ರಾಜಿಡಿಗಳು ಹಾಗೂ ಹೆಣ್ಣು ಮತ್ತು ಸಮಾಜದ ನಡುವಿನ ಸಂಘರ್ಷಗಳು.

ಮಿಕೇಲ್ ಬ್ರಿಟನ್‌ನಲ್ಲಿ ಓದಿ ವಕೀಲರನ್ನಾಗಿಸಲು ಅವರ ತಂದೆ ಇಚ್ಛಿಸಿದ್ದರು. ಆದರೆ ಮಿಕಾಲ್‌ರು ಬಿಬಿಸ್ ವರ್ಲ್ಡ್ ಸರ್ವಿಸ್ಸ್ ಸಂಸ್ಥೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಮಿಕಾಲ್‌ರಿಗೆ ದೃಶ್ಯದ ಮಾಧ್ಯಮದ ಪರಿಚಯವಾಯಿತು.

ಇವರು ಮಾಡಿದ ಯೂರಿಪಿಡೀಸ್‌ರ ಟ್ರಿಯಾಲಜಿಯಲ್ಲಿ ಎಲೆಕ್ಟ್ರಾ (1962), ದಿ ಟ್ರೋಜನ್ ವಿಮೆನ್(1971) ಮತ್ತು ಇಪಿಜೆನಿಯಾ (1977) ಸಿನಿಮಾಗಳಿವೆ. ದಿ ಟ್ರೋಜನ್ ವಿಮೆನ್ ಸಿನಿಮಾದಲ್ಲಿ ಟ್ರಾಯ್ ನಗರದ ಧ್ವಂಸದ ನಂತರದಲ್ಲಿ ಯುದ್ಧದಿಂದ ಕದಡಿದ ಮಹಿಳೆಯರ ಮುಖ್ಯವಾದ ಕಥಾನಕವಿದೆ.

ಮಿಕೇಲ್ ಕಕೊಯಾನೀಸ್

ಮಿಕೇಲ್, ನಾಟಕಗಳಾಗಿದ್ದ ಗ್ರೀಕ್ ಟ್ರಾಜಿಡಿಗಳನ್ನು ಅತ್ಯಂತ ಬಿಗಿಯಾಗಿ ದೃಶ್ಯರೂಪಕ್ಕೆ ತಂದಿದ್ದಾರೆ. ಕಕೊಯಾನೀಸ್‌ರ ಸಿನಿಮಾಟೋಗ್ರಾಫರ್ ವಲ್ಟರ್ ಲೆಸೆಲ್ಲಿ ತಮ್ಮ ಸಂದರ್ಶನವೊಂದರಲ್ಲಿ ಹೇಳುವಂತೆ, ’ಮಿಕೇಲ್ ಅವರು ಸ್ಕ್ರಿಪ್ಟ್‌ನಲ್ಲಿ ಪ್ರತಿ ಪುಟ್ಟ ವಿವರಣೆಗಳನ್ನು ಬರೆದುಕೊಂಡಿರುತ್ತಾರೆ. ಪ್ರತಿ ಶಾಟ್ ಹೇಗಿರಬೇಕೆಂದು ಶೂಟಿಂಗ್‌ಗೆ ಬರುವ ಮೊದಲೇ ನಿರ್ಧರಿಸಲಾಗಿರುತ್ತದೆ.

ನಟನಟಿಯರ ಹಾವ-ಭಾವಗಳು, ಭಂಗಿಗಳು, ಕ್ಯಾಮರಾದ ಮುಂದೆ ಅವರ ಚಲನವಲನಗಳನ್ನು ನಿರ್ದೇಶಕರ ಮಿಕೇಲ್‌ರ ಇಚ್ಛೆಯಂತೆ ನಡೆಯುತ್ತಿತ್ತು. ಯಾವುದೇ ರೀತಿಯ ಗೊಂದಲ, ಬದಲಾವಣೆ ಇರುತ್ತಿರಲಿಲ್ಲ.’

ಮಿಕೇಲ್ ಅವರು ನಿರ್ದೇಶನ ಮಾಡುತ್ತಿದ್ದ ಕಾಲದಲ್ಲಿ ಫಿಲ್ಮ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾರಣದಿಂದಲೇ ಎಲ್ಲವನ್ನು ಮೊದಲೇ ಪ್ಲಾನ್ ಮಾಡಬೇಕಿತ್ತು. ಯಾವುದೇ ಒಂದು ತಪ್ಪಾದರೂ ಅಥವಾ ಅನಗತ್ಯ ಶಾಟ್‌ನಿಂದ ಫಿಲ್ಮ್ ರೀಲ್ ವ್ಯರ್ಥವಾಗುತ್ತಿತ್ತು. ಇದೇ ಕಾರಣದಿಂದ ನಿರ್ದೇಶಕ ಮಿಕೇಲ್ ಅವರಿಗೆ ತಮ್ಮ ಸಿನಿಮಾಗಳ ದೃಶ್ಯಗಳ ಮೇಲಿರುವ ಸ್ಪಷ್ಟತೆ ಮತ್ತು ಹಿಡಿತವನ್ನು ಅವರ ಎಲ್ಲ ಸಿನಿಮಾಗಳಲ್ಲಿ ನೋಡಬಹುದು.

ಮಿಕೇಲ್ ಗ್ರೀಕ್ ಸಿನಿಮಾಲೋಕದಲ್ಲಿ ಮಾಸ್ಟರ್. ಇವರ ಎಲ್ಲ ಸಿನಿಮಾಗಳು ಸಿನಿಮಾ ರಸಿಕರಿಗೆ ರಸದೌತಣವಾದರೆ, ಸಿನಿಮಾ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಕಲಿಸುವ ಪಠ್ಯಪುಸ್ತಕಗಳು.


ಇದನ್ನೂ ಓದಿ: ಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...