“ಮಿಯಾನ್-ಟಿಯಾನ್” ಮತ್ತು “ಪಾಕಿಸ್ತಾನಿ” ಎಂಬ ಪದಗಳನ್ನು ಬಳಸುವುದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಾಗ್ಯೂ, ಈ ಪದಗಳು ಕೆಟ್ಟ ಅಭಿರುಚಿಯದ್ದಾಗಿದೆ ಎಂದು ಅದು ಹೇಳಿದೆ. ‘ಪಾಕಿಸ್ತಾನಿ’ ಎಂದು ಕರೆಯುವುದು
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಜಾರ್ಖಂಡ್‌ನ ಚಾಸ್‌ನ ಉಪ-ವಿಭಾಗೀಯ ಕಚೇರಿಯಲ್ಲಿ ಉರ್ದು ಭಾಷಾಂತರಕಾರ ಮತ್ತು ಮಾಹಿತಿ ಹಕ್ಕು (ಆರ್‌ಟಿಐ) ನ ಕಾರ್ಯಕಾರಿ ಗುಮಾಸ್ತರು ಸಲ್ಲಿಸಿದ ಕ್ರಿಮಿನಲ್ ಪ್ರಕರಣದಿಂದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ. ‘ಪಾಕಿಸ್ತಾನಿ’ ಎಂದು ಕರೆಯುವುದು
ಫೆಬ್ರವರಿ 11 ರ ನ್ಯಾಯಾಲಯದ ಆದೇಶದಲ್ಲಿ, “ಮೇಲ್ಮನವಿದಾರರು ಮಾಹಿತಿದಾರರನ್ನು ‘ಮಿಯಾನ್-ಟಿಯಾನ್’ ಮತ್ತು ‘ಪಾಕಿಸ್ತಾನಿ’ ಎಂದು ಕರೆಯುವ ಮೂಲಕ ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಿಸ್ಸಂದೇಹವಾಗಿ, ಮಾಡಿದ ಹೇಳಿಕೆಗಳು ಕಳಪೆ ಅಭಿರುಚಿಯಿಂದ ಕೂಡಿವೆ.
ಆದಾಗ್ಯೂ, ಇದು ಮಾಹಿತಿದಾರರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದಿಲ್ಲ. ಆದ್ದರಿಂದ, ಮೇಲ್ಮನವಿದಾರರನ್ನು ಸೆಕ್ಷನ್ 298 ಐಪಿಸಿ ಅಡಿಯಲ್ಲಿಯೂ ಬಿಡುಗಡೆ ಮಾಡಲಾಗುತ್ತದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ.” ಎಂದು ಹೇಳಿದೆ. ಐಪಿಸಿಯ ಸೆಕ್ಷನ್ 298 ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶಪೂರ್ವಕ ಉದ್ದೇಶದಿಂದ ಮಾಡಿದ ಪದಗಳು ಅಥವಾ ಸನ್ನೆಗಳ ಬಗ್ಗೆಗಿನ ಅಪರಾಧದ ಬಗ್ಗೆ ಹೇಳುತ್ತದೆ.
ಆರೋಪಿ ಹರಿ ನಂದನ್ ಸಿಂಗ್, ಬೊಕಾರೊದ ಹೆಚ್ಚುವರಿ ಜಿಲ್ಲಾಧಿಕಾರಿಯಿಂದ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿಯೊಂದನ್ನು ಕೋರಿದ್ದರು. ಈ ವೇಳೆ ಅವರಿಗೆ ಮಾಹಿತಿಯನ್ನು ನೀಡಲಾಗಿತ್ತಾದರೂ, ಅದರಿಂದ ಅವರು ತೃಪ್ತರಾಗಿರಲಿಲ್ಲ. ಈ ವೇಳೆ ಅವರು ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಹಾಗಾಗಿ, ಮೇಲ್ಮನವಿ ಪ್ರಾಧಿಕಾರವು ಭಾಷಾಂತರಕಾರರಿಗೆ ಮಾಹಿತಿಯನ್ನು ಮೇಲ್ಮನವಿದಾರರಿಗೆ ವೈಯಕ್ತಿಕವಾಗಿ ಒದಗಿಸುವಂತೆ ನಿರ್ದೇಶಿಸಿತ್ತು.
ನವೆಂಬರ್ 18, 2020 ರಂದು, ಮಾಹಿತಿದಾರರು ಮಾಹಿತಿಯನ್ನು ಹಸ್ತಾಂತರಿಸಲು ಆರೋಪಿಯ ಮನೆಗೆ ಹೋಗಿದ್ದರು. ಈ ವೇಳೆ ಆರೋಪಿ ಆರಂಭದಲ್ಲಿ ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅದಾಗ್ಯೂ, ನಂತರ ಮಾಹಿತಿದಾರರ ಒತ್ತಾಯದ ಮೇರೆಗೆ ಅದನ್ನು ಸ್ವೀಕರಿಸಿದರು. ಈ ವೇಳೆ ಆರೋಪಿ ತನ್ನನ್ನು ಧಾರ್ಮಿಕವಾಗಿ ನಿಂದಿಸಿದ್ದಾನೆ ಮತ್ತು ಕ್ರಿಮಿನಲ್ ಬಲಪ್ರಯೋಗ ಮಾಡಿದ್ದಾನೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದರು.
ತನಿಖೆಯ ನಂತರ, ವಿಚಾರಣಾ ನ್ಯಾಯಾಲಯವು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಆರೋಪಗಳನ್ನು ರೂಪಿಸಲು ಆದೇಶಿಸಿತ್ತು.
ಈ ಕಾರ್ಯವಿಧಾನಗಳನ್ನು ರದ್ದುಗೊಳಿಸುವಂತೆ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್ ಆದೇಶದ ವಿರುದ್ಧ ವ್ಯಕ್ತಿಯ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸೆಕ್ಷನ್ 353 ಹೊರತುಪಡಿಸಿ “ಶಾಂತಿ ಭಂಗವನ್ನು ಉಂಟುಮಾಡುವ ಯಾವುದೇ ಕೃತ್ಯ ಅವನ ಕಡೆಯಿಂದ ಆಗಿಲ್ಲ” ಎಂದು ಹೇಳಿರುವ ಪೀಠವು ಅವರನ್ನು ಉದ್ದೇಶಪೂರ್ವಕ ಅವಮಾನದ ಸೆಕ್ಷನ್ 504ರ ಅಪರಾಧದಿಂದ ಮುಕ್ತಗೊಳಿಸಿದೆ.
“ವಿಚಾರಣಾ ನ್ಯಾಯಾಲಯದ ಆದೇಶವನ್ನು ಸಮರ್ಥಿಸಿಕೊಂಡಿರುವ ಹೈಕೋರ್ಟ್‌ನ ಆದೇಶವನ್ನು ನಾವು ರದ್ದುಗೊಳಿಸಿದ್ದೇವೆ. ಪರಿಣಾಮವಾಗಿ ಮೇಲ್ಮನವಿ ಸಲ್ಲಿಸಿದ ಅರ್ಜಿಯನ್ನು ಅನುಮತಿಸುತ್ತೇವೆ. ಮೇಲ್ಮನವಿ ಸಲ್ಲಿಸಿದವರ ವಿರುದ್ಧ ಆರೋಪಿಸಲಾದ ಎಲ್ಲಾ ಮೂರು ಅಪರಾಧಗಳಿಂದ ಅವರನ್ನು ಬಿಡುಗಡೆ ಮಾಡುತ್ತೇವೆ” ಎಂದು ಅದು ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಂಬೇಡ್ಕರ್-ದಲಿತ ಸಮುದಾಯದ ಅವಹೇಳನ ನಾಟಕ; ಜೈನ್ ಯೂನಿವರ್ಸಿಟಿ ವಿದ್ಯಾರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾ
ಅಂಬೇಡ್ಕರ್-ದಲಿತ ಸಮುದಾಯದ ಅವಹೇಳನ ನಾಟಕ; ಜೈನ್ ಯೂನಿವರ್ಸಿಟಿ ವಿದ್ಯಾರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ವಜಾ

