ಲೈಂಗಿಕ ಹಗರಣದಲ್ಲಿ ಸಿಲುಕಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಅವರ ಬೆಂಬಲಿಗರು ಒಂಟೆಗಳ ಮೆರವಣಿಗೆ ಮಾಡಿ ಗುರವಾರ ಪ್ರತಿಭಟಿಸಿದ್ದಾರೆ.
ಸರ್ಕಾರಿ ಕೆಲಸ ನೀಡುತ್ತೇನೆ ಎಂದು ಪುಸಲಾಯಿಸಿ ಯುವತಿಯನ್ನು ಶಾಸಕ ರಮೇಶ್ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿ ಕಾರಣಕ್ಕಾಗಿ ಅವರ ವಿರುದ್ದ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಜಾರಕಿಹೊಳಿ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಜಾಮೀನು ಸಿಕ್ಕರೂ ಬಿಡುಗಡೆಯಿಲ್ಲ!-ಹೈಕೋರ್ಟ್ ಕದ ತಟ್ಟಿದ ವಿದ್ಯಾರ್ಥಿಗಳು
Supporters of Ramesh jarkiholi take out a camel rally in Belagavi on Thursday, seeking his induction in the state cabinet. Video by Badiger PK pic.twitter.com/klbbVajYdP
— Rishikesh Bahadur D (@Rishiscribe) June 17, 2021
ಅವರ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಯು ಇನ್ನೂ ನಡೆಯುತ್ತಿದೆ. ಅವರಿನ್ನೂ ಪ್ರಕರಣದಿಂದ ಆರೋಪ ಮುಕ್ತವಾಗಿಲ್ಲ. ವಿರೋಧ ಪಕ್ಷಗಳು ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ತನ್ನ ಪ್ರಭಾವ ಬಳಸಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸುತ್ತಲೆ ಇದ್ದಾರೆ. ಈ ನಡುವೆ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟಗಳು ನಡೆಯುತ್ತಿದ್ದ, ನಾಯಕತ್ವ ಬದಲಾವಣೆಯ ಚರ್ಚೆಯಾಗುತ್ತಿದೆ.
ಈ ನಡುವೆ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಬೇಕು ಎಂದು ಅವರ ಬೆಂಬಲಿಗರು ಒಂಟೆಗಳ ಸವಾರಿ ಮಾಡುವ ಮೂಲಕ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಸಮಯಲ್ಲಿ ಜಾರಕಿಹೊಳಿ ಅವರಿಗೆ ನ್ಯಾಯ ಸಿಗಬೇಕು, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿ ಎಂದು ಬೆಂಬಲಿಗರು ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ


